ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಡಿಂಕಾ ಗ್ರಾಮದ ಡೇರಿ ವತಿಯಿಂದ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೆರವಿನೊಂದಿಗೆ ನಿರ್ಮಿಸಿರುವ ಅರಳಿಕಟ್ಟೆಯನ್ನು ಡೇರಿ ನಿರ್ದೇಶಕ ಶಿವಕುಮಾರ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಗ್ರಾಮಗಳಲ್ಲಿ ಅರಳಿಕಟ್ಟೆ ನಿರ್ಮಿಸುವುದು ಉತ್ತಮ ಕೆಲಸ. ಅರಳಿಮರ ಶುದ್ಧ ಆಮ್ಲಜನಕ ನೀಡುವ ಮತ್ತು ಮನಃಶಾಂತಿ ನೀಡುವ ದೈವ ವೃಕ್ಷವಾಗಿದೆ. ಅರಳಿ ಮರದ ಕೆಳಗೆ ಕುಳಿತು ಹಿರಿಯರು ಪಂಚಾಯ್ತಿ ಕಟ್ಟೆಯನ್ನಾಗಿ ಮಾಡಿಕೊಂಡಿದ್ದರ ಹಿಂದೆ ವೈಜ್ಞಾನಿಕ ಕಾರಣಗಳಿವೆ ಎಂದರು.
ಇದೇ ವೇಳೆ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರ 134ನೇ ಜನ್ಮದಿನಾಚರಣೆ ಅಂಗವಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.ಈ ವೇಳೆ ಗ್ರಾಪಂ ಅಧ್ಯಕ್ಷ ಗಿರೀಶ್ (ಜೆಸಿಪಿ), ಉಪಾಧ್ಯಕ್ಷ ಕೃಷ್ಣಶೆಟ್ಟಿ, ನಿದೇರ್ಶಕರಾದ ಡಿ.ವಿ.ಶಿವಣ್ಣ, ಡಿ.ಇ.ಕಲಿಗಣೇಶ್, ಡಿ.ಎಸ್.ಮಹೇಶ್, ಶಿವಲಿಂಗೇಗೌಡ, ಡಿ.ಎಂ.ಪುಟ್ಟೆಗೌಡ, ಡಿ.ಎಂ.ಇಂದ್ರೇಶ್, ಶ್ರೀನಿವಾಸ್‌ಯ್ಯ, ಪ್ರೇಮಮ್ಮ, ರಮದೇವಿ, ಡೈರಿ ಕಾರ್ಯದರ್ಶಿ ಡಿ.ಎಂ.ಶಿವಪ್ಪ, ಡೈರಿ ಸಿಬ್ಬಂದಿ ಡಿ.ಜಿ.ಕೇಶವಚಾರಿ, ಡಿ.ಎಸ್.ಈರಪ್ಪಾಜಿ, ಶೇಖರಪ್ಪ, ಮಾದಯ್ಯ, ಗ್ರಾ.ಪಂ. ಅಧ್ಯಕ್ಷ ನಂಜೇಗೌಡ, ಸೇರಿದಂತೆ ಗ್ರಾಮದ ಹಿರಿಯ ಮುಂಖಡರು ಹಾಜರಿದ್ದರು.
ರಕ್ತದಾನ ಶಿಬಿರದ ಮೂಲಕ ಅಂಬೇಡ್ಕರ್ ಜಯಂತಿ ಆಚರಣೆಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕಾಳಪ್ಪ ಬಡಾವಣೆ (ಆರ್.ಟಿ.ಒ ಶ್ರಮಿಕ ನಗರ)ಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 134 ಹುಟ್ಟುಹಬ್ಬವನ್ನು ರಕ್ತದಾನ ಶಿಬಿರದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.ಮಿಮ್ಸ್ ರಕ್ತನಿಧಿ ಕೇಂದ್ರ, ಡಿಆರ್‌ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ವರ್ಧಮಾನ್ ಜೈನ್ ನೇತ್ರಾಲಯ, ದಂತಲೋಕ ಸೂಪರ್ ಸ್ಪೆಷಾಲಿಟಿ ಡೆಂಟಲ್ ಆಸ್ಪತ್ರೆ ಹಾಗೂ ಖಾಸಗಿ ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ನೆಲದನಿ ಬಳಗ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 28 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ನೆಲದನಿ ಬಳಗದ ಅಧ್ಯಕ್ಷ ಲಂಕೇಶ್ ಮಂಗಲ 73ನೇ ಬಾರಿ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು. ಇಡೀ ಕಾಳಪ್ಪ ಬಡಾವಣೆಯ ಜನರ ಆರೋಗ್ಯ ತಪಾಸಣೆ ನಡೆಯಿತು. ಶ್ರಮಿಕರು ಸರದಿ ಸಾಲಿನಲ್ಲಿ ನಿಂತು ನಿವಾಸಿಗಳು ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಕೊಂಡರು.ಈ ಶಿಬಿರದಲ್ಲಿ ಆರೋಗ್ಯ ತಪಾಸಣೆ, ಬಿ.ಪಿ,ಷುಗರ್ ರಕ್ತ ಪರೀಕ್ಷೆ, ರಕ್ತದ ಗ್ರೂಪಿಂಗ್ ಹಾಗೂ ದಂತ ತಪಾಸಣೆ ಕಣ್ಣಿನ ತಪಾಸಣೆ, ಮಹಿಳೆಯರಿಗೆ ಸ್ತ್ರೀರೋಗ ತಜ್ಞ ಮಹಿಳಾ ವೈದ್ಯರಿಂದ ಕ್ಯಾನ್ಸರ್ ತಪಾಸಣೆ ಮಾಡಿಸಲಾಯಿತು.
ಇದಕ್ಕೂ ಮುನ್ನ ಶ್ರಮಿಕ ನಗರ ನಿವಾಸಿಗಳು ಮಂಡ್ಯನಗರದ ವಿವಿಧ ರಸ್ತೆಗಳಲ್ಲಿ ಬೈಕ್ ರ್‍ಯಾಲಿ ನಡೆಸಿ ಜೈ ಭೀಮ್ ಘೋಷಣೆ ಕೂಗಿದರು. ರ್‍ಯಾಲಿಯಲ್ಲಿ ಕರ್ನಾಟಕ ಜನಶಕ್ತಿಯ ಸಿದ್ದರಾಜು, ಜಾಗೃತಿ ಕರ್ನಾಟಕದ ಸಂತೋಷ್, ಸುಬ್ರಮಣ್ಯ, ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.