ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಡಿಸೆಂಬರ್ 4 ರಂದು ಮಾಜಿ ಕ್ಯಾಪ್ಟನ್ ಅರ್ಜುನ ಆನೆ ಮೃತಪಟ್ಟಿ ಒಂದು ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ಅರ್ಜುನ ಆನೆಯ ಪುಣ್ಯಸ್ಮರಣೆಯೊಂದಿಗೆ ಮೌನಾಚರಣೆ ಮಾಡಿ ಪುಷ್ಪಾರ್ಚನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕೆಡಿಪಿ ಸದಸ್ಯ ಬಿಕ್ಕೋಡು ಚೇತನ್, ಕಾಡಾನೆಯೊಂದಿಗಿನ ಕಾದಾಟದಲ್ಲಿ ದಸರಾ ಅಂಬಾರಿ ಆನೆ ಅರ್ಜುನ ವೀರ ಮರಣವನ್ನಪ್ಪಿ ಇಂದಿಗೆ 1 ವರ್ಷ ಕಳೆದಿದೆ. ಪುಣ್ಯಸ್ಮರಣೆ ದಿನದ ಅಂಗವಾಗಿ ಬಿಕ್ಕೋಡಿನಲ್ಲಿ ಆನೆಗಳ ಕಾರ್ಯಾಚರಣೆ ವೇಳೆ ಬಂದಿದ್ದ ಅರ್ಜುನ ಆನೆಯ ಪಾದ ಇಟ್ಟಿದ್ದ ಸಂದರ್ಭದಲ್ಲಿ ಆ ಮಣ್ಣನ್ನು ನಮ್ಮ ಆರ್‌ಎಫ್‌ಒ ಯತೀಶ್ ಅವರು ತೆಗೆದು ಅದರ ಸುತ್ತ ಚೌಕಟ್ಟಲಿಟ್ಟು ಬಾಕ್ಸ್ ಮಾಡಿ ಇಟ್ಟಿದ್ದು, ಅದಕ್ಕೆ ನಾವು ಪೂಜೆ ಸಲ್ಲಿಸಿದ್ದೇವೆ. ಅರ್ಜುನನಂತಹ ಆನೆಯನ್ನು ನಾವು ಕಳೆದುಕೊಂಡಿದ್ದು ಬೇಸರವಾಗಿದೆ. ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದಂತೆ ಇಂದಿನಿಂದ ೬ ಆನೆಗಳು ಕಾರ್ಯಾಚರಣೆಗೆ ನಡೆಸಲು ಬಿಕ್ಕೋಡಿಗೆ ಆನೆಗಳು ಬಂದಿವೆ. ಭೀಮನ ಸಾರಥ್ಯದಲ್ಲಿ ನಾಳೆಯಿಂದ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದರು.
ಈ ವೇಳೆ ಅರಣ್ಯ ಅಧಿಕಾರಿಗಳಾದ ಎಸಿಎಫ್ ಷರೀಫ, ಆರ್‌ಎಫ್ಒ ಯತೀಶ್, ಪೊಲೀಸ್ ಸಿಬ್ಬಂದಿ,ಗ್ರಾಪಂ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.ಪೂರ್ಣವಾಗದ ಅರ್ಜುನನ ಪ್ರತಿಮೆಯ ಕೆತ್ತನೆಕನ್ನಡಪ್ರಭ ವಾರ್ತೆ ಹಾಸನ ಕಾಡಾನೆಯೊಂದಿಗಿನ ಕಾಳಗದಲ್ಲಿ ಅಂಬಾರಿ ಆನೆ ಅರ್ಜುನ ಮೃತಪಟ್ಟು ಡಿ.4ಕ್ಕೆ ಒಂದು ವರ್ಷವಾಗಿದೆ. ಈ ನಿಟ್ಟಿನಲ್ಲಿ ಅರ್ಜುನ ಮೃತಪಟ್ಟ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಅರ್ಜುನನ ಸ್ಮಾರಕ ನಿರ್ಮಾಣವಾಗುತ್ತಿದೆ. ಆದರೆ, ಅರ್ಜುನನ ಪ್ರತಿಮೆಯ ಕೆತ್ತನೆ ಪೂರ್ಣವಾಗದ ಕಾರಣ ಸ್ಮಾರಕ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಕಳೆದ 2023ರ ಡಿಸೆಂಬರ್ 4ರಂದು ಅರ್ಜುನ ಆನೆ ಸಾವನ್ನಪ್ಪಿತ್ತು. ಹಾಗಾಗಿ ದಬ್ಬಳ್ಳಿಕಟ್ಟೆಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. 2024ರ ಡಿಸೆಂಬರ್ 4ರಂದು ಸ್ಮಾರಕ ಉದ್ಘಾಟನೆ ಕಾರ್ಯಕ್ರಮಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಬಳ್ಳೆಯಲ್ಲಿ ನಿರ್ಮಾಣವಾಗುತ್ತಿರುವ ಅರ್ಜುನ ಆನೆಯ ಪ್ರತಿಮೆ ಕೆತ್ತನೆ ಕಾರ್ಯ ಇನ್ನೂ ಫೂರ್ಣಗೊಳ್ಳದ ಕಾರಣ ಬುಧವಾರ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದ ಸ್ಮಾರಕ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ,