ಕಲಾದಗಿ ಪೊಲೀಸ್‌ ಠಾಣೆ ವ್ಯಾಪ್ತಿಯ ಕಲಾದಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ 2-3 ತಿಂಗಳಿಂದ ರೈತರ ಜಮೀನುಗಳಲ್ಲಿ ಮೋಟಾರ ಪಂಪಸೆಟ್‌ಗೆ ಜೋಡಿಸಿದ್ದ ಕೇಬಲ್‌ಗಳನ್ನು ಕಟ್ ಮಾಡಿಕೊಂಡು ಕಳ್ಳತನ ಮಾಡಿದ ಮತ್ತು ಅ.16ರಂದು ಠಾಣಾ ವ್ಯಾಪ್ತಿಯ ನಕ್ಕರಗುಂದಿ ಆರ್.ಸಿ ಯಲ್ಲಿ ದುರ್ಗಾದೇವಿ ಗುಡಿ ಮುಂದೆ ನಿಲ್ಲಿಸಿದ್ದ ಸ್ಕೂಟಿಯ ಡಿಕ್ಕಿಯಲ್ಲಿದ್ದ ₹95 ಸಾವಿರ ಕಳ್ಳತನ ಮಾಡಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಾದಗಿ

ಪೊಲೀಸ್‌ ಠಾಣೆ ವ್ಯಾಪ್ತಿಯ ಕಲಾದಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ 2-3 ತಿಂಗಳಿಂದ ರೈತರ ಜಮೀನುಗಳಲ್ಲಿ ಮೋಟಾರಕ್ಕೆ ಜೋಡಿಸಿದ್ದ ಕೇಬಲ್‌ಗಳನ್ನು ಕಟ್ ಮಾಡಿಕೊಂಡು ಕಳ್ಳತನ ಮಾಡಿದ ಮತ್ತು ಅ.16ರಂದು ಠಾಣಾ ವ್ಯಾಪ್ತಿಯ ನಕ್ಕರಗುಂದಿ ಆರ್.ಸಿ ಯಲ್ಲಿ ದುರ್ಗಾದೇವಿ ಗುಡಿ ಮುಂದೆ ನಿಲ್ಲಿಸಿದ್ದ ಸ್ಕೂಟಿಯ ಡಿಕ್ಕಿಯಲ್ಲಿದ್ದ ₹95 ಸಾವಿರ ಕಳ್ಳತನ ಮಾಡಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಕಳ್ಳತನಕ್ಕೆ ಬಳಸಿದ್ದ ಎರಡು ದ್ವಿಚಕ್ರವಾಹನ, ಪಕ್ಕಡ ಸಾಮಾನುಗಳು, 460 ಅಡಿ ಉದ್ದದ ಕೇಬಲ್ ಸೇರಿ ₹1,33,200 ಮೌಲ್ಯದ ವಸ್ತುಗಳು ಹಾಗೂ ಹಣ ಕಳ್ಳತನ ಮಾಡಡಿದ ಆರೋಪಿಯಿಂದ ₹1,25,000 ಮೌಲ್ಯದ ವಸ್ತುಗಳು ಸೇರಿ ಒಟ್ಟು₹2,58,200 ಮೌಲ್ಯದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಲಾದಗಿ ನಿವಾಸಿ ರವಿ ಶಂಕ್ರಪ್ಪ ಭಜಂತ್ರಿ, ತುಳಸಿಗೇರಿ ಗ್ರಾಮದ ನರಸಿಂಹ ಮೋಹನ ದೊಡಮನಿ, ಹುಸೇನ್‌ ರಸೂಲಸಾಬ ನರಗುಂದ, ಪ್ರಮೋದ ಈರಣ್ಣ ಬಡಿಗೇರ,ಹಾಗೂ ಹಣ ಕಳ್ಳತನ ಆರೋಪಿಯಾದ ಬೆಂಗಳೂರು ನಗರದ ನಂದನ ದಿಲೀಪ ನಾಯ್ಡು ಬಂಧಿತರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಹೆಚ್ಚುವರಿ ಎಸ್ಪಿ ಜಗದೀಶ ಎಂ, ಡಿವೈಎಸ್ಪಿ ಗಜಾನನ ಸುತಾರ, ಸಿಪಿಐ ಆರ್.ಎಸ್. ಬಿರಾದಾರ ಅವರ ಮಾರ್ಗದರ್ಶನದಲ್ಲಿ ಕಲಾದಗಿ ಪಿಎಸ್‍ಐ ಪ್ರವೀಣ ಬೀಳಗಿ ನೇತೃತ್ವದ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.