ಸಾರಾಂಶ
ಜೆಬಿಎಫ್-ಜಿಎಂಪಿಎಲ್(ಗೇಲ್) ಸಮಸ್ಯೆಯನ್ನು ಕೇಂದ್ರ ಸರ್ಕಾರ ಕೇವಲ 40 ದಿನಗಳಲ್ಲಿ ಬಗೆಹರಿಸಿ ಕೊಟ್ಟಿರುವ ಹಿನ್ನೆಲೆಯಲ್ಲಿ ಕ್ಯಾ. ಚೌಟ ಅವರು ಮಂಗಳೂರಿನ ಜೆಬಿಎಫ್ ಪಿಡಿಎಫ್ ಉದ್ಯೋಗಸ್ಥರ ಪರವಾಗಿ ಬುಧವಾರ ದೆಹಲಿಯಲ್ಲಿ ಪೆಟ್ರೋಲಿಯಂ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ವಿಶೇಷ ಆರ್ಥಿಕ ವಲಯ(ಎಂಎಸ್‌ಇಝೆಡ್)ದಲ್ಲಿ ಜೆಬಿಎಫ್ ಕಂಪೆನಿ ಸ್ಥಾಪನೆಗೆ ಜಮೀನು ಕೊಟ್ಟಿದ್ದ ಪಿಡಿಎಫ್ ಉದ್ಯೋಗಸ್ಥರನ್ನು ಜಿಎಂಪಿಎಲ್(ಗೇಲ್) ಕಂಪೆನಿಯಲ್ಲಿ ಮುಂದುವರಿಸುವುದಕ್ಕೆ ಅವಕಾಶ ಕಲ್ಪಿಸಿ ಬಹುದಿನಗಳ ಗಂಭೀರ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಲು ಕಾರಣರಾದ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಸತತ ಪ್ರಯತ್ನವನ್ನು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್‌ದೀಪ್ ಸಿಂಗ್ ಪುರಿ ಶ್ಲಾಘಿಸಿದ್ದಾರೆ.ಜೆಬಿಎಫ್-ಜಿಎಂಪಿಎಲ್(ಗೇಲ್) ಸಮಸ್ಯೆಯನ್ನು ಕೇಂದ್ರ ಸರ್ಕಾರ ಕೇವಲ 40 ದಿನಗಳಲ್ಲಿ ಬಗೆಹರಿಸಿ ಕೊಟ್ಟಿರುವ ಹಿನ್ನೆಲೆಯಲ್ಲಿ ಕ್ಯಾ. ಚೌಟ ಅವರು ಮಂಗಳೂರಿನ ಜೆಬಿಎಫ್ ಪಿಡಿಎಫ್ ಉದ್ಯೋಗಸ್ಥರ ಪರವಾಗಿ ಬುಧವಾರ ದೆಹಲಿಯಲ್ಲಿ ಪೆಟ್ರೋಲಿಯಂ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ.ಈ ಬಗ್ಗೆ ಖುದ್ದು ಸಚಿವ ಹರ್‌ದೀಪ್ ಸಿಂಗ್ ಪುರಿ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ‘ಮಂಗಳೂರಿನ ಎಂಎಸ್‌ಇಝೆಡ್‌ನಲ್ಲಿ ಗೇಲ್ ಮಂಗಳೂರು ಪೆಟ್ರೋಕೆಮಿಕಲ್ಸ್(ಜಿಎಂಪಿಎಲ್), ಜೆಬಿಎಫ್‌ನ್ನು ಸ್ವಾಧೀನಪಡಿಸಿದ ಬಳಿಕ 115 ಜೆಬಿಎಫ್ ಪಿಡಿಎಫ್ ಕುಟುಂಬಸ್ಥರ ಉದ್ಯೋಗ ಮುಂದುವರಿಸುವುದಕ್ಕೆ ಸಮಸ್ಯೆಯಾಗಿತ್ತು. ಈ ಗಂಭೀರ ಸಮಸ್ಯೆ ಬಗ್ಗೆ ಕ್ಯಾ. ಚೌಟ ಅವರು ನನ್ನ ಬಳಿ ನಿರಂತರ ಫಾಲೋಅಪ್ ಮಾಡಿ ಬಹಳ ವರ್ಷಗಳಿಂದ ಬಗೆಹರಿಯದೆ ಬಾಕಿಯಾಗಿದ್ದ ಈ ಪಿಡಿಎಫ್ ಕುಟುಂಬಸ್ಥರ ಸಂಕಷ್ಟವನ್ನು ಆದ್ಯತೆ ಮೇರೆಗೆ ಬಹರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಚಿವ ಹರ್‌ದೀಪ್ ಸಿಂಗ್ ಪುರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.