ಮನೆಗಳ್ಳನ ಬಂಧನ; ₹6.64 ಲಕ್ಷ ಮೌಲ್ಯದ ಆಭರಣ ಜಪ್ತಿ

| Published : Nov 07 2024, 12:41 AM IST

ಸಾರಾಂಶ

ಮನೆಗಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಎಪಿಎಂಸಿ ಠಾಣೆ ಪೊಲೀಸರು ಬುಧವಾರ ಆರೋಪಿಯನ್ನು ಬಂಧಿಸಿ, ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮನೆಗಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಎಪಿಎಂಸಿ ಠಾಣೆ ಪೊಲೀಸರು ಬುಧವಾರ ಆರೋಪಿಯನ್ನು ಬಂಧಿಸಿ, ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ವೈಭವ ನಗರದ ಸತ್ಯಸಾಯಿ ಕಾಲೋನಿಯ ನಿವಾಸಿ ಮಸ್ತಾನ್ ಅಲಿ ರಸೂಲ್ ಶೇಖ ( 21) ಬಂಧಿತ ಆರೋಪಿ. ಈತನಿಂದ ₹ 6.64 ಲಕ್ಷ ಮೌಲ್ಯದ 83.100 ಗ್ರಾಂ ಚಿನ್ನಾಭರಣ ಮತ್ತು 567. 180 ಗ್ರಾಂ ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ.

ಕಲ್ಮೇಶ್ವರ ನಗರದ ಶಿವಪ್ಪ ಛತ್ರಪ್ಪ ಪೂಜಾರಿ ಎಂಬುವರು ಮನೆಯಲ್ಲಿ ಚಿನ್ನಾಭರಣ ಕಳುವಾದ ಕುರಿತು ಎಪಿಎಂಸಿ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಒಪ್ಪಿಕೊಂಡಿದ್ದಾನೆ. ಎಪಿಎಂಸಿ ಠಾಣೆ ಸಿಪಿಐ ಯು.ಎಚ್‌. ಅವಟಿ ನೇತೃತ್ವದಲ್ಲಿ ಪಿಎಸ್‌ಐಗಳಾದ ಮಂಜುನಾಥ ಭಜಂತ್ರಿ, ತ್ರಿವೇಣಿ ನಾಟೀಕರ, ಸಂತೋಷ ದಳವಾಯಿ ಹಾಗೂ ಸಿಬ್ಬಂದಿ ಕಾರ್ಯಾರಣೆ ನಡೆಸಿದ್ದರು. ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.