ಸಾರಾಂಶ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ತಾಲೂಕಿನ ಹುಲಿಹಳ್ಳಿ ಬಳಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮೆಗಾ ಮಾರುಕಟ್ಟೆ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಗೊಂದಲ ನಿವಾರಿಸಬೇಕು ಹಾಗೂ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸ್ಥಳೀಯ ಎಪಿಎಂಸಿ ವರ್ತಕರು ನಗರದ ಎಪಿಎಂಸಿ ಕಚೇರಿ ಮುಂಭಾಗದಲ್ಲಿ ಎದುರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಶಾಸಕ ಪ್ರಕಾಶ ಕೋಳಿವಾಡ ಭೇಟಿ ನೀಡಿ ಸಮಾಲೋಚನೆ ನಡೆಸಿದರು.ಈ ಸಮಯದಲ್ಲಿ ಮಾತನಾಡಿದ ಅವರು, ಈಗಾಗಲೇ ಸ್ಥಳೀಯ ವರ್ತಕರ ಬೇಡಿಕೆಗಳನ್ನು ಪೂರೈಸಲು ಸಚಿವರ ಜತೆ ಮಾತುಕತೆ ನಡೆಸಲಾಗಿದೆ. ಸರ್ಕಾರ ಮೊದಲಿಗೆ 50:50 ಅನುಪಾತದಲ್ಲಿ ನಿವೇಶನಗಳ ಹಂಚಿಕೆಗೆ ನಿರ್ಧರಿಸಿತ್ತು. ನಾನು ಕೃಷಿ ಮಾರುಕಟ್ಟೆ ಸಚಿವರ ಜತೆ ಚರ್ಚಿಸಿದ ನಂತರ ಸ್ಥಳೀಯರಿಗೆ ಶೇ.60 ಹಾಗೂ ಹೊರಗಿನವರಿಗೆ ಶೇ.40 ಪ್ರಮಾಣದಲ್ಲಿ ನಿಗದಿ ಪಡಿಸಲಾಗಿದೆ. ಎರಡನೇ ಹಂತದ ವಿಸ್ತರಣೆ ಸಂಪೂರ್ಣ ಸ್ಥಳೀಯರಿಗೆ ಮೀಸಲಿಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ವರ್ತಕರು ಧರಣಿ ಹಿಂದಕ್ಕೆ ಪಡೆದು ಎಲ್ಲರೂ ಅರ್ಜಿಗಳನ್ನು ಪಡೆಯಿರಿ. ಸೋಮವಾರ ಅಧಿವೇಶನದಲ್ಲಿ ನಿಮ್ಮ ಉಳಿದ ಬೇಡಿಕೆಗಳ ಕುರಿತು ಚರ್ಚೆ ಮಾಡುತ್ತೆನೆ ಎಂದರು.
ಇದಕ್ಕೂ ಪೂರ್ವದಲ್ಲಿ ವರ್ತಕರ ಸಂಘದ ಮಾಜಿ ಅದ್ಯಕ್ಷ ವ್ಹಿ.ಪಿ. ಲಿಂಗನಗೌಡ್ರ ಮಾತನಾಡಿ, ನಿವೇಶನ ಹಂಚಿಕೆ ವಿಚಾರವಾಗಿ ಅಧಿಕಾರಿಗಳ ದ್ವಂದ್ವ ನಿಲುವಿನಿಂದ ಸ್ಥಳೀಯ ವರ್ತಕರಿಗೆ ಅನ್ಯಾಯವಾಗಿದೆ. ಬಿ ಬ್ಲಾಕ್‌ನ ಎಲ್ಲಾ 220 ನಿವೇಶನಗಳು ಬ್ಯಾಡಗಿ ವರ್ತಕರ ಪಾಲಾಗಲಿವೆ. ಇದರ ಬಗ್ಗೆ ಶಾಸಕ ಪ್ರಕಾಶ ಕೋಳಿವಾಡ ತಮ್ಮ ನಿರ್ಧಾರ ತಿಳಿಸಬೇಕು ಎಂದರು.ಎಪಿಎಂಸಿ ಕಾರ್ಯದರ್ಶಿ ಎಂ.ವಿ. ಶೈಲಜಾ, ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ, ಎಸ್.ಕೆ. ಉಪ್ಪಿನ, ಬಸವರಾಜ ಹುಲ್ಲತ್ತಿ, ಬಸವರಾಜ ಬಡಿಗೇರ, ಬಿದ್ದಾಡೆಪ್ಪ ಚಕ್ರಸಾಲಿ, ನಾಗರಾಜ ಮೊಟಗಿ, ಶಿವಣ್ಣ ಸುಣಗಾರ, ಹೂವನಗೌಡ ಸೊರಟೂರ, ಸಚಿನ ಲಿಂಗನಗೌಡ್ರ, ಅನಿಲ ಕಲಾಲ, ಎಸ್.ಎಸ್. ಪಾಟೀಲ, ಗುರುಪ್ರಕಾಶ ಜಂಬಗಿ, ಬಸವರಾಜ ಕಂಬಳಿ, ಮಲ್ಲಿಕಾರ್ಜುನ ಕೊಲ್ಲಾಪುರ, ಹುಕುಮಿಚಂದ ಜೈನ, ವೀರೇಶ ಮೊಟಗಿ, ಬಸವರಾಜ ಹುಲ್ಲತ್ತೇರ ಉಪಸ್ಥಿತರಿದ್ದರು.