ನಾದಸ್ವರ, ಹಗಲು ವೇಷ, ಹಾಲಕ್ಕಿ ಸುಗ್ಗಿ ಕುಣಿತ, ಅರೆವಾದ್ಯ, ಕರಡಿ ಮಜಲು, ಲಂಬಾಣಿ ನೃತ್ಯ, ಡೊಳ್ಳುಕುಣಿತ
-------------ಎಲ್.ಎಸ್. ಶ್ರೀಕಾಂತ್ಕನ್ನಡಪ್ರಭ ವಾರ್ತೆ ಮೈಸೂರುವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಬುಧವಾರ ನಡೆದ ಜಂಬೂ ಸವಾರಿಯಲ್ಲಿ ವಿವಿಧ ರಾಜ್ಯಗಳ ಹಾಗೂ ಕರ್ನಾಟಕದ ರಾಜ್ಯದ ವಿವಿಧ ಭಾಗಗಳಿಂದ ವೈವಿಧ್ಯಮಯ ಜನಪದ ಮತ್ತು ಸಾಂಸ್ಕೃತಿಕ ಕಲಾ ತಂಡಗಳು ಪಾಲ್ಗೊಂಡು ತಮ್ಮ ಸಾಂಪ್ರದಾಯಿಕ ಕಲೆಗಳನ್ನು ಪ್ರದರ್ಶಿಸಿದರು.ನಾದಸ್ವರ, ಹಗಲು ವೇಷ, ಹಾಲಕ್ಕಿ ಸುಗ್ಗಿ ಕುಣಿತ, ಅರೆವಾದ್ಯ, ಕರಡಿ ಮಜಲು, ಲಂಬಾಣಿ ನೃತ್ಯ, ಡೊಳ್ಳುಕುಣಿತ, ತಮಟೆ ಹಾಗೂ ಇನ್ನಿತರ ಜಾನಪದ ಪ್ರಕಾರಗಳು ಈ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು.ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಕಲಾವಿದರು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಸಾಗುವ ಮೆರವಣಿಗೆಯಲ್ಲಿ ಲಕ್ಷಾಂತರ ಜನರಿಗೆ ತಮ್ಮ ಕಲಾ ವೈಭವವನ್ನು ಪ್ರದರ್ಶಿಸಿದರು.ಪ್ರತಿಬಾರಿ ಜಂಬೂ ಸವಾರಿಯಲ್ಲಿ 80 ರಿಂದ 90 ಕಲಾ ತಂಡಗಳಿಗೆ ಅವಕಾಶ ನೀಡಲಾಗುತ್ತಿದ್ದು, ಆದರೆ ಈ ಬಾರಿ ಇತರೆ ರಾಜ್ಯಗಳ ಕಲಾ ತಂಡಗಳು ಸೇರಿದಂತೆ 50 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಜಂಬೂ ಸವಾರಿಯಲ್ಲಿ ಮೇಳೈಸಿದ ಕಲಾತಂಡಗಳು ಮೊದಲಿಗೆ ನಾದಸ್ವರ ತಂಡವು ಸಾಗಿತು. ವಿಶಿಷ್ಟ ಜನಪದ ಕಲೆ ಮತ್ತು ಅಲೆಮಾರಿ ಸಂಪ್ರದಾಯವಾದ ಹಗಲುವೇಷ ತಂಡವು ಉತ್ತಮವಾಗಿ ಪ್ರದರ್ಶನ ನೀಡಿತು. ಪ್ರಾಚೀನ ಹಾಗೂ ವಿಶಿಷ್ಟವಾದ ಧಾರ್ಮಿಕ ಮತ್ತು ಜನಪದ ಕಲೆಯಾದ ಪುರವಂತಿಕೆ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕುಮಟಾ ಮತ್ತು ಕಾರವಾದ ಹಾಲಕ್ಕಿ ಒಕ್ಕಲಿಗರು ನಡೆಸಿಕೊಟ್ಟ ಪ್ರಸಿದ್ದ ಜನಪದ ಕಲೆಯಾದ ಹಾಲಕ್ಕಿ ಸುಗ್ಗಿ ಕುಣಿತ, ಅರೆವಾದ್ಯ, ಕೊಂಬು ಕಹಳೆ ನುಡಿಸಿದ ತಂಡವನ್ನು ಸಾರ್ವಜನಿಕರು ಚಪ್ಪಾಳೆಯೊಂದಿಗೆ ಅಭಿನಂದಿಸಿದರು. ಜನಪದ ಕಲೆ, ಶೈವ ಸಂಪ್ರದಾಯದ ವೀರರಸ ಪ್ರಧಾನವಾದ ಧಾರ್ಮಿಕ ಕುಣಿತವಾದ ವೀರಭದ್ರ ಕುಣಿತ ಜಂಬೂ ಸವಾರಿಯಲ್ಲಿ ಉತ್ತಮವಾಗಿ ಪ್ರದರ್ಶಿಸಿದರು. ಚಿಟ್ಟಿಮೇಳ, ಮಹಿಳಾ ಕೋಲಾಟಬಿದಿರಿನ ದಬ್ಬೆಗಳು, ಮತ್ತು ಬಟ್ಟೆಯನ್ನು ಬಳಸಿ ಕುದುರೆಯ ಆಕಾರವನ್ನು ತಯಾರಿಸಿ, ಕಲಾವಿದರು ಅದರೊಳಗೆ ನಿಂತ ಕುಣಿಯುವ ಕೀಲು ಕುದುರೆ, ಕರ್ನಾಟಕದ ಜನಪ್ರಿಯ ಜನಪದ ವಾದ್ಯ ಹಾಗೂ ಕಲಾ ಪ್ರಕಾರವಾದ ವಿಶೇಷವಾಗಿ ಹಬ್ಬಗಳು, ಜಾತ್ರೆಗಳು ಮತ್ತು ಗ್ರಾಮದ ಉತ್ಸವಗಳಲ್ಲಿ ನುಡಿಸಲಾಗುವ ಚಿಟ್ಟಿಮೇಳ, ಕರ್ನಾಟಕ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಸಾಂಪ್ರದಾಯಿಕ ಜನಪದ ನೃತ್ಯ ಕಲೆಯಾದ ಮಹಿಳಾ ಕೋಲಾಟ, ದೇವಸ್ಥಾನದ ಉತ್ಸವಗಳಲ್ಲಿ ಪ್ರಮುಖವಾಗಿ ನುಡಿಸುವ ಶಹನಾಯಿ ವಾದನ ತಂಡ ಭಾಗವಹಿಸಿದ್ದವು. ಖಾಸಾ ಬೇಡರ ಪಡೆ ಭಾರತೀಯ ಸಾಂಪ್ರದಾಯಿಕ ಸಂಗೀತದಲ್ಲಿ ಬಳಸಲಾಗುವ ತಾಸೇವಾದನ, ಚಿತ್ರದುರ್ಗದ ಪಾಳೇಯಗಾರರ ಆಡಳಿತಾವಧಿಯಲ್ಲಿ ಅತ್ಯಂತ ಪ್ರಸಿದ್ದಿಯಾಗಿದ್ದ ಒಂದು ವಿಶಿಷ್ಟ ಹಾಗೂ ನಿಪುಣ ಸೈನಿಕ ಪಡೆ ಖಾಶಾ ಬೇಡರ ಪಡೆ ನೃತ್ಯವು ಆಕರ್ಷವಾಗಿತ್ತು. ಕುಡುಬಿ ನೃತ್ಯ, ಪೂಜಾ ಕುಣಿತಕರ್ನಾಟಕ ಕರಾವಳಿ ಭಾಗದಲ್ಲಿರುವ ಕುಡಬಿ ಜನಾಂಗದವರು ಪ್ರದರ್ಶಿಸುವ ಸಾಂಪ್ರದಾಯಿಕ ಜನಪದ ನೃತ್ಯವಾದ ಕುಡುಬಿ ನೃತ್ಯ, ಕರ್ನಾಟಕದ ಮುಖ್ಯವಾಗಿ ಮಂಡ್ಯ ಜಿಲ್ಲೆಯ ಜನಪದ ನೃತ್ಯ ಪ್ರಕಾರವಾದ ಶಕ್ತಿದೇವತೆ ಮತ್ತು ಗ್ರಾಮದೇವತೆಗಳ ಆರಾಧನೆಯ ಪೂಜಾ ಕುಣಿತ ತಂಡ ಮೆರವಣಿಗೆಯಲ್ಲಿ ಉತ್ತಮವಾಗಿ ಪ್ರದರ್ಶಿಸಿದರು. ಆಕರ್ಷಕ ಮಹಿಳಾ ವೀರಗಾಸೆ ಮಹಿಳಾ ವೀರಗಾಸೆಯು ಕ್ರನಾಟಕದ ಒಂದು ಜಾನಪದಕಲೆ, ಶೈವ ಸಂಪ್ರದಾಯದ ವೀರರಸ ಪ್ರಧಾನವಾದ ಧಾರ್ಮಿಕ ಕುಣಿತ ಕೊರಳಲ್ಲಿ ರುದ್ರಾಕ್ಷಿಸರ, ಹಣೆಗೆ ವಿಭೂತಿ, ಕಿವಿಯಲ್ಲಿ ಕುಂಡಲ, ಸೊಂಟಕ್ಕೆ ಸೊಂಟಪಟ್ಟಿ, ಕೈಯಲ್ಲಿ ಬಿಚ್ಚುಗತ್ತಿ, ಕಲಲ್ಲಿ ಗೆಜ್ಜೆ ಧರಿಸಿ ಮಹಿಳೆಯರು ನರ್ತಿಸಿದ್ದು ನೋಡಗರನ್ನು ಆಕರ್ಷಿಸಿತು. ಜಗ್ಗಲಿಗೆ, ಕಂಗೀಲು ನೃತ್ಯ ಕರ್ನಾಟಕದ ವಿಶಿಷ್ಟ ಜನಪದ ಕಲೆಯಾದ ಗೊರವರನ ಕುಣಿತ, ಕಲಾವಿದರು ಜಗ್ಗಲಿಗೆಯನ್ನು ನೆಲದ ಮೇಲೆ ಉರುಳಿಸುತ್ತ ಭಾರಿಸಿದ ಜಗ್ಗಲಿಗೆ ಮೇಳ ತಂಡ, ಕರಾವಳಿ ಭಾಗದ ಉಡುಪಿ ಮತ್ತು ಮಂಗಳೂರಿನಲ್ಲಿ ಕಂಗೀಲು ನೃತ್ಯ, ಹಳ್ಳಿಯ ಸಾಂಸ್ಕೃತಿಕ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವ ತಮಟೆ ಬಾರಿಸುತ್ತ ವೀಕ್ಷಕರಿಗೆ ಮನರಂಜನೆ ನೀಡಿದರು. ಋಷಿಯಿಂದ ನರ್ತಿಸಿದ ಗೋರುಕನ ನೃತ್ಯ ತಂಡಆದಿವಾಸಿ ಸೋಲಿಗರಲ್ಲಿ ವರ್ಷಕ್ಕೊಂದು ಬಾರಿ ವಿಶೇಷವಾದ ಹಬ್ಬವಾದ ರೋಟ್ಟಿ ಹಬ್ಬದಲ್ಲಿ ಗೋಕುಕನ ನೃತ್ಯ ಮಾಡುತ್ತಾರೆ. ಮಹಿಳಾ ಡೊಳ್ಳು ತಂಡ ಉತ್ತಮ ಪ್ರದರ್ಶನ ನೀಡಿದರು. ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಹೆಸರುವಾಸಿಯಾದ ಗಾರುಡಿ ಗೊಂಬೆ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಅತ್ಯಂತ ಆಕರ್ಷಕ ಮತ್ತು ಸಾಂಪ್ರದಾಯಕಿ ಧಾರ್ಮಿಕ ಜನಪದ ಕಲೆಯಾದ ಸುತ್ತಿಗೆ ಕುಣಿತ ತಂಡ ಪ್ರದರ್ಶನ ನೀಡಿದರು. ಸಿದ್ಧಿ ಡಮಾಮಿ ನೃತ್ಯಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಜನಾಂಗದ ಒಂದು ಅನನ್ಯ ಸಾಂಪ್ರದಾಯಿಕ ಜಾನಪದ ನೃತ್ಯ ಸಿದ್ಧಿ ಡಮಾಮಿ ನೃತ್ಯ ಪ್ರದರ್ಶನ ಅಚ್ಚರಿ ಮೂಡಿಸಿದರು. ಕರಾವಳಿ ಭಾಗದ ಜಿಲ್ಲೆಗಳಾದ ಮಂಗಳೂರು, ಉಡುಪಿಯಲ್ಲಿ ಜನಪ್ರಿಯಾದ ಹುಳಿವೇಷ, ವಾರ್ಷಿಕ ಪೂರಂ ಹಬ್ಬಗಳ ಸಮಯದಲ್ಲಿ ಪ್ರದರ್ಶಿಸುವ ಪೂತನ್ ಥಿರಾ ನೃತ್ಯ ಪ್ರದರ್ಶಿಸಿದರು. ತುಳುನಾಡಿನ ಯಕ್ಷಗಾನತುಳುನಾಡಿನ ನೃತ್ಯ, ಸಂಗೀತ ಮತ್ತು ಅಭಿನಯವನ್ನು ಒಳಗೊಂಡ ಯಕ್ಷಗಾನ ನೃತ್ಯವನ್ನು ಆಕರ್ಷಕವಾಗಿ ಪ್ರದರ್ಶಿಸಿದರು, ಜನಪದ ಮುಖವಾಡಧಾರಿ ಕುಣಿತಗಳಲ್ಲಿ ಸೋಮನ ಕುಣಿತವಾದ ಸೋಮನ ಕುಣಿತ ನೋಡಗರನ್ನು ಆಕರ್ಷಿಸಿತು. ದತ್ತಿ ಕುಣಿತ, ಲಂಬಾಣಿ ನೃತ್ಯಉತ್ತರ ಕರ್ನಾಟಕದ ಒಂದು ಜನಪದ ಕಲಾಪ್ರಕಾರವಾದ ದತ್ತಿ ಕುಣಿತ, ಲಂಬಾಣಿ ನೃತ್ಯ, ವೈಷ್ಣವ ಸಂಪ್ರದಾಯದ ಕುಣಿತವಾದ ಪಟಕುಣಿತ, ಕರ್ನಾಟಗದ ಅರೆ-ನಾಮಾಡಿ ಬುಡಕಟ್ಟು ಜನಾಗಂದ ಹಕ್ಕಿ ಪಿಕ್ಕಿ ಸಮುದಾಯದವರಿದಂ ಹಕ್ಕಿಪಿಕ್ಕಿ ನೃತ್ಯ, ನಗಾರಿ ವಾದ್ಯ ತಂಡವು, ಉತ್ತರ ಕರ್ನಾಟಕದ ಒಂದು ಜನಪ್ರಿಯವಾದ ಕರಡಿ ಮಜಲು ಪ್ರದರ್ಶಿಸಿದರು. ಕೊಡವ ನ್ಯತ್ಯಕೊಡಗು ಜಿಲ್ಲೆಯ ಕೊಡವ ಸಮುದಾಯದ ಪುರುಷರು, ಮಹಿಳೆಯರು ಕೊಡವ ನೃತ್ಯ ಪ್ರದರ್ಶಿಸಿದರು. ಚಾಮರಾಜನಗರ ಜಿಲ್ಲೆಯ ಮಲೆ ಮಾದಾರಿ ಮಾದಯ್ಯನ ಕಲೆಯಾದ ಬೀಸು ಕಂಸಾಳೆ ಕುಣಿತ ಪ್ರದರ್ಶಿಸಿದರು. ಹಳ್ಳಿಕಾರ್ಹಸುಗಳ ಪ್ರದರ್ಶನಹಳ್ಳಿಕಾರ್ ಜೋಡೆತ್ತು ಜಂಬೂಸವಾರಿಯಲ್ಲಿ ಭಾಗವಹಿಸಿದ್ದು ನೋಡಗರನ್ನು ಆಕರ್ಷಿಸಿತು. ಜಂಬೂ ಸವಾರಿಯಲ್ಲಿ ಬೇರೆ ರಾಜ್ಯದ ಕಲಾತಂಡಗಳು ಭಾಗವಹಿಸಿ ಅಲ್ಲಿನ ಕಲೆಗಳನ್ನು ಈ ಬಾರಿ ಪ್ರದರ್ಶಿಸಿದ್ದು ಗಮನ ಸೆಳೆಯಿತು. ಮಣಿಪುರಿ ಜನಪದಮಣಿಪುರಿ ಜನಪದ ಸಂಗೀತವು ಅತ್ಯಂತ ಮಧುರವಾಗಿದ್ದು, ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳಲ್ಲಿ ಭಾಗವಹಿಸುವ ಇವರು, ಲೈ ಹರಓಬಾ ಹಬ್ಬದಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. --ಬಾಕ್ಸ್--
