ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ಕ್ಯಾಂಸಬಳ್ಳಿ ಬಳಿ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದ್ದಂತೆ ಬ್ಯಾಂಕ್‌ಗೆ ನಕಲಿ ದಾಖಲೆ ನೀಡಿ 3.70 ಕೋಟಿ ರೂ.ಗಳ ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ಇಲ್ಲಿನ ಮಾಜಿ ನಗರಸಭೆ ಅಧ್ಯಕ್ಷ ದಾಸ್ ಚಿನ್ನಸವರಿ ಹಾಗೂ ಸಂಗಮಿತ್ರ ಮಹಿಳೆಯನ್ನು ಬೆಂಗಳೂರಿನ ಸಿಐಡಿ ಪೊಲೀಸ್ ಬಂಧಿಸಿದ್ದಾರೆ.ಕೋಲಾರದ ಸೆಂಟ್ರಲ್ ಬ್ಯಾಂಕ್ ಅಫ್ ಇಂಡಿಯಾದಲ್ಲಿ ಕ್ಯಾಸಂಬಳ್ಳಿ ಬಳಿ ನೂತನ ಬಡಾವಣೆ ನಿರ್ಮಾಣ ಹಾಗೂ 11 ಜನರಿಗೆ ನಿವೇಶನದಲ್ಲಿ ಮನೆಗಳ ನಿರ್ಮಾಣಕ್ಕಾಗಿ ಬ್ಯಾಂಕ್‌ಗೆ ನಿವೇಶನಗಳ ಹೆಚ್ಚು ಮೌಲ್ಯದ ನಕಲಿ ಪ್ರಮಾಣ ಪತ್ರವನ್ನು ಬ್ಯಾಂಕ್ ನೀಡಿ ಬ್ಯಾಂಕ್‌ನಿಂದ 3.70 ಕೋಟಿ ರೂ.ಗಳನ್ನು ಸಾಲ ಪಡೆದುಕೊಂಡಿದ್ದರು.ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗೆ ಸಾಲದ ಮರುಪಾವತಿ ಬಾರದೆ ಇದ್ದಾಗ ಅನುಮಾನಗೊಂಡು ಬ್ಯಾಂಕ್ ನೀಡಿದ್ದ ಸಾಲದ ತನಿಖೆ ಹೊಸಕೂಟೆ ಬ್ಯಾಂಕ್‌ನ ಅಧಿಕಾರಿಯೊಬ್ಬರಿಗೆ ತನಿಖೆ ಮಾಡಲು ಆದೇಶಿಸಿದ್ದರು. ಅಧಿಕಾರಿ ತನಿಖೆ ನಡೆಸಿದ್ದ ಸಂದರ್ಭದಲ್ಲಿ ಭೂಮಿಗೆ ಸಂಬಂಧಿಸಿದ ಹೆಚ್ಚು ಮೌಲ್ಯದ ನಕಲಿ ದಾಖಲೆಗಳನ್ನು ಬ್ಯಾಂಕ್‌ಗೆ ನೀಡಿ ಸಾಲವನ್ನು ಪಡೆದುಕೊಂಡಿರುವ ಕುರಿತು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಕೋಲಾರದ ಸಿಇನ್ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್‌ಗೆ ವಂಚನೆ ಮಾಡಿದ್ದ ಮ್ಯಾನೇಜರ್ ಸೇರಿಂದತೆ 17 ಜನರ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.2 ಕೋಟಿಗೂ ಅಧಿಕ ಮೊತ್ತದ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಇಎನ್ ಪೊಲೀಸ್‌ರು ಬೆಂಗಳೂರಿನ ಸಿಐಡಿ ಪೊಲೀಸ್‌ರಿಗೆ ಪ್ರಕರಣ ವರ್ಗಾವಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಪ್ರಮುಖ ಆರೋಪಿಗಳಾದ ಕೆಜಿಎಫ್‌ನ ಮಾಜಿ ನಗರಸಭೆ ಅಧ್ಯಕ್ಷ ದಾಸ್ ಚಿನ್ನಸವರಿ ಹಾಗೂ ಕೆಜಿಎಫ್ ಮೂಲದ ಸಂಗಮಿತ್ರ ಮಹಿಳೆಯನ್ನು ಸಿಐಡಿ ಪೊಲೀಸ್‌ರು ಬಂಧಿಸಿದ್ದಾರೆ.