ಟ್ಯಾಗ್ರೋಸ್ ಕೆಮಿಕಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಕೃಷಿ ಕ್ಷೇತ್ರದ ಅನುಭವ ಹಾಗೂ ಉತ್ಪನ್ನಗಳ ವ್ಯಾಪಕ ಜಾಲದ ಹಿನ್ನೆಲೆಯಲ್ಲಿ ಆರ್ಕಿಮೋ ಕ್ರಾಪ್ ಸೊಲ್ಯೂಷನ್ಸ್ ವಿವಿಧ ಬೆಳೆಗಳಿಗೆ ಅಗತ್ಯವಾಗುವ ಕೃಷಿ ರಾಸಾಯನಿಕ ಪರಿಹಾರಗಳನ್ನು ರೈತರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿದೆ.

ಧಾರವಾಡ: ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನಾಧಾರಿತ ಪರಿಹಾರಗಳಿಗೆ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ, ಹಲವು ದಶಕಗಳ ಅನುಭವ ಹೊಂದಿರುವ ಟ್ಯಾಗ್ರೋಸ್ ಕೆಮಿಕಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಹಭಾಗಿತ್ವದೊಂದಿಗೆ ಮುನ್ನಡೆಯುತ್ತಿರುವ ಆರ್ಕಿಮೋ ಕ್ರಾಪ್ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ ಒಂದೇ ವರ್ಷದ ಅವಧಿಯಲ್ಲಿ ₹100 ಕೋಟಿ ವಹಿವಾಟು ದಾಖಲಿಸಿದೆ.

ಟ್ಯಾಗ್ರೋಸ್ ಕೆಮಿಕಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಕೃಷಿ ಕ್ಷೇತ್ರದ ಅನುಭವ ಹಾಗೂ ಉತ್ಪನ್ನಗಳ ವ್ಯಾಪಕ ಜಾಲದ ಹಿನ್ನೆಲೆಯಲ್ಲಿ ಆರ್ಕಿಮೋ ಕ್ರಾಪ್ ಸೊಲ್ಯೂಷನ್ಸ್ ವಿವಿಧ ಬೆಳೆಗಳಿಗೆ ಅಗತ್ಯವಾಗುವ ಕೃಷಿ ರಾಸಾಯನಿಕ ಪರಿಹಾರಗಳನ್ನು ರೈತರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿದೆ. ಸಂಸ್ಥೆಯ ಉತ್ಪನ್ನಗಳು ದೇಶದ ವಿವಿಧ ಕೃಷಿ ಪ್ರದೇಶಗಳ ಜತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ತಲುಪಿರುವುದು ವಿಶೇಷ. ಈಗಾಗಲೇ ದೇಶಾದ್ಯಂತ 90ಕ್ಕೂ ಅಧಿಕ ಉತ್ಪನ್ನಗಳು ಮಾರಾಟ ಮಾಡುತ್ತಿರುವುದು ವಿಶೇಷ.

ಧಾರವಾಡ, ಗದಗ, ಯಾದಗಿರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ ಹಾಗೂ ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ರೈತರು ಮಳಿಗೆಗೆ ಭೇಟಿ ನೀಡಿ ಉತ್ಪನ್ನಗಳ ಕುರಿತು ಮಾಹಿತಿ ಪಡೆದುಕೊಂಡರು. ಈಗಾಗಲೇ ಉತ್ಪನ್ನಗಳನ್ನು ಬಳಸಿರುವ ರೈತರು ತಮ್ಮ ಅನುಭವಗಳನ್ನು ಹಂಚಿಕೊಂಡರೆ, ಹೊಸ ಉತ್ಪನ್ನಗಳ ಕುರಿತು ಹಲವರು ಮಾಹಿತಿ ಪಡೆದರು.

90ಕ್ಕೂ ಅಧಿಕ ದೇಶಗಳಲ್ಲಿ ವಿಸ್ತರಣೆ: ಟ್ಯಾಗ್ರೋಸ್ ಕೆಮಿಕಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಲವು ದಶಕಗಳ ಅನುಭವ ಹೊಂದಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದ ಕೃಷಿ ಉತ್ಪನ್ನಗಳನ್ನು 90ಕ್ಕೂ ಅಧಿಕ ದೇಶಗಳ ಮಾರುಕಟ್ಟೆಗೆ ತಲುಪಿಸುತ್ತಿದೆ. ಕರ್ನಾಟಕ ರಾಜ್ಯದಲ್ಲಿ 500ಕ್ಕೂ ಅಧಿಕ ಡೀಲರ್‌ಗಳನ್ನು ಹೊಂದಿದ್ದು, ಎಲ್ಲ ಜಿಲ್ಲೆಗಳಲ್ಲೂ ರೈತರ ಜೀವನಾಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಮಾತೃ ಸಂಸ್ಥೆಯ ಅನುಭವ, ಸಂಶೋಧನೆ ಮತ್ತು ತಂತ್ರಜ್ಞಾನವನ್ನು ಆಧಾರವಾಗಿಸಿಕೊಂಡು ಆರ್ಕಿಮೋ ಕ್ರಾಪ್ ಸೊಲ್ಯೂಶನ್ಸ್ ಮುಂದಿನ ದಿನಗಳಲ್ಲಿ ರೈತರ ಅಗತ್ಯಗಳಿಗೆ ಅನುಗುಣವಾಗಿ ಮತ್ತಷ್ಟು ಹೊಸ ಉತ್ಪನ್ನಗಳನ್ನು ಪರಿಚಯಿಸುವ ಗುರಿ ಹೊಂದಿದೆ.

ರೈತರ ವಿಶ್ವಾಸವೇ ಬಂಡವಾಳ: ಒಂದೇ ವರ್ಷದಲ್ಲಿ ₹100 ಕೋಟಿ ವಹಿವಾಟು ದಾಖಲಿಸಿರುವುದು ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ರೈತರ ಬೆಳೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವ ಜತೆಗೆ ಹೊಸ ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆ ನೀಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ಉತ್ಪನ್ನಗಳ ಮಾರಾಟ: ಭಾರತೀಯ ಬಹುರಾಷ್ಟ್ರೀಯ ಕಂಪನಿ ಟ್ಯಾಗ್ರೋಜ್‌ ಕಳೆದ 35 ವರ್ಷಗಳಿಂದ ಜಗತ್ತಿನ 90ಕ್ಕೂ ಅಧಿಕ ದೇಶಗಳಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಕಳೆದ ವರ್ಷದಿಂದ ಭಾರತೀಯ ರೈತರಿಗೆ ಆರ್ಕಿವೋ ಕ್ರಾಪ್‌ ಸೊಲ್ಯೂಶನ್‌ ಅಂಗಸಂಸ್ಥೆಯ ಮೂಲಕ 90ಕ್ಕೂ ಅಧಿಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ ಎಂದು ಭಾರತದ ಸೇಲ್ಸ್‌ ಮತ್ತು ಮಾರ್ಕೇಟಿಂಗ್‌ನ ಉಪಾಧ್ಯಕ್ಷ - ಮಲಕಾಜಪ್ಪ ಸಾರವಾಡ ತಿಳಿಸಿದರು.