ವಿಜ್ಞಾನ, ತಂತ್ರಜ್ಞಾನ ಮುಂದುವರಿದರೂ ಕೃತಕ ರಕ್ತ ತಯಾರಿಕೆ ಸಾಧ್ಯವಿಲ್ಲ: ದಿನೇಶ್

| Published : Jun 13 2025, 04:04 AM IST / Updated: Jun 13 2025, 04:05 AM IST

ವಿಜ್ಞಾನ, ತಂತ್ರಜ್ಞಾನ ಮುಂದುವರಿದರೂ ಕೃತಕ ರಕ್ತ ತಯಾರಿಕೆ ಸಾಧ್ಯವಿಲ್ಲ: ದಿನೇಶ್
Share this Article
  • FB
  • TW
  • Linkdin
  • Email

ಸಾರಾಂಶ

ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕೃತಕ ರಕ್ತ ತಯಾರಿಕೆ ಸಾಧ್ಯವಾಗಿಲ್ಲ ಎಂದು ದಿನೇಶ್‌ ಹೇಳಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕೃತಕ ರಕ್ತ ತಯಾರಿಕೆ ಸಾಧ್ಯವಾಗಿಲ್ಲ ಎಂದು ಪುಷ್ಪಗಿರಿ ವನ್ಯಜೀವಿ ವಲಯದ ಅರಣ್ಯಾಧಿಕಾರಿ ದಿನೇಶ್ ಹೇಳಿದರು.ಪಟ್ಟಣದ ಮಹಿಳಾ ಸಮಾಜದ ಆವರಣದಲ್ಲಿ ತಥಾಸ್ತು ಸಾತ್ವಿಕ ಸಂಸ್ಥೆ, ಅಬಕಾರಿ ಇಲಾಖೆ, ಅರಣ್ಯ ಇಲಾಖೆಯ ಪುಷ್ಪಗಿರಿ ವನ್ಯಜೀವಿ ವಲಯ, ಬಸವ ಬಳಗ ಸೋಮವಾರಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಇಂದು ಅಪಘಾತ, ಅನಾರೋಗ್ಯ ಮುಂತಾದ ಸಂದರ್ಭಗಳಲ್ಲಿ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ಆದ್ದರಿಂದ ಆರೋಗ್ಯವಂತರು ರಕ್ತದಾನ ಮಾಡುವುದರಿಂದ ಹಲವು ಜೀವಗಳನ್ನು ಉಳಿಸುವ ಪುಣ್ಯ ಬರುತ್ತದೆ ಎಂದರು.ಅಬ್ಕಾರಿ ನಿರೀಕ್ಷಕ ಲೋಕೇಶ್ ಅವರು ಮಾತನಾಡಿ, ಕಳೆದ ಎರಡು, ಮೂರು ವರ್ಷಗಳಿಂದ ತಥಾಸ್ತು ಸಂಸ್ಥೆಯ ಒಡಗೂಡಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗುತ್ತಿದೆ. ದಾನಿಗಳಿಂದ ಹೆಚ್ಚಿನ ಸ್ಪಂದನೆಯ ಅಗತ್ಯವಿದೆ ಎಂದ ಅವರು ಸ್ವಯಂ ಪ್ರೇರಿತ ರಕ್ತದಾನ ಮಾಡಲು ಮುಂದಾಗಬೇಕು ಎಂದರು. ಮಡಿಕೇರಿ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಮಾತನಾಡಿ, ರಕ್ತದಾನ ಮಾಡಲು ಹಿಂಜರಿಯುತ್ತಿರುವುದು ಹಾಗೂ ಮೂಢ ನಂಬಿಕೆಗೆ ಒಳಗಾಗುತ್ತಿರುವುದು ವಿಷಾದನೀಯ ಎಂದರು. ಕೊಡಗು ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭವಾದನಂತರ ರಕ್ತದ ಬೇಡಿಕೆ ಹೆಚ್ಚಾಗಿದೆ. ಆದರೆ ರಕ್ತ ಸಂಗ್ರಹಣೆ ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿಲ್ಲ ಎಂದರು.ನಗರ ಪ್ರದೇಶಗಳಲ್ಲಿ ಎರಡು, ಮೂರು ರಕ್ತನಿಧಿ ಘಟಕಗಳಿವೆ. ಆದರೆ ಕೊಡಗು ಜಿಲ್ಲೆಯಲ್ಲಿ ಒಂದೇ ರಕ್ತ ನಿಧಿ ಘಟಕ ಮಾತ್ರ ಇರುವುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಥಾಸ್ತು ಸಂಸ್ಥೆಯ ಅಧ್ಯಕ್ಷ ಉದಯ ಮಾಳವ ವಹಿಸಿದ್ದರು. ಸಂಸ್ಥೆಯ ಶಿವಕುಮಾರ್, ರೂಪಕಳಪ್ಪ, ಜನಾರ್ಧನ್, ಗಣೇಶ್ ಮರಗೋಡು ಹಾಗು ಮುಂತಾದವರು ಉಪಸ್ಥಿತರಿದ್ದರು.

ಶಿಬಿರದಲ್ಲಿ 50 ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.