ಸಾರಾಂಶ
ಹಾಸನದಲ್ಲಿ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯದ ವಿಡಿಯೋವನ್ನು ಪೆನ್ ಡ್ರೈವ್, ಸಾಮಾಜಿಕ ಜಾಲತಾಣಗಳ ಮೂಲಕ ಹರಿ ಬಿಡುತ್ತಿರುವುದು ಖಂಡನಿಯ. ಸಂತ್ರಸ್ತ ಮಹಿಳೆಯರ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಪ್ರಕರಣದ ಪ್ರಮುಖ ಆರೋಪಿಯಾದ ಸಂಸದ ಪ್ರಜ್ವಲ್‌ರೇವಣ್ಣ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು
ಫೋಟೋ- 7ಎಂವೈಎಸ್14
----ಕನ್ನಡಪ್ರಭ ವಾರ್ತೆ ಮೈಸೂರು
ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಹಾಸನದ ಸಂಸದ ಪ್ರಜ್ವಲ್‌ರೇವಣ್ಣ ಅವರನ್ನು ಬಂಧಿಸಬೇಕು ಹಾಗೂ ರೋಹಿತ್‌ವೆಮುಲ ಅವರ ಸಾವಿನ ಕುರಿತು ಮರು ತನಿಖೆಗೆ ಆಗ್ರಹಿಸಿ ಮೈಸೂರು ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿ ಒಕ್ಕೂಟ ಮತ್ತು ಸಂಶೋಧಕರ ಸಂಘದವರು ಮಾನಸ ಗಂಗೋತ್ರಿ ಕುವೆಂಪು ಪ್ರತಿಮೆ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.ಹಾಸನದಲ್ಲಿ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯದ ವಿಡಿಯೋವನ್ನು ಪೆನ್ ಡ್ರೈವ್, ಸಾಮಾಜಿಕ ಜಾಲತಾಣಗಳ ಮೂಲಕ ಹರಿ ಬಿಡುತ್ತಿರುವುದು ಖಂಡನಿಯ. ಸಂತ್ರಸ್ತ ಮಹಿಳೆಯರ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಪ್ರಕರಣದ ಪ್ರಮುಖ ಆರೋಪಿಯಾದ ಸಂಸದ ಪ್ರಜ್ವಲ್‌ರೇವಣ್ಣ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಇನ್ನೂ ರೋಹಿತ್‌ವೆಮುಲ ಅವರದ್ದು ಹತ್ಯೆಯಲ್ಲ ಎಂದು ಬಿಂಬಿಸಿ ಪ್ರಕರಣ ವಜಾಗೊಳಿಸುವ ಹುನ್ನಾರ ನಡೆಯುತ್ತಿದೆ. ವೆಮುಲ ಅವರ ತಾಯಿಯ ಹೇಳಿಕೆ ಆಧರಿಸಿ ಅವರ ಸಾವನ್ನು ಹತ್ಯೆಯೆಂದು ಪರಿಗಣಿಸಿ ಮರು ತನಿಖೆ ಮಾಡಬೇಕು. ಆತ ಪರಿಶಿಷ್ಟ ಜಾತಿಯ ವ್ಯಕ್ತಿ ಎಂಬ ಕಾರಣಕ್ಕೆ ಹತ್ಯೆಯಾಗಿದೆ. ಸತ್ಯಾಂಶವನ್ನು ಮುಚ್ಚಿ ಹಾಕುವ ಕೆಲಸ ಸರಿಯಲ್ಲ ಎಂದು ಅವರು ಕಿಡಿಕಾರಿದರು.ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸಚಿನ್, ಗೌರವಾಧ್ಯಕ್ಷ ಗಿರೀಶ್ ಬೆಂಡರವಾಡಿ, ಸಂಶೋಧಕ ಸಂಘದ ಮಹೇಶ್‌ಆರೋಹಳ್ಳಿ ಮೊದಲಾದವರು ಇದ್ದರು.