ಬಸವಾಪಟ್ಟಣದ ಪ್ರಸಿದ್ಧ ಅರಸೀಕಟ್ಟೆ ಅಮ್ಮನ ರಥೋತ್ಸವವು ಶ್ರದ್ದಾ , ಭಕ್ತಿಯಿಂದ ಸಂಪನ್ನಗೊಂಡಿತು. ಶುಕ್ರವಾರದ ಶುಭಗಳಿಗೆ 12 ಗಂಟೆಗೆ ದೇವಿಯನ್ನು ರಥದಲ್ಲಿ ಕುಳ್ಳಿರಿಸಿ ದೇವಸ್ಥಾನದಿಂದ ದ್ವಾರದವರೆಗೆ ಭಕ್ತಾದಿಗಳ ದೈವನಾಮಸ್ಮರಣೆಯೊಂದಿಗೆ ರಥವನ್ನು ಎಳೆದು ಮತ್ತೆ ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು. ಶುಕ್ರವಾರ ಬೆಳಗ್ಗಿನಿಂದಲೇ ಅರಸೀಕಟ್ಟೇ ಅಮ್ಮ ದೇವಾಲಯದಲ್ಲಿ ವಿವಿಧ ವಿಶೇಷ ಪೂಜಾದಿ ಕೈಂಕರ್ಯ ಜರುಗಿದವು. ಮಾಜಿ ಶಾಸಕರಾದ ಎ.ಟಿ ರಾಮಸ್ವಾಮಿ, ಕೃಷ್ಣೆಗೌಡ, ಪ್ರದೀಪ್, ಎ.ಟಿ ರಾಮಸ್ವಾಮಿ, ವೆಂಕಟೇಶ್, ಬಿ.ಸಿ ವೀರೇಶ್, ರಾಮನಾಥಪುರ ವಿರೂಪಾಕ್ಷ, ಭಕ್ತರು ಆಗಮಿಸಿದ್ದರು.

ಬಸವಾಪಟ್ಟಣ: ಪ್ರಸಿದ್ಧ ಅರಸೀಕಟ್ಟೆ ಅಮ್ಮನ ರಥೋತ್ಸವವು ಶ್ರದ್ದಾ , ಭಕ್ತಿಯಿಂದ ಸಂಪನ್ನಗೊಂಡಿತು. ಶುಕ್ರವಾರದ ಶುಭಗಳಿಗೆ 12 ಗಂಟೆಗೆ ದೇವಿಯನ್ನು ರಥದಲ್ಲಿ ಕುಳ್ಳಿರಿಸಿ ದೇವಸ್ಥಾನದಿಂದ ದ್ವಾರದವರೆಗೆ ಭಕ್ತಾದಿಗಳ ದೈವನಾಮಸ್ಮರಣೆಯೊಂದಿಗೆ ರಥವನ್ನು ಎಳೆದು ಮತ್ತೆ ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು.

ಶುಕ್ರವಾರ ಬೆಳಗ್ಗಿನಿಂದಲೇ ಅರಸೀಕಟ್ಟೇ ಅಮ್ಮ ದೇವಾಲಯದಲ್ಲಿ ವಿವಿಧ ವಿಶೇಷ ಪೂಜಾದಿ ಕೈಂಕರ್ಯ ಜರುಗಿದವು. ಮಾಜಿ ಶಾಸಕರಾದ ಎ.ಟಿ ರಾಮಸ್ವಾಮಿ, ಕೃಷ್ಣೆಗೌಡ, ಪ್ರದೀಪ್, ಎ.ಟಿ ರಾಮಸ್ವಾಮಿ, ವೆಂಕಟೇಶ್, ಬಿ.ಸಿ ವೀರೇಶ್, ರಾಮನಾಥಪುರ ವಿರೂಪಾಕ್ಷ, ಭಕ್ತರು ಆಗಮಿಸಿದ್ದರು.

ದೇವಸ್ಥಾನ ಸಮಿತಿಯ ಕೇಷ್ಣೆಗೌಡ ದೇವತಾ ಕಾರ್ಯಗಳನ್ನು ಶ್ರದ್ಧಾಭಕ್ತಿಯಿಂದ ತಾಲೂಕು ರಥೋತ್ಸವನ್ನು ಯಶಸ್ವಿಗೆ ಶ್ರಮಿಸಿದರು. ಕೊಣನೂರು ಪೊಲೀಸ್ ಠಾಣೆ ಉಪನಿರೀಕ್ಷಕರಾದ ಮರಿಯಪ್ಪ ಪ್ರಹ್ಲಾದ್ ಮತ್ತು ಸಿಬ್ಬಂದಿ ವರ್ಗದವರು ಕಾನೂನು ಸುವ್ಯವಸ್ಥೆ ಮತ್ತು ಭದ್ರತೆ ಒದಗಿಸಿದರು.