ಮಹಾದೇವಿ ರಚಿತ ಆರಂಬ ಕೃತಿ ಬಿಡುಗಡೆ

| Published : Dec 04 2023, 01:30 AM IST

ಸಾರಾಂಶ

ಅರಸೀಕೆರೆ ನಗರದ ರೋಟರಿ ಕನ್ನಡ ಭವನದಲ್ಲಿ ಲೇಖಕಿ ಕೆ.ಪಿ ಮಹಾದೇವಿ ಇವರ ಕವನ ಸಂಕಲನ "ಆರಂಬ " ಕೃತಿಯನ್ನು ರಾಘವೇಂದ್ರ ಪಾಟೀಲ್ ಬಿಡುಗಡೆ ಮಾಡಿದರು. ಇದೇ ವೇಳೆ ಕನ್ನಡ ಸಾಹಿತ್ಯ ಕೃಷಿಯ ಚಟುವಟಿಕೆಗಳ ಆರಂಭದೊಂದಿಗೆ ಬರವಣಿಯು ಪ್ರಾರಂಭವಾದಾಗ ಮಾತ್ರ ಸಾಹಿತ್ಯ ಕ್ಷೇತ್ರದಲ್ಲಿ ಫಲಯುತವಾದ ಬರಹಗಳನ್ನು ಕಾಣಲು ಸಾದ್ಯವಾಗುತ್ತದೆ ಎಂದು ಖ್ಯಾತ ಕತೆಗಾರ ಮತ್ತು ಕಾದಂಬರಿಕಾರ ರಾಘವೇಂದ್ರ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಕನ್ನಡ ಸಾಹಿತ್ಯ ಕೃಷಿಯ ಚಟುವಟಿಕೆಗಳ ಆರಂಭದೊಂದಿಗೆ ಬರವಣಿಯು ಪ್ರಾರಂಭವಾದಾಗ ಮಾತ್ರ ಸಾಹಿತ್ಯ ಕ್ಷೇತ್ರದಲ್ಲಿ ಫಲಯುತವಾದ ಬರಹಗಳನ್ನು ಕಾಣಲು ಸಾದ್ಯವಾಗುತ್ತದೆ ಎಂದು ಖ್ಯಾತ ಕತೆಗಾರ ಮತ್ತು ಕಾದಂಬರಿಕಾರ ರಾಘವೇಂದ್ರ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ರೋಟರಿ ಕನ್ನಡ ಭವನದಲ್ಲಿ ಲೇಖಕಿ ಕೆ.ಪಿ ಮಹಾದೇವಿ ಇವರ ಕವನ ಸಂಕಲನ "ಆರಂಬ " ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಕೆ.ಪಿ ಮಹದೇವಿ ಇವರ ಕವನ ಸಂಕಲನದಲ್ಲಿ ಜೀವ ಶೈಲಿಗಿಂದ ಜೀವನ ಶೈಲಿಯೊಂದಿಗೆ ಪ್ರೀತಿಯನ್ನು ಉಣಬಡಿಸುವ ಹೂರಣವಿದೆ. ಬರವಣಿಗೆಯಲ್ಲಿ ಯಾವುದೇ ಕಾಗುಣಿತ ತಪ್ಪುಗಳಿಲ್ಲದೇ ಬರೆದಿರುವ ಈ ಕೃತಿಯಲ್ಲಿ ಅವರ ಜೀವನದ ಪಾಠದೊಂದಿಗೆ ವಿದ್ಯಾಮಾನಗಳನ್ನು ಬರಹ ರೂಪದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಕಡೆಗೂ ಸಾಹಿತ್ಯ ರಚನೆಯ ನಂಟಿದೆ. ಆಧ್ಯಾತ್ಮಿಕ ಸಾಹಿತ್ಯವು ಉತ್ತುಂಗಕ್ಕೆ ಏರಿದಾಗ ಅದರ ಹಿಂದೆ ಪ್ರೀತಿಯ ಪಾತ್ರವಿರುತ್ತದೆ.

