ವಿದ್ಯಾರ್ಥಿಗಳ ಕಲಿಕೆಯಲ್ಲಿ ಅಬಾಕಸ್‌ನ ಪಾತ್ರ ಪ್ರಶಂಸನೀಯ: ಜಿ.ವಿ.ರಾಜಣ್ಣ

| Published : Feb 07 2024, 01:46 AM IST

ವಿದ್ಯಾರ್ಥಿಗಳ ಕಲಿಕೆಯಲ್ಲಿ ಅಬಾಕಸ್‌ನ ಪಾತ್ರ ಪ್ರಶಂಸನೀಯ: ಜಿ.ವಿ.ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಚಿಗುರು ಅಬಾಕಸ್ ಅಕಾಡೆಮಿಯಿಂದ ಚಳ್ಳಕೆರೆಯ ಗಾಯಿತ್ರಿ ಕಲ್ಯಾಣಮಂಟಪದಲ್ಲಿ ರಾಜ್ಯಮಟ್ಟದ ಅಬಾಕಸ್ ಪದವಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ರಾಜ್ಯಮಟ್ಟದ ವೇದ ಗಣಿತ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ವಿದ್ಯಾರ್ಥಿಗಳ ಕಲಿಕೆಯಲ್ಲಿ ಕಷ್ಟವಾದ ಗಣಿತ ವಿಷಯವನ್ನು ಎಲ್ಲಾ ವಿದ್ಯಾರ್ಥಿಗಳು ಸುಗಮವಾಗಿ ಅರ್ಥವಾಗಿಸುವಲ್ಲಿ ಅಬಾಕಸ್ ತರಬೇತಿ ಯಶಸ್ವಿ ಪ್ರಯೋಗವಾಗಿದೆ. ವಿಶೇಷವಾಗಿ ಇಲ್ಲಿನ ಚಿಗುರು ಅಬಾಕಸ್ ಅಕಾಡೆಮಿ ಸತತಸವಾಗಿ ನಾಲ್ಕು ವರ್ಷಗಳಿಂಧ ರಾಜ್ಯಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಬಾಪೂಜಿ ವಿದ್ಯಾ ಸಂಸ್ಥೆಯ ಕನ್ನಡ ಪ್ರಾಧ್ಯಾಪಕ ಡಾ.ಜಿ.ವಿ.ರಾಜಣ್ಣ ತಿಳಿಸಿದರು.

ಅವರು, ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಚಿಗುರು ಅಬಾಕಸ್ ಅಕಾಡೆಮಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಅಬಾಕಸ್ ಪದವಿ ಪ್ರಧಾನ ಸಮಾರಂಭ ಹಾಗೂ ನಾಲ್ಕನೇ ರಾಜ್ಯ ಮಟ್ಟದ ವೇದಗಣಿತ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಚಿತ್ರದುರ್ಗ, ದಾವಣಗೆರೆ, ತುಮಕೂರು, ಕುಂದಾಪುರ, ಸಿರಿಸಿ, ಹೊನ್ನಾಳಿ, ಬೇಲೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಚಿಗುರು ಅಬಾಕಸ್ ಅಕಾಡೆಮಿ ತನ್ನದೇಯಾದ ವಿಶೇಷ ಪರಿಶ್ರಮದಿಂದ ಇಂದು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಅಂತರಾಷ್ಟ್ರೀಯ ಮಟ್ಟ ದಲ್ಲಿ ಖ್ಯಾತಿಗಳಿಸಲಿ ಎಂದು ಶುಭಹಾರೈಸಿದರು.

ಮೊಳಕಾಲ್ಮೂರು ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಎ.ರಾಜಣ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧನೆ ಮಾಡುವಲ್ಲಿ ಅಬಾಕಸ್ ಯಶಸ್ವಿ ಹೆಜ್ಜೆ ಇಟ್ಟಿದೆ. ಕೇವಲ ಕೇಲವು ವಿದ್ಯಾರ್ಥಿಗಳು ಅಬಾಕಸ್‌ಗೆ ದಾಖಲಾಗುತ್ತಿದ್ದರು. ಈಗ ರಾಜ್ಯಮಟ್ಟದಿಂದ ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿರುವುದು ಸಂತಸ ತಂದಿದೆ ಎಂದರು. ರಾಜ್ಯಮಟ್ಟದ ವೇದಗಣಿತ ಸ್ಪರ್ಧೆಯಲ್ಲಿ ಕೃತಿ, ತ್ರಿಷಿಕಾ,ಪ್ರೀತಮ್, ರಿತ್ವಿಕ್ ಎಸ್.ನಾಯ್ಕ,ಅನುಷ್ಕ, ಸುಪ್ರೀತಾ ಮುಂತಾದವರು ಪ್ರಶಸ್ತಿ ಪಡೆದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಅರುಣಾ, ರಾಘವೇಂದ್ರ, ಸಹ ಶಿಕ್ಷಕ ಚನ್ನಬಸಪ್ಪ, ನಾಗೇಂದ್ರಪ್ಪ, ಗಣೇಶ್, ಹರೀಶ್, ಕಿಶೋರ್, ಸಿದ್ದೇಶ್ ಮುಂತಾದವರು ಭಾಗವಹಿಸಿದ್ದರು.