ಸಾರಾಂಶ
- ಡಾಂಬರ್ ಬದಲು ಗ್ರಾವೆಲ್ ಹಾಕಿದ್ದಕ್ಕೆ ಸ್ಥಳೀಯರ ಆಕ್ಷೇಪ
- - - - ಪೊಲೀಸರ ಮಧ್ಯೆ ಪ್ರವೇಶದಿಂದಾಗಿ ತಿಳಿಯಾದ ಪರಿಸ್ಥಿತಿ- ಸ್ವಂತ ಖರ್ಚಿನಲ್ಲೇ ಗ್ರಾಮವೆಲ್ ತರಿಸಿ, ಸುಗಮ ಸಂಚಾರಕ್ಕೆ ಸ್ಪಂದಿಸಿದ ಲಯನ್ಸ್ ಕ್ಲಬ್ - - - ಮಲೇಬೆನ್ನೂರು: ಪಟ್ಟಣದ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಬುಧವಾರ ರಾಜ್ಯ ಹೆದ್ದಾರಿಯಲ್ಲಿ ಗುಂಡಿ ಮುಚ್ಚುವ ಕಾರ್ಯ ಕೈಗೊಂಡರು. ಈ ವೇಳೆ ಕೆಲವರು ವಾಗ್ವಾದ ನಡೆಸಿದ ಘಟನೆ ನಡೆಯಿತು.
ಪಟ್ಟಣದ ಮೂಲಕ ಹಾದುಹೋಗಿರುವ ಶಿವಮೊಗ್ಗ- ಮರಿಯಮಮ್ಮನಹಳ್ಳಿ ರಾಜ್ಯ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗಿವೆ. ಇದರಿಂದಾಗಿ ಮಹಿಳೆಯರು, ಮಕ್ಕಳು ಬೀಳುತ್ತ, ಸಮಸ್ಯೆ ಎದುರಿಸುತ್ತಿದ್ದಾರೆ. ಈ ಅವ್ಯವಸ್ಥೆ ಗಮನಿಸಿದ ಲಯನ್ಸ್ ಕ್ಲಬ್ ಪದಾಧಿಕಾರಿಗಳು ₹೨೨೦೦೦ ಸಾವಿರ ವೆಚ್ಚದಲ್ಲಿ 8 ಲೋಡ್ ಗ್ರಾವೆಲ್ ತರಿಸಿ, ಗುಂಡಿಗಳಿಗೆ ಹಾಕಿಸುತ್ತಿದ್ದರು. ಆಗ ಸ್ಥಳೀಯ ಅಂಗಡಿ ಮಾಲೀಕರು ಮತ್ತು ಗುತ್ತಿಗೆದಾರರು ಲಯನ್ಸ್ ಪದಾಧಿಕಾರಿಗಳ ಜತೆ ವಾಗ್ವಾದ ನಡೆಸಿದರು. ರಸ್ತೆಗೆ ಡಾಂಬರ್ ಹಾಕಿಸಬೇಕು, ಗ್ರಾವೆಲ್ ಬಳಕೆ ಬೇಡ. ಗ್ರಾವೆಲ್ ಬಳಕೆಯಿಂದ ವಿಪರೀತ ಧೂಳು ಉಂಟಾಗುತ್ತೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಸರ್ಕಾರ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುತ್ತಿಲ್ಲ. ಸಾರ್ವಜನಿಕ ರಸ್ತೆಯಲ್ಲಿ ಕೆಲವರು ಸಂಚಾರ ವೇಳೆ ಬೀಳುವ ಘಟನೆಗಳೂ ನಿಲ್ಲುತ್ತಿಲ್ಲ. ಈ ಪರದಾಟ ಕಂಡು ನಾವೇ ಸ್ವಂತ ಹಣದಲ್ಲಿ ರಸ್ತೆ ಗುಂಡಿಗಳಿಗೆ ಗ್ರಾವೆಲ್ ಹಾಕಿಸುತ್ತೇವೆ, ನೀವು ಯಾರು ಕೇಳೋದಿಕ್ಕೆ ಎಂದು ವಲಯಾಧ್ಯಕ್ಷ ಚಿಟ್ಟಿಕ್ಕಿ ನಾಗರಾಜ್, ಡಾ. ಬಸವರಾಜ್ ವಿರೋಧಿಗಳಿಗೆ ಉತ್ತರಿಸಿದ್ದಾರೆ. ಈ ವಿಷಯದಲ್ಲಿ ವಾಗ್ವಾದ ನಡೆದಿದ್ದರಿಂದ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಪೋಲಿಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು. ಅನಂತರ ಪದಾಧಿಕಾರಿಗಳು, ತಾವೇ ರಸ್ತೆಗೆ ಗ್ರಾವೆಲ್ ಹಾಕಿ, ಗುಂಡಿಗಳ ಮುಚ್ಚಿದರು.
ಶ್ರಮದಾನದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಪಾರ್ವತಮ್ಮ, ಶಿವಾಜಿ ಪಾಟೀಲ್, ಸಿರಿಗೆರೆ ಸಿದ್ದಪ್ಪ, ಡಾ.ಚಂದ್ರಕಾಂತ್, ಸಿದ್ದೇಶ್, ಶಿವನಗೌಡ, ಅರುಣ್ ಹಾಗೂ ಪುರಸಭಾ ಸದಸ್ಯರಾದ ಷಾ ಅಬ್ರಾರ್, ಸಿದ್ದೇಶ್ ಇದ್ದರು.- - - -೧೩ಎಂಬಿಆರ್೨:
ರಸ್ತೆ ಗುಂಡಿಗಳಿಗೆ ಗ್ರಾವೆಲ್ ಹಾಕುವ ವಿಚಾರಕ್ಕೆ ಸ್ಥಳೀಯರು, ಲಯನ್ಸ್ ಕ್ಲಬ್ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು.