ಸಾರಾಂಶ
ಅ.೧ ರಂದು ಜರುಗಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿರುವ ಕನ್ನಡ ಅಭಿಮಾನಿಗಳಿಗಾಗಿ ಮೃಷ್ಟಾನ್ನ ಭೋಜನ ವ್ಯವಸ್ಥೆ ಮಾಡಲಾಗುವುದು ಎಂದು ಶುಕ್ರವಾರ ಕಸಾಪ ಕಚೇರಿಯಲ್ಲಿ ನಡೆದ ದಾಸೋಹ ಸಮಿತಿ ತೀರ್ಮಾನಿಸಿತು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಅ.೧ ರಂದು ಜರುಗಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿರುವ ಕನ್ನಡ ಅಭಿಮಾನಿಗಳಿಗಾಗಿ ಮೃಷ್ಟಾನ್ನ ಭೋಜನ ವ್ಯವಸ್ಥೆ ಮಾಡಲಾಗುವುದು ಎಂದು ಶುಕ್ರವಾರ ಕಸಾಪ ಕಚೇರಿಯಲ್ಲಿ ನಡೆದ ದಾಸೋಹ ಸಮಿತಿ ತೀರ್ಮಾನಿಸಿತು.ಅರ್ಧ ಗಂಟೆಕಾಲ ಕಸಾಪ ಅಧ್ಯಕ್ಷ ಆರ.ಎಲ್.ಕೊಪ್ಪದ, ದತ್ತಿ ಸಂಚಾಲಕ ಆರ್.ಬಿ.ದಾನಿ ಹಾಗೂ ದಾಸೋಹ ಸಮಿತಿ ಅಧ್ಯಕ್ಷ ಆರ್.ವಿ.ಜಾಲವಾದಿ ಅವರು ಉಪಸ್ಥಿತರಿದ್ದರು. ''''''''ಮಾದಲಿ'''''''' ತಯಾರಿಸುವುದು ಹಾಗೂ ''''''''ಅನ್ನ ಸಾಂಬಾರ'''''''' ತಯಾರಿಸುವ ಬಗ್ಗೆ ನಿರ್ಣಯಿಸಲಾಯಿತು.
ದಾಸೋಹ ಸಮಿತಿ ಅಧ್ಯಕ್ಷ ಪ್ರೊ. ಆರ.ವಿ.ಜಾಲವಾದಿ ಮಾತನಾಡಿ, ತಾಲೂಕು ಸಮ್ಮೇಳನದಲ್ಲಿ ಸುಮಾರು ಹತ್ತುಸಾವಿರಕ್ಕೂ ಮೇಲ್ಪಟ್ಟು ಜನಸಂಖ್ಯೆ ಬರುವ ನಿರೀಕ್ಷೆ ಇದೆ. ಊಟದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಕಾರ್ಯಕರ್ತರಿಗೆ ಹಾಗೂ ಸಮಿತಿಯ ಸದಸ್ಯರಿಗೆ ಸೂಚಿಸಲಾಯಿತು. ಜತೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಕಸಾಪ ಅಧ್ಯಕ್ಷ ಆರ್.ಎಲ್.ಕೊಪ್ಪದ ಮಾತನಾಡಿ, ಈಗಾಗಲೇ ರಚನೆಗೊಂಡ ಕೆಲ ಸಮಿತಿಗಳ ಸದಸ್ಯರಿಗೂ ಆಯಾ ಕಾರ್ಯಗಳ ತಕ್ಕಂತೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಅವರು ಕೂಡ ಈಗಾಗಲೇ ಕೆಲವರು ಕಾರ್ಯೋನ್ಮುಖರಾಗಿದ್ದಾರೆ. ಇನ್ನೂ ಕೆಲವರು ಕಾರ್ಯೊನ್ಮುಖರಾಗಲೂ ಸಿದ್ದರಾಗಿದ್ದಾರೆ ಎಂದರು.ಇಲ್ಲಿ ನಡೆದ ಚರ್ಚೆಗಳ ವಿಷಯಗಳ ಕುರಿತು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅವರ ಗಮನಕ್ಕೆ ತರುತ್ತೇವೆ. ಅವರ ಮಾರ್ಗದರ್ಶನದಂತೆ ನಮ್ಮ ಸೇವಾಕಾರ್ಯ ಪ್ರಾರಂಭಗೊಂಡಿದೆ ಎಂದರು. ಈಗಾಗಲೇ ಕನ್ನಡದ ರಥ ಎಳೆಯಲು ಎಲ್ಲರೂ ಸಿದ್ಧರಾಗಿ ನಿಂತಿದ್ದೇವೆ. ಮೊದಲ ಸಮ್ಮೇಳನ ಯಶಸ್ಸಿಗೆ ಎಲ್ಲರೂ ಕೈಜೋಡಿಸೋಣ ಎಂದು ವಿನಂತಿಸಿದರು.