ತಮಿಳುನಾಡಿನ ಇರಯ ನಡುನಮ್, ಕರಗಟಂ ನೃತ್ಯತಮಿಳುನಾಡಿನ ಸಾಂಪ್ರದಾಯಿಕ ಜಾನಪದ ಕಲೆಗಳಲ್ಲಿ ಇದೂ ಒಂದಾಗಿದ್ದು, ದೈವಿ, ಆರಾಧನೆ, ಆಧ್ಯಾತ್ಮಿಕತೆ ಮತ್ತು ಗ್ರಾಮೀಣ ಸಂಪ್ರದಾಯಗಳೊಂದಿಗೆ ನಂಟು ಹೊಂದಿದೆ. ಇದರಲ್ಲಿ ನಾಗಸ್ವರ, ತವಿಲ್, ಪಂಬೈ, ತಾರೈ ಮತ್ತು ಸ್ವಾಮಿ ಆಟಂನಂತಹ ವಿವಿಧ ಕಲಾತ್ಮಕ ಅಂಶಗಳು ಸೇರಿದೆ. ಈ ಕಲಾ ಪ್ರಕರಾವು ಹಬ್ಬಗಳು, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ.ಕರಗಟ್ಟಂ ತಮಿಳುನಾಡಿ ಪ್ರಾಛಿನ ಜಾನಪದ ನೃತ್ಯವಾಗಿದ್ದು ಇದು ಪ್ರಾಚೀನ ತಮಿಳು ಸಾಹಿತ್ಯವಾದ ಶಿಲ್ಪದಿಗಾರಂ ಕಾಲದಿಂದಲು ನಡೆದುಕೊಂಡು ಬಂದಿದೆ. ಕೇರಳದ ಸಿಂಗರಿ ಮೇಳಂಸಿಂಗಾರಿ ಮೇಳಂ ಕೇರಳದ ಅತ್ಯಂತ ಸಾಂಪ್ರದಾಯಿಕ ಚರ್ಮವಾದ್ಯದ ಕಲಾಪ್ರದರ್ಶನವಾಗಿದ್ದು, ಶ್ರೀಂತ ಸಾಂಸ್ಕೃತಿಕ ಪರಂಪರೆಯನ್ನು ಮತ್ತು ಒಗ್ಗಟಿನ ಭಾವನೆಯನ್ನು ಹೊಂದಿದೆ, ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವುದು ಈ ಕಲಾಪ್ರಕಾರದ ವಿಶೇಷ. ಮಧ್ಯಪ್ರದೇಶದ ಗಂಗೂರಗಂಗರೂರ ಮಧ್ಯ ಪ್ರದೇಶದ ಅತ್ಯಂತ ಪ್ರಮುಖ ಜಾನಪದ ನೃತ್ಯ ಮತ್ತು ಧಾರ್ಮಿಕ ಹಬ್ಬವಾಗಿದ್ದು. ಈ ನೃತ್ಯವು ಮಧ್ಯಪ್ರದೇಶದ ಗ್ರಾಮೀಣ ಮಹಿಳೆಯರಲ್ಲಿ ಪರಸ್ಪರ ಭಾಂದವ್ಯ, ಒಗ್ಗಟ್ಟು, ಸಾಂಸ್ಕೃತಿಕ ಪರಂಪರೆಯನ್ನು ಜೀವತವಾಗಿ ಇಡುವಂತೆ ಮಾಡಿದೆ. ಮಹಾರಾಷ್ಟ್ರದ ಗೊಂಡಾಳ್ನೃತ್ಯಮಹಾರಾಷ್ಟ್ರದ ಸಾಂಪ್ರದಾಯಿಕ ಜಾನಪದ ಪ್ರದರ್ಶನವಾದ ಗೊಂಡಾಳ್ನೃತ್ಯವು ಅಂಬಾ ದೇವಿ ಮತ್ತು ಇತರ ದೇವತೆಗಳ ಆಶೀರ್ವಾದವನ್ನು ಪಡೆಯಲು ನಡೆಸಲಾಗುತ್ತದೆ. ಈ ಗೊಂಡಾಳ್ನೃತ್ಯ ಜಂಬೂಸವಾರಿಯಲ್ಲಿ ಉತ್ತಮ ಪ್ರದರ್ಶನ ನೀಡಿದರು.