ಮಹಾದೇವಿ ರಚಿಸಿರುವ ಸಾಹಿತ್ಯದಲ್ಲಿ ಕುಟುಂಬ ಸದಸ್ಯರು, ಯಮಗಮ ಕೃಷಿ ಚಟುವಟಿಕೆ ಜೀವನ ಏಳು ಬೀಳುವಿನ ಸನ್ನಿವೇಶನಗಳನ್ನು ಕಾವ್ಯದ ರೂಪದಲ್ಲಿ ರಚಿಸಿರುವ ಇವರ ಕೃತಿಯಲ್ಲಿ ಅಂದಿನ ಕಾಲದ ಅಕ್ಕಮಹಾದೇವಿ, ಚನ್ನಮಲ್ಲಿಕಾರ್ಜುನ ಕಾಲದ ಸಾಹಿತ್ಯದ ಚಿತ್ರಣದೊಂದಿಗೆ ಪುರುಷ ಸಂರಕ್ಷಣೆಗೂ ಆದ್ಯತೆ ನೀಡುವ ನಿಟ್ಟಿನಲ್ಲಿ ಕವನಗಳನ್ನು ರಚಿಸಿದ್ದಾರೆ. ಪುಸ್ತಕಗಳನ್ನು ಕೊಂಡು ಓದುವವವರು ಕ್ಷೀಣಿಸುತ್ತಿರುವ ಪ್ರಸ್ತುತ ದಿನಗಳಲ್ಲಿ ಮಹದೇವಿಯವರಂತಹ ಲೇಖಕಿಯರು ಸಾಹಿತ್ಯ ಬರವಣಿಗೆಯೊಂದಿಗೆ ಮತ್ತು ತಮ್ಮ ಮನೆಯಲ್ಲಿಯೇ ಕವಿ ಗೋಷ್ಠಿಗಳನ್ನು ಆಯೋಜಿಸುವುದರ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಬಹು ದೊಡ್ಡ ಆಸ್ತಿಯಾಗಿದ್ದಾರೆ ಎಂದರೆ ತಪ್ಪಾಗಲಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಡಿ.ಎಸ್ ರಾಮಸ್ವಾಮಿ ಮಾತನಾಡಿ, ಕನ್ನಡ ಸಾಹಿತ್ಯ ಲೋಕಕ್ಕೆ ಆಗಮಿಸಿರುವ ಮಹಾದೇವಿ ರಚಿಸಿರುವ "ಆರಂಬ " ಸಂಕಲನವು ಉತ್ತಮವಾಗಿ ಮೂಡಿ ಬಂದಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಂಧ ಗಾಳಿ ಗೊತ್ತಿರದ ಎಷ್ಟೋ ಸ್ವಯಂಘೋಷಿತ ಸಾಹಿತಿಗಳು ಮಂಕುಬೂದಿ ಎರಚುಚುದರ ಮೂಲಕ ಸಾಹಿತ್ಯ ಕ್ಷೇತ್ರವನ್ನು ಅಕ್ಷರಶಃ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಿಜವಾದ ಸಾಹಿತಿಗಳು ಯಾವುದೇ ಫಲಾಪೇಕ್ಷೇ ಇಲ್ಲದೇ ಕನ್ನಡ ಸಾಹಿತ್ಯಕ್ಕೆ ಇಂದಿಗೂ ಅನೇಕ ಕೊಡುಗೆಗಳನ್ನು ನೀಡುತ್ತಿದ್ದಾರೆ. ಸ್ವಯಂ ಘೋಷಿತ ಸಾಹಿತಿಗಳ ಕೈ ಮೇಲಾದರೂ ಅದು ತಾತ್ಕಾಲಿಕವಾಗಿರುತ್ತದೆ. ಕಾಲಾ ನಂತರ ನಿಜವಾದ ಸಾಹಿತಿಗಳು ಬೆಳಕಿಗೆ ಬರುತ್ತಾ ಕನ್ನಡ ಸಾಹಿತ್ಯ ಲೋಕಕ್ಕೆ ಆಸ್ತಿಯಾಗಲಿದ್ದಾರೆ. ಅದಕ್ಕೆ ಉದಾಹರಣೆಯಾಗಿ ಇಂದಿಗೂ ಪಂಪ, ಕುಮಾರವ್ಯಾಸ ಮತ್ತು ಬಸವಾದಿ ಶರಣರು ಸಾಹಿತ್ಯ, ವಚನಗಳ ಮೂಲಕ ಇನ್ನು ಜೀವಂತವಾಗಿದ್ದಾರೆ ಎನ್ನುವುದೇ ಸಾಕ್ಷಿಯಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಗುಂಪುಗಾರಿಕೆ ಮತ್ತು ಒಡಕು ಬೇಡವೇ ಬೇಡ. ಎಲ್ಲರೂ ಒಂದಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕೊಡುಗೆಗಳನ್ನು ನೀಡೋಣ.

ಪ್ರತಿ ವರ್ಷ ಎರಡರಿಂದ ಎರಡುವರೆ ಸಾವಿರ ಕನ್ನಡ ಸಾಹಿತ್ಯ ಪುಸ್ತಕಗಳು ಬಿಡುಗಡೆ ಆಗುತ್ತಿದೆ ಎಂದು ಹೇಳಲಾಗುತ್ತದೆ. ಪುಸ್ತಕಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಸಾಹಿತ್ಯ ಬರಹಗಾರರ ಸಂಖ್ಯೆ ಕ್ಷೀಣಿಸಿಲ್ಲ ಎಂದರು.

ಹಿರಿಯ ಕವಯಿತ್ರಿ ಸವಿತಾ ನಾಗಭೂಷಣ್ ಮತ್ತು ಧಾತ್ರಿ ಪ್ರಕಾಶನದ ಎಸ್.ಉಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ವಿಜಯಶ್ರೀ ಹಾಲಾಡಿ, ರಂಗಮ್ಮ ಹೊದೆಕಲ್, ಹಾವೇರಿ, ಖಾದರ್ ಮೋಯಿದ್ದೀನ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನ ಕುಮಾರ್, ತಾ ಘಟಕದ ಮಾಜಿ ಅಧ್ಯಕ್ಷರಾದ ಬಿ.ಪರಮೇಶ್, ಪರಶಿವಮೂರ್ತಿ, ಉಪನ್ಯಾಸಕ ಡಾ.ಬಿ.ಡಿ ಕುಮಾರ್, ಕೋಳಗುಂದ ಸ್ವಾಭಾವ್, ಕಾತ್ಯಾಯಿನಿ ತೆವರಿಮಠ್, ಜಯಲಕ್ಷ್ಮೀ ಕೊಳಗುಂದ, ಕೆ.ಎಸ್ ಮುಂಜುನಾಥ್, ಸದಾನಂದ ಮೂರ್ತಿ, ಕೊಟ್ರೇಶ್ ಕೊಟ್ಟೂರು, ಡಾ. ಹರೀಶ್, ಗಂಗಾಧರ್ ಸ್ವಾಮಿ, ಮಂಜುರಾವ್ ಸೇರಿದಂತೆ ಅನೇಕ ಸಾಹಿತಿಗಳು ಉಪಸ್ಥಿತರಿದ್ದರು.