ಬೈಕ್ ಗಳಿಗೆ ಬೆಂಕಿ ಇಟ್ಟ ಕಿಡಿಗೇಡಿಯ ಬಂಧನ

| Published : Feb 28 2025, 12:50 AM IST

ಸಾರಾಂಶ

ಕೊರಟಗೆರೆ ಪಟ್ಟಣದ ಹೊರವಲಯದ ಹನುಮಂತಪುರದ ಬಳಿ ಇರುವ ಡಿಗ್ರಿ ಕಾಲೇಜಿನ ಪಕ್ಕದಲ್ಲಿನ ಸಂತೋಷ ಅವರಿಗೆ ಸೇರಿದ್ದ ಸ್ಟೇಷನರಿ ಸ್ಟೋರಿನ ಮುಂಭಾಗ ನಿಂತಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಕಾರ್ತಿಕ್ ಎಂಬ ವ್ಯಕ್ತಿ ತನ್ನ ವೈಯಕ್ತಿಕ ಕಾರಣಕ್ಕೆ ಬೆಂಕಿ ಇಟ್ಟಿದ್ದಾನೆ.

ಕೊರಟಗೆರೆ: ವೈಯಕ್ತಿಕ ದ್ವೇಷದಿಂದ ಮನೆಯ ಮುಂದೆ ನಿಂತಿದ್ದ ದ್ವಿಚಕ್ರ ವಾಹನಗಳಿಗೆ ಬುಧವಾರ ರಾತ್ರಿ ೧೦ ಗಂಟೆಯ ಸಮಯದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ ಆರೋಪಿಯನ್ನು ಕೊರಟಗೆರೆ ಪಿಎಸೈ ಚೇತನ್‌ಗೌಡ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊರಟಗೆರೆ ಪಟ್ಟಣದ ಹೊರವಲಯದ ಹನುಮಂತಪುರದ ಬಳಿ ಇರುವ ಡಿಗ್ರಿ ಕಾಲೇಜಿನ ಪಕ್ಕದಲ್ಲಿನ ಸಂತೋಷ ಅವರಿಗೆ ಸೇರಿದ್ದ ಸ್ಟೇಷನರಿ ಸ್ಟೋರಿನ ಮುಂಭಾಗ ನಿಂತಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಕಾರ್ತಿಕ್ ಎಂಬ ವ್ಯಕ್ತಿ ತನ್ನ ವೈಯಕ್ತಿಕ ಕಾರಣಕ್ಕೆ ಬೆಂಕಿ ಇಟ್ಟಿದ್ದಾನೆ. ಬೆಂಕಿಗೆ ಎರಡು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿ ಅಂಗಡಿ ಮುಂಭಾಗದ ಸೀಟ್‌ಗಳು ಸಹ ಸುಟ್ಟು ಹೋಗಿದ್ದಾವೆ ಎಂದು ತಿಳಿದುಬಂದಿದೆ. ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು: ಕೊರಟಗೆರೆ ಪಿಎಸೈ ಚೇತನಗೌಡ, ಕ್ರೈಂ ಪೊಲೀಸ್ ಸಿಬ್ಬಂದಿ ದೊಡ್ಡಲಿಂಗಯ್ಯ ಮತ್ತು ಮೋಹನ್ ನೇತೃತ್ವದಲ್ಲಿ ಘಟನೆ ನಡೆದ ಕೇವಲ ೮ ಗಂಟೆಯೊಳಗೆ ಪರಾರಿಯಾಗಿದ್ದ ಆರೋಪಿಯನ್ನು ಸಿಸಿಟಿವಿ ದೃಶಾವಳಿ ಆಧರಸಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿ ಕಾರ್ತಿಕ್ ನಿಂದ ಒಂದು ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿದ್ದಾರೆ.