ಭಕ್ತರ ಉದ್ಧಾರಕ್ಕೆ ಶ್ರಮಿಸಿದ ಅರಬಾವಿ ಲಿಂ.ಸಿದ್ಧಲಿಂಗ ಶ್ರೀ

| Published : Oct 07 2024, 01:36 AM IST

ಸಾರಾಂಶ

ಅರಬಾವಿ ಮಠದ ಸಿದ್ದಲಿಂಗ ಸ್ವಾಮಿಗಳು ತಮ್ಮ ಜೀವನದುದ್ದಕ್ಕೂ ಭಕ್ತರ ಬಗ್ಗೆ ಅಪಾರ ಪ್ರೀತಿ, ಅನುಕಂಪವನ್ನು ಹೊಂದಿ, ಭಕ್ತರೋದ್ಧಾಕ್ಕಾಗಿ ತಮ್ಮ ಜೀವನವನ್ನು ಸವಿಸಿದ ಪುಣ್ಯ ಪುರುಷರಾಗಿದ್ದರು ಎಂದು ಗದಗ-ಡಂಬಳದ ಜಗದ್ಗುರುತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಅರಬಾವಿಮಠದ ಸಿದ್ದಲಿಂಗ ಸ್ವಾಮಿಗಳು ತಮ್ಮ ಜೀವನದುದ್ದಕ್ಕೂ ಭಕ್ತರ ಬಗ್ಗೆ ಅಪಾರ ಪ್ರೀತಿ, ಅನುಕಂಪವನ್ನು ಹೊಂದಿ, ಭಕ್ತರೋದ್ಧಾಕ್ಕಾಗಿ ತಮ್ಮ ಜೀವನವನ್ನು ಸವಿಸಿದ ಪುಣ್ಯ ಪುರುಷರಾಗಿದ್ದರು ಎಂದು ಗದಗ-ಡಂಬಳದ ಜಗದ್ಗುರುತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಗುರುವಾರ ಮೂಡಲಗಿ ತಾಲೂಕಿನ ಅರಬಾವಿಯ ದುರುಂಡೀಶ್ವರ ಪುಣ್ಯಾರಣ್ಯ ಮಠದ ಲಿಂ.ಸಿದ್ಧಲಿಂಗ ಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ, ಗದ್ದುಗೆಯ ಉದ್ಘಾಟನೆ ಹಾಗೂ ಪುಣ್ಯಾರಣ್ಯ ಪುಷ್ಪ ಸಂಸ್ಮರಣ ಸಂಪುಟ ಬಿಡುಗಡೆ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಭಕ್ತರೆಲ್ಲರೂ ಸದಾ ಸಂತೋಷವಾಗಿರಬೇಕು ಎನ್ನುವುದೇ ಶ್ರೀಗಳ ಪರಮಗುರಿಯಾಗಿತ್ತು ಎಂದರು.

ಸಿದ್ಧಲಿಂಗ ಸ್ವಾಮಿಗಳಂತೆ ಈಗಿರುವ 12ನೇ ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಗಳು ಗುರು ಪರಂಪರೆಮುಂದುವರಿಸಿಕೊಂಡು ಹೊರಟಿದ್ದು, ಭಕ್ತರ ಪ್ರೀತಿ, ವಿಶ್ವಾಸವನ್ನು ಅನೂಚವಾಗಿ ಗೆದ್ದಿರುವುದು ಸಂತೋಷತಂದಿದೆ ಎಂದರು.

ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ಮಹಾಂತೇಶ ಕೌಜಲಗಿ ಅವರು ಸಹ ಮಠದ ಬಗ್ಗೆ ಅಪಾರ ಬಕ್ತಿಯನ್ನು ಇಟ್ಟು ಮಠದ ಎಲ್ಲ ಕಾರ್ಯಗಳಿಗೆ ಸಹಕಾರ ನೀಡುತ್ತಿರುವದು ಶ್ಲಾಘನೀಯವಾಗಿದೆ ಎಂದರು.

ಸಮಾರಂಭದ ನೇತೃತ್ವವಹಿಸಿದ್ದ ಅರಭಾವಿ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಗಳು ಮಾತನಾಡಿ, ಸಿದ್ಧಲಿಂಗ ಸ್ವಾಮಿಗಳ ಪ್ರೀತಿ, ವಾತ್ಸಲ್ಯ, ಅಂತಃಕರಣ ಬಹಳದ ದೊಡ್ಡದು. ಅವರ ಅಂತಃಕರಣದಲ್ಲಿ ಮಠದ ಸೇವೆ ಮಾಡುವ ಭಾಗ್ಯನನ್ನದಾಗಿದೆ. ಪೂಜ್ಯರ ಕಾರುಣ್ಯದಲ್ಲಿ ಮುನ್ನಡೆಯುತ್ತೇನೆ ಎಂದು ಹೇಳಿದರು.

ಕಡಕೋಳದ ವೀರಕ್ತಮಠದ ಸಚ್ಚಿದಾನಂದ ಸ್ವಾಮೀಜಿ, ಬೆಲ್ಲದ ಬಾಗೇವಾಡಿಯ ಶಿವಾನಂದ ಸ್ವಾಮೀಜಿ, ಹುಕ್ಕೇರಿಯ ಶಿವಬಸವ ಸ್ವಾಮೀಜಿ, ಶೇಗುಣಸಿಯ ಡಾ.ಮಹಾಂತ ಸ್ವಾಮೀಜಿ ಆಶೀರ್ವಚನದ ನುಡಿಗಳನ್ನು ಹೇಳಿದರು.

ಪುಣ್ಯಾರಣ್ಯ ಪುಷ್ಪ ಸಂಸ್ಮರಣದ ಸಂಪಾದಕ ಜಾನಪದ ವಿದ್ವಾಂಸ ಡಾ.ಸಿ.ಕೆ.ನಾವಲಗಿ ಪ್ರಾಸ್ತಾವಿಕ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ನಿವೃತ್ತ ಪ್ರಾದೇಶಿಕ ಆಯುಕ್ತ ಎಂ.ಜಿ. ಹಿರೇಮಠ ಮಾತನಾಡಿದರು. ಶಿಂಧಿಕುರಬೇಟದ ಬಬಲಾದಿ ಸದಾಶಿವ ಮಠದ ಸ್ವಾಮೀಜಿ, ಬೈಲಹೊಂಗಲದ ಮಹಾಂತೇಶ ಕೌಜಲಗಿ, ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅತಿಥಿಯಾಗಿ ವೇದಿಕೆಯಲ್ಲಿ ಇದ್ದರು. ಶ್ರೀಗಳ ಗದ್ದುಗೆ ನಿರ್ಮಾಣದ ಶಿಲ್ಪಿ ಮತ್ತು ನಿರ್ಮಾಣಕ್ಕೆ ದೇಣಿಗೆ ನೀಡಿರುವ ಮಹನೀಯರನ್ನು ಮತ್ತು ದಾಸೋಹಿ ಸನ್ಮಾನಿಸಿದರು. ನಾಡಿನ ವಿವಿಧೆಡೆಯಿಂದ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರೊ.ವೀರಪಾಕ್ಷಿ ನಾಯಿಕ ನಿರೂಪಿಸಿದರು.