ಸಾರಾಂಶ
ರೈತರ ಹೆಸರು ಹೇಳಿಕೊಂಡು ಅಕ್ರಮವಾಗಿ ಕೆರೆಯಲ್ಲಿರುವ ಮಣ್ಣನ್ನು ಸಾಗಾಟ ಮಾಡುವುದರಿಂದ ಕೆರೆಯ ಸ್ವರೂಪವೇ ಹಾಳಾಗುತ್ತಿದೆ, ಯಾರೂ ಕೂಡ ಮಣ್ಣನ್ನು ತೆಗೆಯದಂತೆ ಸೂಚಿಸಲಾಗಿದ್ದು, ಯಾರಾದರೂ ಮಣ್ಣು ಸಾಗಿಸುವುದು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಿ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಹೊಳವನಹಳ್ಳಿ
ಅಕ್ರಮವಾಗಿ ಕೆರೆಗಳಲ್ಲಿ ಮಣ್ಣು ತೆಗೆದರೆ ಅಂತವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ರಿಗೆ ಸೂಚನೆ ನೀಡಲಾಗಿದೆ. ಮಣ್ಣನ್ನು ತೆಗೆಯುವುದರಿಂದ ಕೆರೆಯ ಸ್ವರೂಪವೇ ಹಾಳಾಗಿ ಜಾನುವಾರುಗಳಿಗೆ, ರೈತರಿಗೆ ನೀರಿನ ಕೊರತೆ ಉಂಟಾಗುತ್ತದೆ ಎಂದು ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.ಕೊರಟಗೆರೆ ತಾಲೂಕಿನ ಬುಕ್ಕಾಪಟ್ಟಣ, ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ಅವರಣದಲ್ಲಿ ಮೇವಿನ ಬ್ಯಾಂಕ್‌ಗೆ ಭೇಟಿ ನೀಡಿ ಅವರು ಮಾತನಾಡಿದರು.ರೈತರ ಹೆಸರು ಹೇಳಿಕೊಂಡು ಅಕ್ರಮವಾಗಿ ಕೆರೆಯಲ್ಲಿರುವ ಮಣ್ಣನ್ನು ಸಾಗಾಟ ಮಾಡುವುದರಿಂದ ಕೆರೆಯ ಸ್ವರೂಪವೇ ಹಾಳಾಗುತ್ತಿದೆ, ಯಾರೂ ಕೂಡ ಮಣ್ಣನ್ನು ತೆಗೆಯದಂತೆ ಸೂಚಿಸಲಾಗಿದ್ದು, ಯಾರಾದರೂ ಮಣ್ಣು ಸಾಗಿಸುವುದು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಿ ಎಂದು ತಿಳಿಸಿದರು.ಬ್ಯಾಂಕ್, ಮೈಕ್ರೋ ಫೈನಾನ್ಸ್ ಸಿಬ್ಬಂದಿ ರೈತರ ಹಾಗೂ ಕೂಲಿ ಕಾರ್ಮಿಕರ ಮೇಲೆ ಹಣಕ್ಕೆ ಒತ್ತಾಯ ಮಾಡುವಂತಿಲ್ಲ, ಒಂದು ವೇಳೆ ಒತ್ತಾಯಿಸಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮಧುಗಿರಿ ಉಪವಿಭಾಗಾಧಿಕಾರಿ ಗೂಟೂರು ಶಿವಪ್ಪ, ತಹಸೀಲ್ದಾರ್ ಮಂಜುನಾಥ್, ಪಶು ಸಂಗೋಪನೆ ವೈದ್ಯ ದತ್ತಣ್ಣ, ಕಂದಾಯ ನಿರೀಕ್ಷಕ ಅಧಿಕಾರಿ ಜಯಪ್ರಕಾಶ್, ಗ್ರಾಮ ಲೆಕ್ಕಾಧಿಕಾರಿಗಳಾದ ಭಾನುಪ್ರಕಾಶ್, ಸಲ್ಮಾನ್, ಬಸವರಾಜು, ಜಯನಂದ್, ಸಣ್ಣರಂಗಪ್ಪ, ಮೂರ್ತಿ, ರಂಗಪ್ಪ, ಲೋಕೇಶ್, ರಘು ಸೇರಿದಂತೆ ಇತರರು ಇದ್ದರು.