ಸಾರಾಂಶ
ಪಾಂಡವಪುರ ತಾಲೂಕು ಅರಳಕುಪ್ಪೆ ನಿವಾಸಿ ಎಸ್.ವಿವೇಕ್ ಅಲಿಯಾಸ್ ಮನು ಬಂಧಿತ ಆರೋಪಿ. ಈತ ಅರಕೆರೆ ವ್ಯಾಪ್ತಿಯಲ್ಲಿ ೨, ಶ್ರೀರಂಗಪಟ್ಟಣ-೨, ಪಾಂಡವಪುರ-೨, ಮೈಸೂರು-೨ ಹಾಗೂ ಕೆಆರ್‌ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೧ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
520 ಗ್ರಾಂ ಚಿನ್ನ, ಕ್ಯಾಮರಾ-ಲೆನ್ಸ್‌ಗಳು, ಬೈಕ್, ಕಾರು ಜಪ್ತಿ । ಆರೋಪಿಯಿಂದ 36 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳ ವಶ
ಕನ್ನಡಪ್ರಭ ವಾರ್ತೆ ಮಂಡ್ಯಮೈಸೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಾವು ಸಂಭವಿಸಿದ ಮನೆಗಳಲ್ಲಿ ಮನೆಯವರು ಅಂತ್ಯಕ್ರಿಯೆಗೆ ತೆರಳಿದ್ದಾಗ ಮನೆಯೊಳಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಅರಕೆರೆ ಪೊಲೀಸರು ಬಂಧಿಸಿದ್ದಾರೆ.
ಪಾಂಡವಪುರ ತಾಲೂಕು ಅರಳಕುಪ್ಪೆ ನಿವಾಸಿ ಎಸ್.ವಿವೇಕ್ ಅಲಿಯಾಸ್ ಮನು ಬಂಧಿತ ಆರೋಪಿ. ಈತ ಅರಕೆರೆ ವ್ಯಾಪ್ತಿಯಲ್ಲಿ ೨, ಶ್ರೀರಂಗಪಟ್ಟಣ-೨, ಪಾಂಡವಪುರ-೨, ಮೈಸೂರು-೨ ಹಾಗೂ ಕೆಆರ್‌ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೧ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ.ಆರೋಪಿಯಿಂದ ೩೦,೨೧,೮೦೦ ರು. ಮೌಲ್ಯದ ೫೨೧ ಗ್ರಾಂ ಚಿನ್ನ, ೩.೫೦ ಲಕ್ಷ ರು. ಮೌಲ್ಯದ ಕ್ಯಾಮರಾ, ಲೆನ್ಸ್‌ಗಳು, ೫೦ ಸಾವಿರ ರು. ಮೌಲ್ಯದ ಒಂದು ಬೈಕ್, ೨ ಲಕ್ಷ ರು. ಮೌಲ್ಯದ ಕಾರು ಸೇರಿ ಒಟ್ಟು 36,21,800 ರು. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜ.೬ರಂದು ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಹದೇವಪುರ ಗ್ರಾಮದಲ್ಲಿ ಶಿವಕುಮಾರ ಎಂಬುವರು ಮೃತಪಟ್ಟಿದ್ದು, ಶವಸಂಸ್ಕಾರಕ್ಕೆ ಮೃತನ ಕುಟುಂಬದವರು, ಅಣ್ಣನ ಮನೆಯವರೆಲ್ಲರೂ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳ ಮನೆಯ ಬೀರುವಿನಲ್ಲಿದ್ದ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿರುವುದಾಗಿ ನಟರಾಜು ಎಂಬುವರು ಅರಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈ ದೂರಿನನ್ವಯ ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಇ.ತಿಮ್ಮಯ್ಯ, ಎಸ್.ಇ.ಗಂಗಾಧರಸ್ವಾಮಿ ಹಾಗೂ ಶ್ರೀರಂಗಪಟ್ಟಣ ಡಿವೈಎಸ್ಪಿ ಮುರಳಿ ಮಾರ್ಗದರ್ಶನದಲ್ಲಿ ಆರೋಪಿಯನ್ನು ಜ.೧೬ರಂದು ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆ.ಆರ್‌ಸಾಗರ ವೃತ್ತ ನಿರೀಕ್ಷಕ ಪುನೀತ್, ಪಿಎಸ್‌ಐ ಎಂ.ಆರ್.ಬ್ಯಾಳೆ, ಎಎಸ್‌ಐ ನಟರಾಜು, ಸಿಬ್ಬಂದಿ ಸತೀಶ್, ನಾಗೇಂದ್ರ, ರಾಜಶೇಖರ್, ಶಿವಪ್ರಸಾದ್, ನಂದಗೋಪಿ, ಶಿವಕುಮಾರ್, ರವೀಶ್, ರವಿಕಿರಣ್, ಲೋಕೇಶ್ ಪಾಲ್ಗೊಂಡಿದ್ದರು.