ಜಿಟಿಟಿಸಿ ಡಿಪ್ಲೋಮಾ ಕೋರ್ಸ್‌ಗಳ ಪವೇಶಕ್ಕೆ ಅರ್ಜಿ ಆಹ್ವಾನ

| Published : May 06 2025, 12:22 AM IST

ಜಿಟಿಟಿಸಿ ಡಿಪ್ಲೋಮಾ ಕೋರ್ಸ್‌ಗಳ ಪವೇಶಕ್ಕೆ ಅರ್ಜಿ ಆಹ್ವಾನ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ: ಇಲ್ಲಿನ ಮಾಚೇನಹಳ್ಳಿ ಸಮೀಪದ ನಿಧಿಗೆ ಕೈಗಾರಿಕಾ ಪ್ರದೇಶದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶಾತಿಗಾಗಿ ಎಸ್ಸೆಸ್ಸೆಲ್ಸಿ ಮುಗಿಸಿದ ಆಸಕ್ತ ಯುವಕ-ಯುವಕರಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಮೇ 15 ಕೊನೆಯ ದಿನವಾಗಿದೆ ಎಂದು ತರಬೇತಿ ಕೇಂದ್ರದ ಪ್ರಾಂಶುಪಾಲ ವಿ.ಆರ್.ದೀಪಕ್ ಕುಮಾರ್ ತಿಳಿಸಿದರು.

ಶಿವಮೊಗ್ಗ: ಇಲ್ಲಿನ ಮಾಚೇನಹಳ್ಳಿ ಸಮೀಪದ ನಿಧಿಗೆ ಕೈಗಾರಿಕಾ ಪ್ರದೇಶದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶಾತಿಗಾಗಿ ಎಸ್ಸೆಸ್ಸೆಲ್ಸಿ ಮುಗಿಸಿದ ಆಸಕ್ತ ಯುವಕ-ಯುವಕರಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಮೇ 15 ಕೊನೆಯ ದಿನವಾಗಿದೆ ಎಂದು ತರಬೇತಿ ಕೇಂದ್ರದ ಪ್ರಾಂಶುಪಾಲ ವಿ.ಆರ್.ದೀಪಕ್ ಕುಮಾರ್ ತಿಳಿಸಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು 1972ರಲ್ಲಿ ಅರಂಭಗೊಂಡು ರಾಜ್ಯ ಕೌಶಲ್ಯ ಇಲಾಖೆ ಕೆಳಗಡೆ ಕಾರ್ಯನಿರ್ವಹಿಸುತ್ತಾ ಬರುತ್ತಿದೆ. ರಾಜ್ಯಾದ್ಯಂತ 25 ಶಾಖೆಗಳನ್ನು ಹೊಂದಿದೆ. ಶಿವಮೊಗ್ಗ ನಗರದಲ್ಲಿ 2010ರಿಂದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ಕಾರ್ಯನಿರ್ವಹಿಸುತ್ತಾ ಬಂದಿದ್ದು, ನೂರಾರು ವಿದ್ಯಾರ್ಥಿಗಳಿಗೆ ವಿವಿಧ ಡಿಪ್ಲೋಮೋ ಕೋರ್ಸ್‌ಗಳ ತರಬೇತಿ ನೀಡಿ, ಅವರನ್ನು ಉದ್ಯೋಗಿಗಳನ್ನಾಗಿ ಮಾಡುವಲ್ಲಿ ಶ್ರಮಿಸಿದೆ ಎಂದರು.ಘಟಕದ ಮುಖ್ಯಸ್ಥ ನಾಗರಾಜ್ ಮಾತನಾಡಿ, ಪ್ರಸಕ್ತ ವರ್ಷ ನಮ್ಮ ತರಬೇತಿ ಕೇಂದ್ರದಲ್ಲಿ ಡಿಪ್ಲೋಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್, ಡಿಪ್ಲೋಮಾ ಇನ್ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಡಿಪ್ಲೋಮಾ ಇನ್ ಮೆಕಟ್ರಾನಿಕ್ಸ್ ಎನ್ನುವ ದೀರ್ಘಾವಧಿ ಅಂದರೆ 4 ವರ್ಷ ಅವಧಿಯ ಕೋರ್ಸ್‌ಗಳನ್ನು ಆರಂಭಿಸಿದೆ. ಇವೆಲ್ಲವೂ ಡಿಟಿಎ ಮತ್ತು ಎಐಸಿಟಿಇ ಮಾನ್ಯತೆ ಪಡೆದಿವೆ. ಈ ಕೋರ್ಸ್‌ಗಳಲ್ಲಿ ತರಬೇತಿ ಪಡೆದವರು ಭಾರತದ ಯಾವುದೇ ಕಂಪನಿಗಳಲ್ಲಿ ಕೆಲಸಕ್ಕೆ ಸೇರಬಹುದು ಎಂದು ತಿಳಿಸಿದರು.ಎಸ್ಸೆಸ್ಸೆಲ್ಸಿ ಮುಗಿಸಿದ ಯುವಕ- ಯುವತಿಯರು ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದು, ಮೆರಿಟ್ ಮತ್ತು ರೋಸ್ಟರ್ ಪದ್ಧತಿ ಹಾಗೂ ಶೇ.30 ರಷ್ಟು ವಿದ್ಯಾರ್ಥಿನಿಯರಿಗೆ ಸೀಟು ಕಾಯ್ದಿರಿಸಲಾಗಿದೆ. ಯುವಕರಿಗೆ ಸುಸಜ್ಜಿತವಾದ ವಸತಿ ನಿಲಯವಿದೆ. ಹಾಗೆಯೇ ಶಿವಮೊಗ್ಗ ನಗರದಿಂದ ಬೆಳಗ್ಗೆ 8.30ಕ್ಕೆ ಕಾಲೇಜಿಗೆ, ಸಂಜೆ ಶಿವಮೊಗ್ಗಕ್ಕೆ ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆಯಿದೆ. ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಯಾವುದೇ ಮೂಲೆಯ ಆಸಕ್ತ ಯುವಕ-ಯುವತಿಯರು ಅರ್ಜಿ ಸಲ್ಲಿಸಹುದಾಗಿದೆ ಎಂದರು.

ಅರ್ಹ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಇಲಾಖೆಗಳಿಗೆ ತರಬೇತಿ ಶುಲ್ಕ ಹಿಂದಿರುವಿಕೆ ಮತ್ತು ಶಿಷ್ಯ ವೇತನವಿದೆ. ಐಟಿಐ ಮತ್ತು ಪಿಯುಸಿ ಮುಗಿಸಿದವರಿಗೆ 3ನೇ ಸೆಮಿಸ್ಟರ್ ಡಿಪ್ಲೋಮಾ ಕೋರ್ಸ್‌ಗಳಿಗೆ ನೇರ ಪ್ರವೇಶವಿದೆ. ಅರ್ಜಿ ಸಲ್ಲಿಸಲು ಮೇ 15 ಕೊನೆಯ ದಿನವಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಉಪನ್ಯಾಸಕ ಮಂಜುನಾಥ್ ಇದ್ದರು.