ದೇಶದ ಕಲೆ. ಸಂಸ್ಕೃತಿಗೆ ಬಂಜಾರ ಕೊಡುಗೆ ಅಪಾರ

| Published : May 14 2024, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಬಂಜಾರ ಸಮುದಾಯ ಸಂಸ್ಕೃತಿ ಪರಂಪರೆಯಲ್ಲಿ ತನ್ನದೆಯಾದ ವೇಷಭೂಷಣದಿಂದ ಭಾರತೀಯ ಶ್ರೀಮಂತ ಕಲಾ ಸಂಸ್ಕ್ರತಿಗೆ ಅಪಾರ ಕೊಡುಗೆ ನೀಡಿದೆ ಎಂದು ಕೇಸರಟ್ಟಿಯ ಸೋಮಲಿಂಗ ಮಹಾರಾಜರು ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಬಂಜಾರ ಸಮುದಾಯ ಸಂಸ್ಕೃತಿ ಪರಂಪರೆಯಲ್ಲಿ ತನ್ನದೆಯಾದ ವೇಷಭೂಷಣದಿಂದ ಭಾರತೀಯ ಶ್ರೀಮಂತ ಕಲಾ ಸಂಸ್ಕ್ರತಿಗೆ ಅಪಾರ ಕೊಡುಗೆ ನೀಡಿದೆ ಎಂದು ಕೇಸರಟ್ಟಿಯ ಸೋಮಲಿಂಗ ಮಹಾರಾಜರು ಬಣ್ಣಿಸಿದರು.

ಪಟ್ಟಣದ ಗಣೇಶ ನಗರದಲ್ಲಿರುವ ಯಲ್ಲಾಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಗೋರ್(ಬಂಜಾರ) ಮಾಳಾವ್‌, ಅರಕೇರಿ-೨ರ ಎಎಂಆರ್‌ ಸಂಕಲ್ಪ ಸಂವೀಜಿನಿ ಸಂಸ್ಥೆಯ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಂಜಾರ ಕಲಾಮೇಳ ಹಾಗೂ ರಾಜ್ಯಮಟ್ಟದ ಬಂಜಾರ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಬಂಜಾರ ಸಂಸ್ಕ್ರತಿಯು ಸಾಂಸ್ಕ್ರತಿಕವಾಗಿ ಶ್ರೀಮಂತ ಪರಂಪರೆ ಹೊಂದಿದೆ. ಈ ಸಮುದಾಯದವರು ಆರ್ಥಿಕವಾಗಿ ಬಡವರಾದರೂ ಸಾಂಸ್ಕ್ರತಿಕವಾಗಿ ಶ್ರೀಮಂತವಾಗಿರುವ ಬಂಜಾರ ಸಮುದಾಯದ ಪ್ರದರ್ಶನ ಕಲೆ, ವೇಷಭೂಷಣ, ಮೌಖಿಕ ಸಾಹಿತ್ಯ ಆಧುನೀಕರಣದ ಪ್ರಭೆಯಲ್ಲಿ ಮಂಕಾಗಬಾರದು. ನಮ್ಮ ಸಮುದಾಯ ಬಾಂಧವರು ಯಾವುದೇ ಕಾರಣಕ್ಕೂ ಅನ್ಯ ಧರ್ಮಕ್ಕೆ ಮತಾಂತರವಾಗಬಾರದು. ವೈಶಿಷ್ಟಪೂರ್ಣ, ಶ್ರೇಷ್ಠ ಸಂಸ್ಕ್ರತಿಯಾದ ಬಂಜಾರ ಕಲೆ ಮತ್ತು ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಕಾರ್ಯವಾದರೆ ಮಾತ್ರ ಬಂಜಾರ ಸಮಾಜ ಇನ್ನು ಮುಂದುವರೆಯಲು ಸಾಧ್ಯವಾಗುತ್ತದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗೋರ್ ಮಳಾವ್ ಸಂಘಟನೆಯ ಕಾರ್ಯಾಧ್ಯಕ್ಷ ಜಯಸಿಂಹ ಖಾಟ್ರೋತ, ರಾಜ್ಯ ಸಂಚಾಲಕ ಎಸ್.ಪಿ.ಲಿಂಬ್ಯಾನಾಯಕ, ಮಲ್ಲಿಕಾರ್ಜುನ ನಾಯಕ, ರವಿ ರಾಠೋಡ, ಹರಿಲಾಲ ನಾಯಕ, ಬಾಬು ಚವ್ಹಾಣ, ಶಾಂತು ರಾಠೋಡ, ಬಾಳು ರಾಠೋಡ, ಶಿವಾಜಿ ರಾಠೋಡ, ಬಸವರಾಜ ಲಮಾಣಿ, ಲಕ್ಷ್ಮಣ ರಾಠೋಡ, ರುಕ್ಮಿಣಿ ರಾಠೋಡ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಲಯ ಆಯುಕ್ತ ಬಸವರಾಜ ಲಮಾಣಿ ಸೇರಿದಂತೆ ಇತರರು ಭಾಗವಹಿಸಿದ್ದರು. ರಾಷ್ಟ್ರೀಯ ಗೋರ್ ಮಳಾವ್‌ ರಾಜ್ಯಾಧ್ಯಕ್ಷ ಡಾ.ಬಸವರಾಜ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸರಿಗಮಪ ಖ್ಯಾತಿಯ ಗಾಯಕ ರಮೇಶ ಲಮಾಣಿ, ಗಾಯಕ ಆರ್.ಬಿ.ನಾಯಕ, ಪುಂಡಲಿಕ ಲಮಾಣಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜ್ ಬಾಂಧವರಿಗೆ ಬಂಜಾರಾ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ವ ತಾಯಂದಿರ ದಿನಾಚರಣೆಯ ಅಂಗವಾಗಿ ಬಳ್ಳಾವುರ ತಾಂಡೆದ ೧೦೧ನೇ ಜನ್ಮದಿನಾಚರಣೆ ಆಚರಿಸಿಕೊಳ್ಳುತ್ತಿರುವ ಸೋನಾಬಾಯಿ ಹಾಪಸು ಪವಾರ ಅವರಿಗೆ ತುಲಾಭಾರ ನಡೆಸಲಾಯಿತು. ಮೋತಿಲಾಲ ರಾಠೋಡ ಸ್ವಾಗತಿಸಿದರು. ಪುಂಡಲೀಕ ಲಮಾಣಿ ನಿರೂಪಿಸಿದರು. ವಸಂತ ಚವ್ಹಾಣ ವಂದಿಸಿದರು. ಬಂಜಾರಾ ಕಲಾಮೇಳ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳ ಕಲಾವಿದರು ಭಾಗವಹಿಸಿದ್ದರು