ಸಾರಾಂಶ
ಬೈಕ್ ಮತ್ತು ಸರಗಳ್ಳತನಗಳಲ್ಲಿ ಭಾಗಿಯಾಗಿದ್ದ ಆರೋಪಿಯ ಹೆಡೆ ಮುರಿ ಕಟ್ಟುವಲ್ಲಿ ಸಂತೇಮರಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 3 ಬೈಕ್ ಮತ್ತು 80ಗ್ರಾಂ ಚಿನ್ನದ ಸರ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ
ಯಳಂದೂರು: ಬೈಕ್ ಮತ್ತು ಸರಗಳ್ಳತನಗಳಲ್ಲಿ ಭಾಗಿಯಾಗಿದ್ದ ಆರೋಪಿಯ ಹೆಡೆ ಮುರಿ ಕಟ್ಟುವಲ್ಲಿ ಸಂತೇಮರಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 3 ಬೈಕ್ ಮತ್ತು 80ಗ್ರಾಂ ಚಿನ್ನದ ಸರ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಚಾ.ನಗರ ತಾಲೂಕಿನ ಮೇಗಲಹುಂಡಿ ಗ್ರಾಮದ ವಾಸಿ ಸುರೇಶ್ ಅಲಿಯಾಸ್ ಸುರಪ್ಪ ಬಂಧಿತ ಆರೋಪಿಯಾಗಿದ್ದು ಈತನನ್ನು ಪ್ರಕರಣವೊಂದರಲ್ಲಿ ಬಂಧಿಸಿ ವಿಚಾರಣೆ ವೇಳೆ ಈತನ ವಿರುದ್ದ ಮೈಸೂರು, ಚಾ.ನಗರ ಜಿಲ್ಲೆಯಲ್ಲಿ ಒಟ್ಟು 18 ವಿವಿಧ ಪ್ರಕರಣ ಇರುವುದು ಬೆಳಕಿಗೆ ಬಂದಿದೆ. ಆರೋಪಿ ವಿರುದ್ಧ ಮೈಸೂರು ಜಿಲ್ಲೆಯಲ್ಲಿ 9 ಪ್ರಕರಣಗಳಲ್ಲಿ 3 ಸರಗಳ್ಳತನ , 5 ಬೈಕ್ ಕಳವು, 1 ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಅದೇ ರೀತಿಯಲ್ಲಿ 9 ಪ್ರಕರಣಗಳಲ್ಲಿ 7 ಸರಗಳ್ಳತನ, 1 ಬೈಕ್ ಮತ್ತು ಮನೆಗಳ್ಳತನದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಬಂಧಿತನಿಂದ 3 ಬೈಕ್, 80 ಗ್ರಾಂ ಚಿನ್ನ, 1 ಟಿವಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.ಎಸ್ಸಿ ಪದ್ಮಿನಿ ಸಾಹು, ಎಎಪ್ಪಿ ಉದ್ದೇಶ್, ಡಿವೈಎಸ್ಪಿ ಲಕ್ಷ್ಮಯ್ಯ ಮಾರ್ಗದರ್ಶನದಲ್ಲಿ ಸಂತೇಮರಳ್ಳಿ ವೃತ್ತ ನಿರೀಕ್ಷಕ ಬಸವರಾಜು, ಪಿಎಸೈ ಚಂದ್ರಹಾಸನಾಯಕ, ಕುದೇರು ಠಾಣೆ ಪಿಎಸೈ ಮಂಜುನಾಥ ನಾಯಕ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು ಕಾರ್ಯಾಚರಣೆ ಸಂರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸತೀಶ್, ನಾಗನಾಯಕ, ಶಿವರಾಜು, ಶಂಕರ, ಸುರೇಶ, ಮಾದೇಶ, ರಮೇಶ, ಯಶ್ವಂತ್, ಚಿನ್ನಸ್ವಾಮಿ, ಮಹೇಶ್, ವಿನೋದ್, ಮಹೇಶ, ಬಸವಣ್ಣ ಇನ್ನಿತರರು ಪಾಲ್ಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸರು ಹಾಗೂ ಸಿಬ್ಬಂದಿಯನ್ನು ಎಸ್ಪಿ ಪ್ರಶಂಶಿಸಿದ್ದಾರೆ.