ಸಾರಾಂಶ
ಅರ್ಜೆಂಟೀನಾದ ಕ್ಯಾಟಮಾರ್ಕಾ ಪ್ರಾಂತ್ಯದಲ್ಲಿ 5 ಲಿಥಿಯಂ ಬ್ಲಾಕ್‌ಗಳ ಪರಿಶೋಧನೆ ಹಾಗೂ ಗಣಿಗಾರಿಕೆ ಮಾಡಲು ಭಾರತ ಮತ್ತು ಅರ್ಜೆಂಟೀನಾ ಒಪ್ಪಂದಕ್ಕೆ ಸಹಿ ಹಾಕಿವೆ.
ಹುಬ್ಬಳ್ಳಿ: ಅರ್ಜೆಂಟೀನಾದ ಕ್ಯಾಟಮಾರ್ಕಾ ಪ್ರಾಂತ್ಯದಲ್ಲಿ 5 ಲಿಥಿಯಂ ಬ್ಲಾಕ್‌ಗಳ ಪರಿಶೋಧನೆ ಹಾಗೂ ಗಣಿಗಾರಿಕೆ ಮಾಡಲು ಭಾರತ ಮತ್ತು ಅರ್ಜೆಂಟೀನಾ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಮೂಲಕ ದೇಶವು ನಿರ್ಣಾಯಕ ಖನಿಜ ಸುರಕ್ಷಿತಗೊಳಿಸುವಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದಂತಾಗಿದೆ.
ಖನಿಜ ಮತ್ತು ಗಣಿ ಸಚಿವಾಲಯದ ಖನಿಜ ಬಿದೇಶ್ ಇಂಡಿಯಾ ಲಿಮಿಟೆಡ್ ಮತ್ತು ಅರ್ಜೆಂಟೀನಾದ ಕ್ಯಾಟಮಾರ್ಕಾ ಪ್ರಾಂತ್ಯದ ಸರ್ಕಾರಿ ಸ್ವಾಮ್ಯದ ಕಂಪನಿ ಕ್ಯಾಮ್ಯೆನ್‌ನ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.ಈ ಯೋಜನೆಯು ಭಾರತಕ್ಕೆ ಲಿಥಿಯಂ ಪೂರೈಕೆಯನ್ನು ಬಲಪಡಿಸಲು ಸಹಾಯ ಮಾಡಲಿದ್ದು, ಎರಡೂ ದೇಶಗಳ ಲಿಥಿಯಂ ಗಣಿಗಾರಿಕೆ ಮತ್ತು ಕೆಳ ವಲಯಗಳನ್ನು ಅಭಿವೃದ್ಧಿಪಡಿಸಲಿದೆ. ಇದು ಜಾಗತಿಕ ನಿವ್ವಳ ಶೂನ್ಯ ಗುರಿಗಳನ್ನು ಸಾಧಿಸಲು ನಿರ್ಣಾಯಕ ವಸ್ತುಗಳಿಗೆ ಪೂರೈಕೆ ಸರಪಳಿಯ ವೈವಿಧ್ಯೀಕರಣವನ್ನು ಸಹ ಸುಗಮಗೊಳಿಸಲಿದೆ ಎಂದು ಕೇಂದ್ರದ ಕಲ್ಲಿದ್ದಲು, ಗಣಿಗಾರಿಕೆ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.