ಬೆಟ್ಟದಮಲ್ಲೇಶ್ವರ ಗುಡ್ಡದಲ್ಲಿ ಕೆರೆ ನಿರ್ಮಾಣಕ್ಕೆ ಬ್ಯಾಡಗಿ ಪುರಸಭೆ ಅನುಮೋದನೆ

| Published : Oct 16 2024, 12:38 AM IST

ಬೆಟ್ಟದಮಲ್ಲೇಶ್ವರ ಗುಡ್ಡದಲ್ಲಿ ಕೆರೆ ನಿರ್ಮಾಣಕ್ಕೆ ಬ್ಯಾಡಗಿ ಪುರಸಭೆ ಅನುಮೋದನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಟ್ಟದಮಲ್ಲೇಶ್ವರ ಗುಡ್ಡದಲ್ಲಿನ ನೀರು ನಿಲ್ಲಿಸುವ ಕೆಲಸವಾಗಬೇಕಾಗಿದೆ. ಹೀಗಾಗಿ ಎರಡೂ ಗುಡ್ಡಗಳ ನಡುವೆ ಬೃಹತ್ ಕೆರೆಯೊಂದನ್ನು ನಿರ್ಮಿಸುವ ಉದ್ದೇಶದಿಂದ ಡಿಪಿಆರ್ ಮಾಡುವುದೂ ಸೇರಿದಂತೆ ರು.50 ಲಕ್ಷ ಮೀಸಲಿಡುವುದಾಗಿ ಸೋಮವಾರ ಪುರಸಭೆ ಆಯೋಜಿಸಿದ್ದ ತುರ್ತು ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ತಿಳಿಸಿದರು.

ಬ್ಯಾಡಗಿ: ಮೊನ್ನೆ ಮಳೆಯಿಂದಾದ ಅನಾಹುತದಿಂದ ಸಾರ್ವಜನಿಕರನ್ನು ರಕ್ಷಿಸುವ ಉದ್ದೇಶದಿಂದ ಶಾಶ್ವತ ಪರಿಹಾರಕ್ಕಾಗಿ ಬೆಟ್ಟದಮಲ್ಲೇಶ್ವರ ಗುಡ್ಡದಲ್ಲಿನ ನೀರು ನಿಲ್ಲಿಸುವ ಕೆಲಸವಾಗಬೇಕಾಗಿದೆ. ಹೀಗಾಗಿ ಎರಡೂ ಗುಡ್ಡಗಳ ನಡುವೆ ಬೃಹತ್ ಕೆರೆಯೊಂದನ್ನು ನಿರ್ಮಿಸುವ ಉದ್ದೇಶದಿಂದ ಡಿಪಿಆರ್ ಮಾಡುವುದೂ ಸೇರಿದಂತೆ ರು.50 ಲಕ್ಷ ಮೀಸಲಿಡುವುದಾಗಿ ಸೋಮವಾರ ಪುರಸಭೆ ಆಯೋಜಿಸಿದ್ದ ತುರ್ತು ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ತಿಳಿಸಿದರು.

