ಉಡುಪಿಗೆ ಮಂತ್ರಾಲಯ ಶ್ರೀಗಳ ಆಗಮನ

| Published : Dec 30 2023, 01:15 AM IST

ಸಾರಾಂಶ

ಉಡುಪಿಯಲ್ಲಿ ಎರಡು ದಿನಗಳ ಮೊಕ್ಕಾಂಗಾಗಿ ತಮ್ಮ ಪಟ್ಟದ ದೇವರೊಂದಿಗೆ ಆಗಮಿಸಿರುವ ಮಂತ್ರಾಲಯ ಶ್ರೀಗಳು, ರಥಬೀದಿಯ ರಾಘವೇಂದ್ರ ಮಠದಲ್ಲಿ ಸಂಸ್ಥಾನ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಶ್ರೀ ಕೃಷ್ಣಮಠಕ್ಕೆ, ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಆಮಂತ್ರಣದ ಮೇರೆಗೆ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಾಧೀಶರಾದ ಶ್ರೀ ಸುಭುದೇಂದ್ರ ಶ್ರೀಪಾದರು ಶುಕ್ರವಾರ ಉಡುಪಿಗೆ ಆಗಮಿಸಿದರು.

ಅವರನ್ನು ಪರ್ಯಾಯ ಶ್ರೀಗಳು ಕೃಷ್ಣಮಠದ ಮುಂಬಾಗಿಲಿನಲ್ಲಿ ವಾದ್ಯಘೋಷಗಳೊಂದಿಗೆ ಗೌರವದಿಂದ ಬರ ಮಾಡಿಕೊಂಡು ಶ್ರೀ ಕೃಷ್ಣಮುಖ್ಯ ಪ್ರಾಣದೇವರ ದರ್ಶನ ಮಾಡಿಸಿದರು.

ಉಡುಪಿಯಲ್ಲಿ ಎರಡು ದಿನಗಳ ಮೊಕ್ಕಾಂಗಾಗಿ ತಮ್ಮ ಪಟ್ಟದ ದೇವರೊಂದಿಗೆ ಆಗಮಿಸಿರುವ ಮಂತ್ರಾಲಯ ಶ್ರೀಗಳು, ರಥಬೀದಿಯ ರಾಘವೇಂದ್ರ ಮಠದಲ್ಲಿ ಸಂಸ್ಥಾನ ಪೂಜೆ ನೆರವೇರಿಸಿದರು.