ಸಾರಾಂಶ
- ತನಿಖಾ ತಂಡವನ್ನು ಶ್ಲಾಘಿಸಿದ ಎಸ್ಪಿ
ಕನ್ನಡಪ್ರಭ ವಾರ್ತೆ,ಬೀರೂರುಪಟ್ಟಣದ ವಾರ್ಡ.ನಂ.22ರ ಪುರಿ ಭಟ್ಟಿ ಪ್ರದೇಶದ ಮನೆಯೊಂದರಲ್ಲಿ 9.45ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬೀರೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗದ ಸಲೀಂ ಮತ್ತು ಮೊಹ್ಮದ್ ಫರ್ದೀನ್ ಬಂಧಿತ ಆರೋಪಿಗಳು.ಕಳೆದ ಡಿ.30ರಂದು ಬೀರೂರಿನ ಪುರಿಭಟ್ಟಿ ನಿವಾಸಿಯಾದ ದಾದಾಪೀರ್ ಎಂಬಾತ ಶಿವಮೊಗ್ಗದಲ್ಲಿ ಸಂಬಂಧಿಕರ ಮದುವೆ ಸಮಾರಂಭಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಶಿವಮೊಗ್ಗದಿಂದ ಬೀರೂರಿಗೆ ಬೈಕಿನಲ್ಲಿ ಬಂದಿದ್ದ ಆರೋಪಿಗಳು ಮನೆಗೆ ನುಗ್ಗಿ ಬೀರುವಿನಲ್ಲಿದ್ದ 97 ಗ್ರಾಂ ಚಿನ್ನಾಭರಣ ಹಾಗೂ 6.50ಲಕ್ಷ ರು. ನಗದು ದೋಚಿ ಪರಾರಿಯಾಗಿದ್ದರು.
ಘಟನೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಕೊಂಡ ಬೀರೂರು ಪೊಲೀಸರು ಎಸ್ಪಿ ವಿಕ್ರಂ ಆಮಟೆ ನಿರ್ದೇಶನದಂತೆ, ತರೀಕೆರೆ ಡಿ.ವೈ.ಎಸ್.ಪಿ ಹಾಲಮೂರ್ತಿ ರಾವ್ ಮಾರ್ಗದರ್ಶನದಲ್ಲಿ ಬೀರೂರು ಸಿಪಿಐ ಎಸ್.ಎನ್. ಶ್ರೀಕಾಂತ್ ನೇತೃತ್ವದ ತಂಡ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿ ಖಚಿತ ಮಾಹಿತಿಯೊಂದಿಗೆ ಶಿವಮೊಗ್ಗದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.ಇಬ್ಬರಿಂದ 97ಗ್ರಾಂ ತೂಕದ ಆಭರಣಗಳು, 4.20ಲಕ್ಷ ನಗದು ಹಣ, ಬಜಾಜ್ ಸಿಟಿ 100ಬೈಕ್ ಸೇರಿದಂತೆ 9.45ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್ಐ ಸಜಿತ್ ಕುಮಾರ್, ಹೆಡ್ ಕಾನ್ಸ್ ಸ್ಟೇಬಲ್ ಡಿ.ವಿ.ಹೇಮಂತ್ ಕುಮಾರ್, ಕೃಷ್ಣಮೂರ್ತಿ, ಶಿವಕುಮಾರ್, ರಾಜಪ್ಪ ಇದ್ದರು.
ಪ್ರಕರಣ ದಾಖಲಾಗಿ 20ದಿನಗಳಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ ತನಿಖಾ ತಂಡವನ್ನು ಎಸ್ಪಿ ವಿಕ್ರಂ ಆಮಟೆ ಶ್ಲಾಘಿಸಿದ್ದಾರೆ.22 ಬೀರೂರು 3ಬೀರೂರಿನ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಚಿನ್ನಾಭರಣ ಮತ್ತು ನಗದು ಸಮೇತ ಬೀರೂರು ಪೊಲೀಸರು ಬಂದಿಸಿರುವುದು. ತರೀಕೆರೆ ಡಿ.ವೈ.ಎಸ್.ಪಿ ಹಾಲಮೂರ್ತಿ ರಾವ್, ಸಿಪಿಐ ಎಸ್.ಎನ್. ಶ್ರೀಕಾಂತ್,ಪಿಎಸ್ಐ ಸಜಿತ್ ಕುಮಾರ್, ಹೆಡ್ ಕಾನ್ಸ್ ಸ್ಟೇಬಲ್ ಗಳಾದ ಡಿ.ವಿ.ಹೇಮಂತ್ ಕುಮಾರ್, ಕೃಷ್ಣಮೂರ್ತಿ, ಶಿವಕುಮಾರ್, ರಾಜಪ್ಪ ಇದ್ದರು.