ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಅಡಕೆ ಬೆಳೆಗಾರರಿಗೆ ವಿಮಾ ಪರಿಹಾರ ಮೊತ್ತ ಕಡಿಮೆ ದೊರೆಯಲು ರಾಜ್ಯ ಸರ್ಕಾರ ಕಾರಣವಲ್ಲ. ಈ ಬಗ್ಗೆ ಬಿಜೆಪಿಗರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಿ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್.ಪೂಜಾರಿ ಹೇಳಿದ್ದಾರೆ.
ಮಂಗಳೂರು: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಅಡಕೆ ಬೆಳೆಗಾರರಿಗೆ ವಿಮಾ ಪರಿಹಾರ ಮೊತ್ತ ಕಡಿಮೆ ದೊರೆಯಲು ರಾಜ್ಯ ಸರ್ಕಾರ ಕಾರಣವಲ್ಲ. ಈ ಬಗ್ಗೆ ಬಿಜೆಪಿಗರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಿ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್.ಪೂಜಾರಿ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಟರ್ಮ್ ಶೀಟ್ನ್ನು ಬದಲಿಸಿಲ್ಲ. ಒಟ್ಟು ಪ್ರೀಮಿಯಂ ಮೊತ್ತದಲ್ಲಿ ಶೇ.20 ರಾಜ್ಯ ಸರ್ಕಾರ, ಶೇ.10 ಕೇಂದ್ರ ಸರ್ಕಾರ, ಶೇ.5ನ್ನು ರೈತರು ಪಾವತಿಸುತ್ತಾರೆ. ರಾಜ್ಯ ಸರ್ಕಾರದಿಂದ ವಿಮಾ ಕಂತು ಪಾವತಿ ಬಾಕಿ ಇಲ್ಲ. ವಿಮಾ ಕಂಪೆನಿ ಕೇಂದ್ರ ಸರ್ಕಾರದ ಅಧೀನದಲ್ಲಿರುತ್ತದೆ. ಆದರೆ ಇದರ ಬಗ್ಗೆ ಅಜ್ಞಾನದಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.ಕಾಂಗ್ರೆಸ್ಗೆ ರೈತ ಕಾಳಜಿ ಇದೆ:
ಇದು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ. ಜೂನ್ನಿಂದ ಸೆಪ್ಟೆಂಬರ್ ವರೆಗೆ 225 ಮಿ.ಮೀ.ಗಿಂತ ಹೆಚ್ಚು ಮಳೆಯಾದರೆ ವಿಮೆ ಪರಿಹಾರ ದೊರೆಯುತ್ತದೆ. ಅದಕ್ಕಿಂತ ಕಡಿಮೆ ಮಳೆ ಬಿದ್ದಾರೆ ಪರಿಹಾರ ದೊರೆಯುವುದಿಲ್ಲ. ಇದು ಟರ್ಮ್ ಶೀಟ್ನಲ್ಲಿದೆ. ಕಾಂಗ್ರೆಸ್ ರೈತರ ಪರವಾಗಿ ನಿರಂತರವಾಗಿ ಕಾಳಜಿ ತೋರಿಸಿದೆ. ಅಗತ್ಯ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ ಎಂದು ಅವರು ಹೇಳಿದರು. ಹರೀಶ್ ಪೂಂಜಾ ಅವರು ಪುತ್ತೂರು ಶಾಸಕರ ಬಗ್ಗೆಯೂ ಟೀಕೆ ಮಾಡಿದ್ದಾರೆ. ಅಶೋಕ್ ರೈ ಮೊದಲ ಬಾರಿಗೆ ಶಾಸಕರಾಗಿದ್ದವರು. ಅವರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಂದ ಬೆಳ್ತಂಗಡಿ ಶಾಸಕರು ಕಲಿಯಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಕೂಡ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಕರಾವಳಿಯ ಅಭಿವೃದ್ಧಿಗೆ 32,000 ಕೋ.ರು. ಮೀಸಲಿಟ್ಟಿದ್ದಾರೆ. ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ತೆರಿಗೆ ಪಾಲನ್ನು ಕೂಡ ನೀಡುತ್ತಿಲ್ಲ. ಈ ಬಗ್ಗೆ ಬಿಜೆಪಿಯವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಿ ಎಂದು ಪದ್ಮರಾಜ್ ಪೂಜಾರಿ ಹೇಳಿದರು.ದಸರಾ ರಜೆ ಗದ್ದಲ:
ದಸರಾಕ್ಕೆ ರಜೆ ಬೇಕು ಎಂಬುದನ್ನು ನಾವು ಕೂಡ ಒಪ್ಪುತ್ತೇವೆ. ಬಿಜೆಪಿಯವರಿಗೆ ನಿಜವಾಗಿಯೂ ವಿದ್ಯಾರ್ಥಿಗಳ ಬಗ್ಗೆ ಪ್ರಾಮಾಣಿಕ ಕಾಳಜಿ ಇದ್ದರೆ ಒಂದು ವಾರದ ಮೊದಲೇ ಪರೀಕ್ಷೆಯ ಬಗ್ಗೆ ಸಂಸ್ಥೆಯವರು ತಿಳಿಸಿದ್ದಾಗ ಆಕ್ಷೇಪಣೆ ಸಲ್ಲಿಸಬಹುದಾಗಿತ್ತು ಎಂದರು.ಪ್ರಮುಖರಾದ ಶಶಿಧರ ಹೆಗ್ಡೆ, ಪ್ರಕಾಶ್ ಸಾಲ್ಯಾನ್, ಪದ್ಮನಾಭ ಅಮೀನ್, ಅಪ್ಪಿ, ಟಿ.ಕೆ.ಸುಧೀರ್, ಸುರೇಂದ್ರ ಕಂಬಳಿ, ನೀರಜ್ ಪಾಲ್, ಶುಭೋದಯ ಆಳ್ವ, ಸರಿತಾ ಪೂಜಾರಿ, ಸಬಿತಾ ಮಿಸ್ಕಿತ್, ಯೋಗೀಶ್ ಮತ್ತಿತರರು ಇದ್ದರು.