ಸಾರಾಂಶ
ಕನ್ನಡಪ್ರಭ ವಾರ್ತೆ ಕಲಾದಗಿ
ಪಾಕಿಸ್ತಾನ ಧ್ವಜ ಹಾರಾಡುವ ರಿಲ್ಸ್ನ್ನು ವಾಟ್ಸ್ ಆ್ಯಪ್ ಸ್ಟೇಟಸ್ ಇಟ್ಟಿದ್ದ ಅನ್ಯ ಕೋಮಿನ ಯುವಕನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ಮಂಗಳವಾರ ನಡೆದಿದೆ.ಗ್ರಾಮದ ಯುವಕ ತೌಶಿಪ್ ಮೊಹಮ್ಮದ್ ಮೆಹತರ್(21) ಬಂಧಿತ ಆರೋಪಿ. ಈದ್ ಮಿಲಾದ ಹಬ್ಬದ ದಿನ ಸೆ.16 ರಂದು ರಾತ್ರಿ 11.27ಕ್ಕೆ ತನ್ನ ವಾಟ್ಸ ಆ್ಯಪ್ ಸ್ಟೇಟಸ್‌ನಲ್ಲಿ ಕಪ್ಪು ಕಾರುಗಳ ಮೇಲೆ ಪಾಕ್ ಧ್ವಜ ಹಾರಾಡುತ್ತಿರುವ ವಿಡಿಯೋದ ರಿಲ್ಸ್‌ನ್ನು ತನ್ನ ಸ್ಟೇಟಸ್‌ಗೆ ಹಾಕಿಕೊಂಡಿದ್ದ. ಇದನ್ನು ಗಮನಿಸಿದ ಹಿಂದೂ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮಾಹಿತಿ ಪಡೆದ ಠಾಣಾ ಪಿಎಸೈ ಚಂದ್ರಶೇಖರ ಹೇರಕಲ್ ಮಂಗಳವಾರ ಬೆಳಗ್ಗೆ ತೌಶಿಪ್ ಮೆಹತರ ಯುವಕನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಮಾಹಿತಿ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಲು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿಕ್ಷೆಗೆ ಆಗ್ರಹ:ಪಾಕ್ ಧ್ವಜ ಹಾರಾಡುವ ಸ್ಟೇಟಸ್‌ನ್ನು ಇಟ್ಟುಕೊಂಡ ಅನ್ಯಕೋಮಿನ ಯುವಕನ್ನು ವಿಚಾರಣೆಗೆ ಠಾಣೆಗೆ ಕರೆದುಕೊಂಡು ಬಂದ ವೇಳೆ ಹಿಂದೂ ಯುವಕರು ಪೊಲೀಸ್ ಠಾಣೆಯ ಎದುರು ಜಮಾವಣೆಗೊಂಡು ಪಾಕ್ ರಾಷ್ಟ್ರಪ್ರೇಮ ಪ್ರದರ್ಶನ ಮಾಡಿದ ಯುವಕನಿಗೆ ಕಾನೂನಿನಡಿ ಸೂಕ್ತಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ಇಂದು ಪ್ರತಿಭಟನೆ:ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಪಾಕ್ ರಾಷ್ಟ್ರಧ್ವಜ ಹಾರಾಡುವ ರಿಲ್ಸ್ ಇಟ್ಟುಕೊಂಡು ಪಾಕ್ ಪ್ರೇಮ ಮರೆದ ಅನ್ಯಕೋಮಿನ ಯುವಕ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸೆ.18 ರಂದು ಬೆಳಗ್ಗೆ 11 ಗಂಟೆಗೆ ರಂಗ ಮಂದಿರದ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಯಮನಪ್ಪ ಬೂದಿಹಾಳ, ನಿಂಗಪ್ಪ ಅಗಸರ ತಿಳಿಸಿದ್ದಾರೆ.