ಸಾರಾಂಶ
ವಿಶ್ವಭಾಗ್ಯ ಹಸ್ಮಕಲ್ ಪ್ರಕಾಶನ ಉದ್ಘಾಟನಾ ಸಮಾರಂಭ, ಚುಟುಕು ಕವಿಗೋಷ್ಠಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಕಲೆ, ಸಾಹಿತ್ಯ ಮತ್ತು ಸಂಗೀತ ಎಲ್ಲರ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಶನಿವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಚಿಕ್ಕಮಗಳೂರು ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಉಪಾಧ್ಯಕ್ಷೆ ಗೀತಾ ಹಸ್ಮಕಲ್, ವಿಜಯಪುರ ಕ.ಲೇ.ಸಂ.ಸದಸ್ಯೆ ದಿವ್ಯ ಪಾರ್ವತಿ ವಿ. ಏರ್ಪಡಿಸಿದ್ದ ವಿಶ್ವಭಾಗ್ಯ ಹಸ್ಮಕಲ್ ಪ್ರಕಾಶನ ಉದ್ಘಾಟನಾ ಸಮಾರಂಭ ಹಾಗೂ ಚುಟುಕು ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅತ್ಯಂತ ಸರಳ, ನೇರ ನುಡಿಯ ಧೀಮಂತ ವ್ಯಕ್ತಿಯಾದ ವಿಶ್ವನಾಥ ಹಸ್ಮಕಲ್ ವಚನ ಸಾಹಿತ್ಯದಲ್ಲೂ ಶ್ರೀಮಂತ ವಾಗಿದ್ದಾರೆ. ಶರಣರ ಪರಿಕಲ್ಪನೆಯನ್ನು ಅವರ ವಚನಗಳಲ್ಲಿ ಕಾಣಬಹುದು. ಅವರು ಹುರಿದುಂಬಿಸುವಂತಹ ಆಶಯ ಹೊಂದಿದ್ದರು. ಜಾತಿ, ಮತ, ಪಂಥ ಮೀರಿ ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಗುಣ ಅವರಲ್ಲಿ ಕಾಣಬಹುದಾಗಿತ್ತು. ಮಕ್ಕಳು ತಂದೆಯವರ ಹೆಸರನ್ನು ಉಳಿಸಿದ್ದಾರೆ. ವಿಶ್ವನಾಥ್ ಹಸ್ಮಕಲ್ ರಚಿಸಿರುವ ವಚನಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಬಳಿ ಮಾತನಾಡುತ್ತೇನೆ. ನಾವೆಲ್ಲರೂ ನಿಮ್ಮ ಜೊತೆ ಇರುತ್ತೇವೆ ಎಂದು ಹೇಳಿದರು.ಕನ್ನಡಶ್ರೀ ಬಿ.ಎಸ್.ಭಗವಾನ್ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ ವಿಶ್ವನಾಥ್ ಹಸ್ಮಕಲ್ ಅತ್ಯಂತ ಸರಳ ವ್ಯಕ್ತಿ. ಅವರಲ್ಲಿ ಸಾಹಿತ್ಯಜ್ಞಾನ ಅಪಾರವಾಗಿತ್ತು. ಸಜ್ಜನ ವಿಶ್ವನಾಥ್ ಹಸ್ಮಕಲ್ ಸ್ವಾಭಿಮಾನದಿಂದ ಜೀವನ ನಡೆಸಿದರು, ಅದಮ್ಯ ಜ್ಞಾನ ಉಣಬಡಿಸಿದರು, ಅವರು ಅಂತರಂಗದ ಜ್ಞಾನಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು. ಅಪಾರವಾದ ಜ್ಞಾನ ಭಂಡಾರ ಮತ್ತು ವಿದ್ವತ್ತು ಅವರಲ್ಲಿತ್ತು ಎಂದು ತಿಳಿಸಿ ಹಸ್ಮಕಲ್ ಅವರು ರಚಿಸಿದ ವಚನದ ಗಾಯನ ಮಾಡಿದರು.ಚಿಕ್ಕಮಗಳೂರು ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಉಪಾಧ್ಯಕ್ಷೆ ಗೀತಾ ಹಸ್ಮಕಲ್ ಮಾತನಾಡಿ ನಮ್ಮ ತಂದೆ ವಿಶ್ವನಾಥ್ ಹಸ್ಮಕಲ್ ಕವಿ ಹೃದಯದವರು. ಎಲೆ ಮರೆ ಕಾಯಿಯಂತೆ ಸಾಹಿತ್ಯ ಸೇವೆ ಮಾಡಿದ್ದಾರೆ. ತಂದೆಯವರಿಂದ ಸಾಹಿತ್ಯ ಆಸಕ್ತಿ ನಮಗೆ ಬಳುವಳಿಯಾಗಿದೆ. ಅವರುಪುಸ್ತಕ ಬಿಡುಗಡೆಗೆ ಬಹಳ ಕಷ್ಟ ಪಡುತ್ತಿದ್ದರು. ಅದನ್ನು ಮನಗಂಡು ನಾವು ಅವರ ಹೆಸರಿನಲ್ಲಿ ಪ್ರಕಾಶನ ಸಂಸ್ಥೆ ಪ್ರಾರಂಭಿಸಿದ್ದೇವೆ ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ತಿಳಿಸಿದರು.ಸಾಹಿತಿ ಮನಸುಳಿ ಮೋಹನ್ ಮಾತನಾಡಿ ಚಿಕ್ಕಮಗಳೂರು ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಉಪಾಧ್ಯಕ್ಷೆ ಗೀತಾ ಹಸ್ಮಕಲ್ ತಂದೆಯ ಹೆಸರು ಉಳಿಸುವ ಕಾರ್ಯ ಮಾಡಿದ್ದಾರೆ. ಅವರು ನಿಜವಾದ ಗಟ್ಟಿತನದ ಕೆಲಸ ನಿರ್ವಹಿಸಿದ್ದಾರೆ ಎಂದು ಹೇಳಿದರು.
ರಾಜ್ಯ ಯುವ ಸಂಘಗಳ ಒಕ್ಕೂಟ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಇಮ್ರಾನ್ ಅಹಮದ್ ಬೇಗ್ ಮಾತನಾಡಿ ವಿಶ್ವನಾಥ್ ಹಸ್ಮಕಲ್ ಆಧುನಿಕ ವಚನಗಳನ್ನು ರಚಿಸಿದ್ದಾರೆ. ವಚನಗಳ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗಿದ್ದಾರೆ, ಪ್ರತಿಯೊಬ್ಬರಲ್ಲೂ ಕಲೆ ಅಡಗಿರುತ್ತದೆ. ದಾನಗುಣ ಅವರಲ್ಲಿತ್ತು ಪ್ರಕಾಶನ ಸಂಸ್ಥೆ ಯಶಸ್ವಿಯಾಗಲಿ ಎಂದು ತಿಳಿಸಿದರು.ಪುರಸಭಾ ಸದಸ್ಯ ಟಿ.ದಾದಾಪೀರ್ ಮಾತನಾಡಿ ಪ್ರಕಾಶನ ಸಂಸ್ಥೆ ಹೆಮ್ಮರವಾಗಿ ಬೆಳೆಯಬೇಕು, ಕಸಾಪ ಪ್ರಕಾಶನ ಸಂಸ್ಥೆಯನ್ನು ಬೆಳೆಸಬೇಕು ಎಂದು ತಿಳಿಸಿ ಚುಟುಕು ಕವನ ವಾಚಿಸಿದರು.ಎಂ.ಎಸ್.ನಾಗರಾಜ್, ಹುಲಿಕೆರೆ ಮಂಜುನಾಥ್, ಚಿತ್ರಶೇಖರಪ್ಪ, ವಿಜಯ್ ಎಚ್.ಡಿ. ಪ್ರಕೃತಿಶ್ರೀ ಕಲಾ ಕುಟೀರ ಅಧ್ಯಕ್ಷೆ ಉಮಾ ಪ್ರಕಾಶ್, ಸಾಹಿತಿ ಡಾ.ನಾಗಜ್ಯೋತಿ, ಸೈಯದ್ ಮುಹೀಬುಲ್ಲಾ, ಲೋಕೇಶಪ್ಪ, ಜಯಪುರ ಚಂದ್ರಪ್ಪ, ವಿರುಪಾ ಕ್ಷರಪ್ಪ, ವಿಜಯಪುರ ಕ.ಲೇ.ಸಂ.ಸದಸ್ಯರು ದಿವ್ಯ ಪಾರ್ವತಿ ವಿ. ಕಸಾಪ ಮಹಿಳಾ ಘಗಟಕ ಅಧ್ಯಕ್ಷೆ ಸುನಿತಾ ಕಿರಣ್, ಮತ್ತಿತರರು ಭಾಗವಹಿಸಿದ್ದರು.24ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ನಡೆದ ವಿಶ್ವಭಾಗ್ಯ ಹಸ್ಮಕಲ್ ಪ್ರಕಾಶನ ಹಾಗೂ ಚುಟುಕು ಕವಿಗೋಷ್ಠಿಯನ್ನುಕನ್ನಡಶ್ರೀ ಬಿ.ಎಸ್.ಭಗವಾನ್ ಉದ್ಘಾಟಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಚಿಕ್ಕಮಗಳೂರು ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಉಪಾಧ್ಯಕ್ಷೆ ಗೀತಾ ಹಸ್ಮಕಲ್ ಮತ್ತಿತರರು ಇದ್ದರು. ---------------------