ಅಂಜನಾದ್ರಿ ಸಮಗ್ರ ಅಭಿವೃದ್ಧಿಗೆ ₹250 ಕೋಟಿ ಅನುದಾನಕ್ಕೆ ಅನುಮೋದನೆ : ಜನಾರ್ದನ ರೆಡ್ಡಿ

| N/A | Published : Feb 10 2025, 01:48 AM IST / Updated: Feb 10 2025, 01:11 PM IST

ಅಂಜನಾದ್ರಿ ಸಮಗ್ರ ಅಭಿವೃದ್ಧಿಗೆ ₹250 ಕೋಟಿ ಅನುದಾನಕ್ಕೆ ಅನುಮೋದನೆ : ಜನಾರ್ದನ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಐತಿಹಾಸಿಕ ಪ್ರಸಿದ್ಧ ಹನುಮ ಜನ್ಮಸ್ಥಳ ಅಂಜನಾದ್ರಿ ಪ್ರದೇಶ ಅಭಿವೃದ್ಧಿಗೆ ಸರ್ಕಾರ 250 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದೆ.

 ಗಂಗಾವತಿ : ಐತಿಹಾಸಿಕ ಪ್ರಸಿದ್ಧ ಹನುಮ ಜನ್ಮಸ್ಥಳ ಅಂಜನಾದ್ರಿ ಪ್ರದೇಶ ಅಭಿವೃದ್ಧಿಗೆ ಸರ್ಕಾರ ₹250 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ತಾಲೂಕಿನ ಆನೆಗೊಂದಿಯಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿವಿಧ ಯೋಜನೆಯಡಿಯಲ್ಲಿ ₹250 ಕೋಟಿ ಅನುದಾನ ಬಂದಿದ್ದು, ಇದರಲ್ಲಿ ಆಂಜನಾದ್ರಿ ದೇವಾಲಯದ ಸುತ್ತ ಮಂಟಪ, ಪ್ರಸಾದ ನಿಲಯ, ಪ್ರದಕ್ಷಿಣೆ ಪಥ, ವಾಲ್ಮೀಕಿ ಮಂಟಪ, ಸ್ನಾನಘಟ್ಟ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.

ಆಂಜನಾದ್ರಿ ದೇವಾಲಯ ಅಭಿವೃದ್ಧಿಯಾಗುವುದರಿಂದ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ಆನೆಗೊಂದಿ ಸೇರಿದಂತೆ ಸುತ್ತಲಿನ ಭಾಗದ ಜನರಿಗೆ ಉದ್ಯೋಗ, ವ್ಯಾಪಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಆನೆಗೊಂದಿ ಭಾಗದ ಗ್ರಾಮಗಳ ಅಂದಾಜು ₹51.01ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೂ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭ ತಹಸೀಲ್ದಾರರಾದ ಯು. ನಾಗರಾಜ್, ಆನೆಗೊಂದಿ ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ್, ಮಂಜಮ್ಮ ಲೋಕೇಶ್, ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ, ಟಿ.ಜಿ. ಬಾಬು, ಮಂಜುನಾಥ್ ಕಲಾಲ್, ಲಕ್ಷ್ಮಣ ನಾಯಕ್, ಬಾಬು ರೆಡ್ಡಿ, ಶ್ರೀನಿವಾಸ್ ಕೊರಮ್ಮ ಕ್ಯಾಂಪ್, ಮನೋಹರ್ ಗೌಡ ಹೇರೂರು, ಯಮನೂರ್ ಚೌಡ್ಕಿ, ವೀರೇಶ್ ಬಲಕುಂದಿ, ವೆಂಕಟೇಶ್ ಜಬ್ಬಲಗುಡ್ಡ, ನಾಗರಾಜ್ ಚಳಗೇರಿ, ಮಹಿಳಾ ಮುಖಂಡರಾದ ರಾಜೇಶ್ವರಿ ಹಾಗೂ ಕಾರ್ಯಕರ್ತರು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.