ಅಂತರ್ಜಲ ಹೆಚ್ಚಿಸುವುದು ಸೇರಿದಂತೆ ರಾಜ ಕಾಲುವೆ ಮಾಡುತ್ತಿರುವ ಅನಾಹುತ ಅಷ್ಟಿಷ್ಟಲ್ಲ. ಹೀಗಾಗಿ ರಾಜ ಕಾಲುವೆ ಆರಂಭಕ್ಕೆ ಶಾಸಕರ ಬಳಿ ಮನವಿ ಮಾಡಲಾಗಿದೆ. ಅಪಾಯಕಾರಿ ನೀರನ್ನು ತಡೆಗಟ್ಟುವ ನಿಟ್ಟಿನಲ್ಲಿ ದಿಟ್ಟ ಕ್ರಮಗಳು ಅನಿವಾರ್ಯವಾಗಿದ್ದು ಸುಮಾರು 5 ಲಕ್ಷ ರು. ವೆಚ್ಚದಲ್ಲಿ ಡಿಪಿಆರ್ ಮಾಡಲು ಸೂಚಿಸಲಾಗಿದೆ. ಇನ್ನೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನಿಂದ ಬೃಹತ್ ಕೆರೆಯೊಂದನ್ನು ಬ್ಯಾಡಗಿ ಪಟ್ಟಣದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ನಿರ್ವಹಣೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಶಾಸಕರಿಂದ ರು.1 ಕೋಟಿ: ಬಸವರಾಜ ಛತ್ರದ ಮಾತನಾಡಿ, ಈ ಮೊದಲು ಗುಡ್ಡದ ನೀರು ಬಸವನಕಟ್ಟೆ ಕೆರೆ, ಕುಡಿಯುವ ಹೊಂಡ, ರಾಮನಕಟ್ಟೆ ಕೆರೆ ಹೀಗೆ 3 ವಿಭಾಗದಲ್ಲಿ ವಿಂಗಡಣೆಯಾಗುತ್ತಿತ್ತು. ಬಳಿಕ ರಾಜ ಕಾಲುವೆ ಮಾರ್ಗವಾಗಿ ಮಲ್ಲೂರ ರಸ್ತೆ ಮೂಲಕ ಹಾವೇರಿ ತಾಲೂಕು ಹೊಂಬರಡಿ ಕೆರೆಯನ್ನು ತಲುಪುತ್ತಿತ್ತು. ಆದರೆ ಇತ್ತೀಚೆಗೆ ಗುಡ್ಡದ ಮೇಲಿನ ನೀರು ಯಾವುದೇ ಕೆರೆಗಳಿಗೆ ಹೋಗುತ್ತಿಲ್ಲ, ಸುರಿಯುತ್ತಿರುವ ಅಕಾಲಿಕವಾಗಿ ಮಳೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೇ ಅನಾಹುತ ತಪ್ಪಿದ್ದಲ್ಲ ಮಾನ್ಯ ಶಾಸಕರು ಸಹ ರು.1 ಕೋಟಿ ಅನುದಾನ ನೀಡುವುದಾಗಿ ತಿಳಿಸಿದ್ದು ಗುಡ್ಡದ ಮೇಲೆ ಕೆರೆಯನ್ನು ನಿರ್ಮಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ವಾರ್ಡಗಳಲ್ಲಿ ಗಿಡಗಳನ್ನು ನೆಡಲು ಕ್ರಮಕೈಗೊಳ್ಳಿ: ಉಪಾಧ್ಯಕ್ಷ ಸುಭಾಸ್ ಮಾಳಗಿ ಮಾತನಾಡಿ, ಬಹುತೇಕ ವಾರ್ಡ್‌ಗಳಲ್ಲಿ ಪರಿಸರ ಉಳಿಸುವ ಕುರಿತು ಕ್ರಮಗಳಾಗಿಲ್ಲ, ಅರಣ್ಯ ಹಾಗೂ ತೋಟಗಾರಿಕೆ ಇಲಾಖೆ ಮೂಲಕ ವಿವಿಧ ಜಾತಿಯ ಗಿಡಗಳನ್ನು ನೆಡುವಂತಹ ಕೆಲಸಕ್ಕೆ ಮುಂದಾಗಬೇಕು, ಪ್ರತಿ ವಾರ್ಡ್‌ಗಳಲ್ಲಿ ಗಿಡಗಳನ್ನು ಬೆಳೆಸಿ ಉಳಿಸುವ ಕುರಿತು ಆಸಕ್ತರ ಮಾಹಿತಿಯನ್ನು ಪಡೆದು ಸಭೆಗಳನ್ನು ನಡೆಸಿ, ಗಿಡಗಳನ್ನು ನಿರ್ವಹಣೆ ಮಾಡಲು ಸಂಬಂಧಿಸಿದ ವಾರ್ಡ್‌ ಸದಸ್ಯರ ನೇತೃತ್ವದಲ್ಲಿ ಸಭೆ ನಡೆಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಕಲಾವತಿ ಬಡಿಗೇರ, ಗಾಯತ್ರಿ ರಾಯ್ಕರ, ಸರೋಜಾ ಉಳ್ಳಾಗಡ್ಡಿ, ಹನುಮಂತಪ್ಪ ಮ್ಯಾಗೇರಿ, ಫಕ್ಕೀರಮ್ಮ ಛಲವಾದಿ, ಮೆಹಬೂಬ್ ಅಗಸನಹಳ್ಳಿ, ಮಲ್ಲಮ್ಮ ಪಾಟೀಲ, ಕವಿತಾ ಸೊಪ್ಪಿನಮಠ, ಈರಣ್ಣ ಬಣಕಾರ, ವಿನಯ ಹಿರೇಮಠ, ಶಿವರಾಜ ಅಂಗಡಿ, ರಫೀಕ್ ಮುದ್ಗಲ್, ಮಂಗಳ ಗೆಜ್ಜಳ್ಳಿ, ಜಮೀಲಾ ಹೆರ್ಕಲ್ ಮುಖ್ಯಾಧಿಕಾರಿ ವಿನಯಕುಮಾರ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.