ಸಾರಾಂಶ
ಹಲವು ತಿಂಗಳಿಂದ ರೈತರ ಜಾನುವಾರು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾಳಗಿ: ಹಲವು ತಿಂಗಳಿಂದ ರೈತರ ಜಾನುವಾರು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಹಣ ಹಾಗೂ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡೂರು ಶ್ರೀನಿವಾಸಲು ತಿಳಿಸಿದ್ದಾರೆ.
ಕಲಬುರಗಿ ರಾಮಜೀ ನಗರ ಛೋಟಾ ರೋಜಾ ಖುರೇಷಿ ಮೊಹೊಲ್ಲಾದ ಅಮೀರ ಖು-ರೇಶಿ (25) ಮತ್ತು ಎಂಎಸ್‌ಕೆ ಮಿಲ್ ಜಿಲಾನಾಬಾದ ಖದೀ ಚೌಕ್‌ನ ನೋಮಾನ ಶೇಖ್ (21) ಬಂಧಿತ ಆರೋಪಿಗಳಾಗಿದ್ದಾರೆ. ಮಂಗಳವಾರ ನಸುಕಿನ ಜಾವ ಜಾನುವಾರ ಆರೋಪಿ ಪತ್ತೆ ಕಾರ್ಯದಲ್ಲಿದಾಗ ತಾಲೂಕಿನ ಚಿಂಚೋಳ್ಳಿ(ಎಚ್) ಕ್ರಾಸ್ ಹತ್ತಿರ ನಿಂತಿದ್ದಾಗ ಹೆಬ್ಬಾಳ ಕಡೆಯಿಂದ ಆಗಮಿಸಿದ ಬುಲೆರೋ ತಡೆದು ಆದರಲ್ಲಿದ್ದ ವಾಹನ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿ ವಾಹನ ಪರಿಶೀಲಿಸಿದಾಗ ವಾಹನದಲ್ಲಿ 4 ಹಗ್ಗ ಹಾಗೂ ಜಾನುವಾರುಗಳ ದೊರೆತಿದ್ದವು.ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿಗಳು ಜಾನುವಾರು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಬಂಧಿತರಿಂದ ₹1 ಲಕ್ಷ ಮುದ್ದೆ ಮಾಲನ್ನು ಹಾಗೂ ಕೃತ್ಯಕ್ಕೆ ಬಳಸಿದ ₹4.50 ಲಕ್ಷ ಮೌಲ್ಯದ ಬುಲೆರೋ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಾನುವಾರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಪಿಎಸ್‌ಐ ಸೇರಿ ಪೋಲಿಸ್ ಸಿಬ್ಬಂದಿ ವರ್ಗದರಿದ್ದರು.