ರಾಜ್‌ ಬಂಗಾರವಾದರೆ ಅಪ್ಪು ಅಪರಂಜಿ,

| Published : Mar 23 2025, 01:30 AM IST

ಸಾರಾಂಶ

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಅಪ್ಪು 13 ವರ್ಷಗಳ ನಂತರ ನಾಯಕ ನಟನಾಗಿ ಚಿತ್ರರಂಗಕ್ಕೆ ಮರಳಿದರು.

ಕನ್ನಡಪ್ರಭ ವಾರ್ತೆ ಮೈಸೂರುಡಾ.ರಾಜ್‌ಕುಮಾರ್‌ ಬಂಗಾರವಾದರೆ ಅಪ್ಪು ಅಪರಂಜಿ ಎಂದು ಕವಿ ಜಯಪ್ಪ ಹೊನ್ನಾಳಿ ಬಣ್ಣಿಸಿದರು.ಡಾ.ರಾಜ್‌ಕುಮಾರ್‌ ಕಲಾ ಸೇವಾ ಟ್ರಸ್ಟ್‌ ಡಾ.ಪುನೀತ್‌ ರಾಜ್‌ಕುಮಾರ್‌ ಅವರ 50ನೇ ವರ್ಷದ ಹುಟ್ಟುಹಬ್ಬ ಅಂಗವಾಗಿ ಜಗನ್ಮೋಹನ ಅರಮನೆಯಲ್ಲಿ ಶನಿವಾರ ಏರ್ಪಡಿಸಿದ್ದ ಅಪ್ಪು ವೈಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಡಾ.ರಾಜ್‌ಕುಮಾರ್‌ ತಂದೆಗೆ ತಕ್ಕ ಮಗನಾದರೆ ಅಪ್ಪು ತಾಯಿಗೆ ತಕ್ಕ ಮಗನಾಗಿದ್ದರು ಎಂದರು.ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಅಪ್ಪು 13 ವರ್ಷಗಳ ನಂತರ ನಾಯಕ ನಟನಾಗಿ ಚಿತ್ರರಂಗಕ್ಕೆ ಮರಳಿದರು. ಅವರ ನಟನೆಯ ಹತ್ತು ಚಿತ್ರಗಳು ಶತದಿನೋತ್ಸವ ಆಚರಿಸಿದವು. ಬೇರೆ ಬೇರೆ ಭಾಷೆಗಳಿಗೆ ಹೋಲಿಸಿದರೂ ಬೇರೆ ಯಾವೊಬ್ಬ ನಟನಿಗೂ ಈ ರೀತಿಯ ಶ್ರೇಯಸ್ಸು ಸಿಕ್ಕಿರಲಿಲ್ಲ ಎಂದರು.ಕೋವಿಡ್‌ ಸಂದರ್ಭದಲ್ಲಿ ಅಪ್ಪು ನೂರಾರು ಕಲಾವಿದರಿಗೆ ನೆರವಾಗಿದ್ದಾರೆ. ಅವರ ಸಾಯುವ ತನಕ ಈ ವಿಚಾರ ಯಾರಿಗೂ ಗೊತ್ತಾಗದಂತೆ ನೋಡಿಕೊಂಡಿದ್ದರು. ಹೀಗಾಗಿ ಅಪ್ಪು ಯಾವಾಗಲೂ ಜನಮಾನಸದಲ್ಲಿ ನೆಲೆಯಾಗಿರುತ್ತಾರೆ ಎಂದರು.ಹಿರಿಯ ಸಮಾಜ ಸೇವಕ ಕೆ. ರಘುರಾಂ ಮಾತನಾಡಿ, ಪುನೀತ್‌ ರಾಜ್‌ಕುಮಾರ್‌ ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಹೆಸರು ಮಾಡಿದ್ದರು. ಅವರ ಅಭಿನಯದ ನಾನೇ ರಾಜಕುಮಾರ ಚಿತ್ರವನ್ನು ನೋಡಿ ಪ್ರಭಾವಿತರಾಗಿ ಎಷ್ಟೋ ಮಂದಿ ವೃದ್ಧಾಶ್ರಮದಿಂದ ತಂದೆ- ತಾಯಿಯನ್ನು ವಾಪಸ್‌ ಮನೆಗೆ ಕರೆ ತಂದರು ಎಂದು ಸ್ಮರಿಸಿದರು. ಈ ನಟ ಇನ್ನೂ ಹಲವಾರು ವರ್ಷಗಳ ಕಾಲ ನಮ್ಮ ನಡುವೆ ಇರಬೇಕಿತ್ತು. ತಾತ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ, ತಂದೆ ಡಾ.ರಾಜ್‌ಕುಮಾರ್‌ ಅವರನ್ನು ಸೇರಿಕೊಳ್ಳಲು ತುರ್ತಾಗಿ ನಿರ್ಗಮಿಸಿಬಿಟ್ಟರು ಎಂದು ಭಾವುಕರಾಗಿ ಹೇಳಿದರು.ಮೇಲುಕೋಟೆ ವೆಂಗೀಪುರ ಮಠದ ಶ್ರೀ ಇಳೈ ಆಳ್ವಾರ್‌ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ನಗರಪಾಲಿಕೆ ಗುತ್ತಿಗೆದಾರ ಸಂಘದ ಉದಯ್‌ ಕುಮಾರ್‌, ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಪೈ.ಎನ್‌. ಚಂದ್ರಶೇಖರ್‌, ಶ್ರೀನಿವಾಸ್‌, ಕಲಾ ಪೋಷಕರಾದ ಸ್ವಾಭಿಮಾನಿ ಶಂಕರ್‌, ಎಸ್‌.ಎ. ಮಾರುತಿ, ವಕೀಲ ಚಂದ್ರಶೇಖರ್‌ ಎಸ್‌.ಎ. ಮಾರುತಿ ಮುಖ್ಯ ಅತಿಥಿಗಳಾಗಿದ್ದರು. ಟ್ರಸ್ಟಿನ ಸಂಸ್ಥಾಪಕ ಮೈಸೂರು ಜಯರಾಂ ಸ್ವಾಗತಿಸಿದರು.---ಬಾಕ್ಸ್‌, . ರಂಜಿಸಿದ ಹಾಡುಗಳುಮೈಸೂರು ಜಯರಾಂ ಅವರ ನೇತೃತ್ವದಲ್ಲಿ ಮಂಜು, ರಾಮದಾಸ್‌, ರಘುನಾಥ್‌, ನಂಜುಂಡ, ಶ್ರುತಿ, ನಂದಕುಮಾರ್‌, ರಾಜು, ರಾಣಿ, ಗಂಗೋತ್ರಿ ಕುಮಾರ್‌, ಸರಸ್ವತಿ, ರಾ.ಬಿ.ನಾಗರಾಜ್‌, ಅನಿತಾ, ಚಂದ್ರಶೇಖರ್‌, ಎ.ಡಿ. ಶ್ರೀನಿವಾಸ್‌, ಮನು ಸಿಂಚನ, ಅವರು ಪುನೀತ್‌ ರಾಜ್‌ಕುಮಾರ್‌ ಅಭಿನಯದ ಮಿಲನ ಚಿತ್ರದ ನಿನ್ನಿಂದಲೇ, ಅರಸು- ಏಕೋ ಏನೋ, ಅಪ್ಪು- ಎಲ್ಲಿಂದ ಆರಂಭವೋ, ಆ ದೇವರ ಹಾಡಿದು, ಅಣ್ಣಾ ಬಾಂಡ್‌- ಏನೆಂದು ಹೆಸರಿಡಲಿ, ಆಕಾಶ್- ಆಹಾ ಎಂಥಾ... ಸೇರಿದಂತೆ ಡಾ.ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಅಭಿನಯದ ಚಲನಚಿತ್ರ ಗೀತೆಗಳನ್ನು ಹಾಡಿ, ಸಭಿಕರನ್ನು ರಂಜಿಸಿದರು.