ಸಾರಾಂಶ
ದಾಬಸ್‌ಪೇಟೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ದಾಬಸ್‌ಪೇಟೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರಿನ ಮರಳೂರು ದಿಣ್ಣೆಯ ಸಯ್ಯದ್ ಸಾಧಿಕ್ (26) ಶಾಂತಿ ನಗರ ಸಲ್ಮಾನ್ (25) ಮತ್ತು ಬಡೇ ಸಾಬ್ ಪಾಳ್ಯ ಮೂಲದ ಸಯ್ಯದ್ ಉಮೃದ್ದೀನ್ (25) ಬಂಧಿತರು.ಘಟನೆ ವಿವರ: ಕಳೆದ ಸೆ.4 ರಂದು ತುಮಕೂರು ಮೂಲದ ಪ್ರದೀಪ್ ಎಂಬಾತ ಬುಲೆಟ್ ಬೈಕ್‌ನಲ್ಲಿ ನೆಲಮಂಗಲದಿಂದ ತುಮಕೂರಿಗೆ ಹೋಗುತ್ತಿದ್ದಾಗ 2 ಬೈಕ್‌ಗಳಲ್ಲಿ ಬಂದ ಕದೀಮರು ಬೈಕ್ ಅಡ್ಡಗಟ್ಟಿ ಡ್ರ್ಯಾಗನ್‌ನಿಂದ ಬೆದರಿಸಿ ಆತನ ಬಳಿ ಇದ್ದ 3 ಚಿನ್ನದ ಉಂಗುರ, 2 ಮೊಬೈಲ್, ಒಂದು ಬೆಳ್ಳಿ ಉಂಗುರ ಕಿತ್ತು ಪರಾರಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡ ಪೊಲೀಸ್ ಇನ್‌ಸ್ಪೆಪೆಕ್ಟರ್ ರಾಜು ವಿಶೇಷ ತಂಡವೊಂದನ್ನು ರಚಿಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದರು. ಸಿಸಿ ಕ್ಯಾಮೆರಾದಲ್ಲಿ ಕಳ್ಳರ ಚಹರೆ ಪತ್ತೆ ಹಚ್ಚಿದ ಪೊಲೀಸರು ತುಮಕೂರಿನಲ್ಲಿ ಇವರನ್ನು ಪತ್ತೆ ಹಚ್ಚಿ ಬಂಧಿಸಿದರು. ಅವರಿಂದ ಎರಡು ಬೈಕ್, 13 ಮೊಬೈಲ್, 15 ಗ್ರಾಂ 3 ಚಿನ್ನದ ಉಂಗುರ, ಒಂದು ಬೆಳ್ಳಿ ಉಂಗುರ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.