ದೇವನಹಳ್ಳಿ ಚೆಸ್ ಅಸೋಸಿಯೇಷನ್ ಪದಾಧಿಕಾರಿಗಳ ನೇಮಕ

| Published : Jul 28 2025, 12:30 AM IST

ಸಾರಾಂಶ

ಚೆಸ್ ಕೇವಲ ಕ್ರೀಡೆಯಲ್ಲ, ಆಟಗಾರರ ಜ್ಞಾನಾರ್ಜನೆ ಪ್ರದರ್ಶಿಸಿ ಆಡುವ ಆಟವಾಗಿದೆ. ಚೆಸ್ ಅದೃಷ್ಟ ಅವಲಂಬಿಸಿದ ಆಟವಲ್ಲ, ಆಟಗಾರರ ಆಲೋಚನೆ, ಯೋಜನಾ ಸಾಮರ್ಥ್ಯ ಮತ್ತು ಮುಂದಾಲೋಚನೆಗಳನ್ನು ಅವಲಂಬಿಸಿದ ಆಟವಾಗಿದೆ.

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಿಸಿರುವ ದೇವನಹಳ್ಳಿ ಚೆಸ್ ಅಸೋಸಿಯೇಷನ್ ಸಮಿತಿ ಸರ್ವ ಸದಸ್ಯರು ಒಮ್ಮತದಿಂದ ಗೌರವಾಧ್ಯಕ್ಷರನ್ನಾಗಿ ಎನ್.ಗೋಪಾಲ್, ಅಧ್ಯಕ್ಷರನ್ನಾಗಿ ಮಂಜು.ಕೆ. ರವರನ್ನು ಆಯ್ಕೆ ಮಾಡಿದ್ದಾರೆ. ಉಪಾಧ್ಯಕ್ಷರಾಗಿ ಎಸ್.ಆರ್. ಮುನಿರಾಜು, ಟಿ.ಸಿ.ಎಸ್.ಚಂದ್ರಶೇಖರ್, ಕೇಶವ.ಎಂ., ಅಜಯ್.ಆರ್., ಕಾರ್ಯದರ್ಶಿ.ರವಿ.ಡಿ.ಪಿ., ಖಜಾಂಚಿ ರಘುನಾಥ್.ಆರ್., ಕಾನೂನು ಸಲಹೆಗಾರ ಎನ್.ಕೃಷ್ಣ, ಸದಸ್ಯರಾದ ನಟರಾಜ್, ನಾಗರಾಜು, ನಾಗೇಂದ್ರ, ಎನ್.ಅಣ್ಣಪ್ಪ, ನರೇಂದ್ರ, ವೆಂಕಟೇಶ್, ಧನಂಜಯ್.ಎಚ್ ಆಯ್ಕೆಯಾಗಿದ್ದಾರೆ.

ದೇವನಹಳ್ಳಿ ಚೆಸ್ ಅಸೋಸಿಯೇಷನ್‌ ಅಧ್ಯಕ್ಷ ಮಂಜು ಕೆ.ಮಾತನಾಡಿ, ದೇವನಹಳ್ಳಿಯಲ್ಲಿ ಚೆಸ್ ಅಸೋಸಿಯೇಷನ್ ಪ್ರಾರಂಭಿಸಿ, ಚದುರಂಗ ಆಟದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಅನೇಕ ವರ್ಷಗಳ ಕನಸು ಇಂದು ನನಸಾಗಿದೆ. ಚೆಸ್ ಕೇವಲ ಕ್ರೀಡೆಯಲ್ಲ, ಆಟಗಾರರ ಜ್ಞಾನಾರ್ಜನೆ ಪ್ರದರ್ಶಿಸಿ ಆಡುವ ಆಟವಾಗಿದೆ. ಚೆಸ್ ಅದೃಷ್ಟ ಅವಲಂಬಿಸಿದ ಆಟವಲ್ಲ, ಆಟಗಾರರ ಆಲೋಚನೆ, ಯೋಜನಾ ಸಾಮರ್ಥ್ಯ ಮತ್ತು ಮುಂದಾಲೋಚನೆಗಳನ್ನು ಅವಲಂಬಿಸಿದ ಆಟವಾಗಿದೆ. ಚೆಸ್ ಪ್ರಪಂಚದ ಅತ್ಯಂತ ಜನಪ್ರಿಯ ಆಟಗಳಲ್ಲಿಯೂ ಒಂದಾಗಿದೆ. ಚೆಸ್ ಪಂದ್ಯಾವಳಿಯನ್ನು ಆಗಸ್ಟ್ ೧೭ ರಂದು ದೇವನಹಳ್ಳಿ ಪಟ್ಟಣದ ಸರ್ಕಾರಿ ಮಾದರಿ ಹೆಣ್ಣುಮಕ್ಕಳ ಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದು, ಆಸಕ್ತ ಆಟಗಾರರು ಪ್ರವೇಶ ಶುಲ್ಕ ಭರಿಸಿ ನೋಂದಾಯಿಸಿಕೊಳ್ಳತಕ್ಕದ್ದು. ವಿಜೇತರಿಗೆ ನಗದು ಹಾಗೂ ಟ್ರೋಪಿ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ, ಕೃಷಿ ಕ್ಷೇತ್ರದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿವನಾಪುರ ರಮೇಶ್, ಬೆಂಗಳೂರಿನ ತೀರ್ಪುಗಾರರು ಭಾಗವಹಿಸಲಿದ್ದಾರೆ.

ಧನಂಜಯ್ ಎಚ್. ದೇವನಹಳ್ಳಿ ಹಾಗೂ ಚೆಸ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಹಾಜರಿದ್ದರು.