ಗಾಂಜಾ ಮಾರುತ್ತಿದ್ದ ಮೂವರು ಆರೋಪಿಗಳ ಬಂಧನ

| Published : Jul 27 2024, 12:46 AM IST

ಸಾರಾಂಶ

ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ೧೧ ಕೆಜಿ ಗಾಂಜಾದೊಂದಿಗೆ ಪೊಲೀಸರು ವಶಪಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ೧೧ ಕೆಜಿ ಗಾಂಜಾದೊಂದಿಗೆ ಪೊಲೀಸರು ವಶಪಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.ಸವಣೂರಿನ ಗುಲಾಮರಸೂಲಖಾನ ಹಸನಖಾನ ಖಾಂಜಾದ, ಮಲ್ಲಿಕ ರೆಹಾನ ರಿಯಾಜ್ ಅಹ್ಮದ್‌ ಬಕ್ರಿಯಾವಾಲೆ, ಪುರಖಾನ ಬಾಬಾಜಾನ ಪಟವೇಗಾರ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಸಮೀಪದ ನಾಗೇಂದ್ರನಮಟ್ಟಿಯಿಂದ ಶಾಂತಿನಗರಕ್ಕೆ ಹೋಗುವ ರಸ್ತೆ ಬದಿಯಲ್ಲಿ ಆರೋಪಿತರು ರು.೨.೯೬ ಲಕ್ಷ ಬೆಲೆಬಾಳುವ ೧೧ ಕೆಜಿ ೮೪೩ ಗ್ರಾಂ ಗಾಂಜಾವನ್ನು ಇಟ್ಟುಕೊಂಡು ಸಾಗಾಟ ಮತ್ತು ಮಾರಾಟ ಮಾಡುತ್ತಿರುವ ಸಂದರ್ಭದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಎಸ್ಪಿ ಅಂಶುಕುಮಾರ, ಎಎಸ್ಪಿ ಸಿ. ಗೋಪಾಲ್, ಡಿಎಸ್ಪಿ ಎಂ.ಎಸ್. ಪಾಟೀಲ ಮಾರ್ಗದರ್ಶನದಲ್ಲಿ ಶಹರ ಸಿಪಿಐ ಮೋತಿಲಾಲ್ ಪವಾರ, ತನಿಖಾಧಿಕಾರಿ ಎಂ.ಎಸ್. ವನಹಳ್ಳಿ, ಸಿಬ್ಬಂದಿಗಳಾದ ಎಂ.ಕಿ. ಏರೇಶಿಮಿ, ಕುಬೇರಪ್ಪ ಲಮಾಣಿ, ಮುತ್ತಪ್ಪ ಲಮಾಣಿ, ಶಂಕರಪ್ಪ ಲಮಾಣಿ, ಚನ್ನಬಸಪ್ಪ ಆರ್.ಬಿ., ನೀಲಕಂಠ ಲಿಂಗರಾಜು, ಚಂದ್ರಕಾಂತ ಎಲ್.ಆರ್., ಬಸವರಾಜ ಎನ್.ಸಿ., ಮಾಲತೇಶ ಕಬ್ಬೂರು, ಮಾರುತಿ ಹಾಲಭಾವಿ, ಸತೀಶ ಮಾರಕಟ್ಟಿ ಪಾಲ್ಗೊಂಡಿದ್ದರು.