ಶ್ರೀಗಂಧದ ಮರ ಕಡಿದ ಇಬ್ಬರು ಆರೋಪಿಗಳ ಬಂಧನ

| Published : Jun 21 2024, 01:06 AM IST

ಶ್ರೀಗಂಧದ ಮರ ಕಡಿದ ಇಬ್ಬರು ಆರೋಪಿಗಳ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ದೇವದಾನ ಸರ್ವೆ ನಂ.332ರ ಸೆಕ್ಷನ್ 4 ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರ ಕಡಿದ ಇಬ್ಬರು ಆರೋಪಿಗಳನ್ನು ಇಲಾಖೆ ಸಿಬ್ಬಂದಿ ಗುರುವಾರ ಬಂಧಿಸಿದ್ದಾರೆ.

- 6 ಕೆಜಿ ಶ್ರೀಗಂಧದ ತುಂಡು, ಎರಡು ಕತ್ತಿ , ಬೈಕ್ ವಶಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ದೇವದಾನ ಸರ್ವೆ ನಂ.332ರ ಸೆಕ್ಷನ್ 4 ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರ ಕಡಿದ ಇಬ್ಬರು ಆರೋಪಿಗಳನ್ನು ಇಲಾಖೆ ಸಿಬ್ಬಂದಿ ಗುರುವಾರ ಬಂಧಿಸಿದ್ದಾರೆ.ಹುಣಸೇಹಳ್ಳಿಯ ಕೆ.ಚಂದ್ರಶೇಖರ್ ಹಾಗೂ ಬೆರಣಗೋಡುವಿನ ಬಿ.ಎಂ.ನಿತಿನ್‌ಕುಮಾರ್ ಬಂಧಿತ ಆರೋಪಿಗಳು. ಈ ಇಬ್ಬರು ಆರೋಪಿಗಳು ದೇವದಾನ ಸೆಕ್ಷನ್ 4 ಅರಣ್ಯದ 127 ನೇ ಬ್ಲಾಕ್‌ನಲ್ಲಿ ಅಕ್ರಮ ವಾಗಿ ಎರಡು ಶ್ರೀಗಂಧದ ಮರಗಳನ್ನು ಕಡಿತಲೆ ಮಾಡಿರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆ ಯಲ್ಲಿ ಸಿಬ್ಬಂದಿ ದಾಳಿ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.ಆರೋಪಿಗಳಿಂದ 6 ಕೆಜಿ ಶ್ರೀಗಂಧದ ತುಂಡುಗಳು, ಎರಡು ಕತ್ತಿ ಹಾಗೂ ಬೈಕ್ ವಶಕ್ಕೆ ಪಡೆಯ ಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಎಸಿಎಫ್ ಚೇತನ್ ಮಂಗಲ್ ಗಸ್ತಿ ಅವರ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಸಂದೀಪ್, ಡಿಆರ್‌ಎಫ್‌ಒ ಮಂಜುನಾಥ್, ಸಿಬ್ಬಂದಿ ಯೋಗಾನಂದ, ಕಾರ್ತಿಕ್, ಪ್ರಕಾಶ್, ಮಂಜುನಾಥ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.೨೦ಬಿಹೆಚ್‌ಆರ್ ೧:೨೦ಬಿಹೆಚ್‌ಆರ್ ೧: ಬಾಳೆಹೊನ್ನೂರು ಸಮೀಪದ ದೇವದಾನ ಸೆಕ್ಷನ್ 4 ಅರಣ್ಯದಲ್ಲಿ ಅಕ್ರಮವಾಗಿ ಶ್ರೀಗಂಧ ಕಡಿದ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ. ಎಸಿಎಫ್ ಚೇತನ್ ಗಸ್ತಿ, ಆರ್‌ಎಫ್‌ಓ ಸಂದೀಪ್, ಡಿಆರ್‌ಎಫ್‌ಓ ಮಂಜುನಾಥ್ ಇದ್ದರು.