ಸಾಂಪ್ರದಾಯಿಕ ಕೌಶಲ್ಯಕ್ಕೆ ಕೃತಕ ಬುದ್ಧಿಮತ್ತೆ ಸಾಟಿಯಲ್ಲ

| Published : Jul 17 2024, 12:48 AM IST

ಸಾಂಪ್ರದಾಯಿಕ ಕೌಶಲ್ಯಕ್ಕೆ ಕೃತಕ ಬುದ್ಧಿಮತ್ತೆ ಸಾಟಿಯಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಕೃತಕ ಬುದ್ಧಿಮತ್ತೆಯು ನಮ್ಮ ಹಾದಿಯಲ್ಲಿ ಎಷ್ಟೇ ಪ್ರಬಲವಾಗಿ ಬಂದರೂ ನಮ್ಮ ಸಾಂಪ್ರದಾಯಿಕ ಕೌಶಲ್ಯಗಳಿಗೆ ಅವು ಸಾಟಿಯಲ್ಲ. ಸಾಮಾಜಿಕ ಸಂಪರ್ಕ ಹಾಗೂ ನಿರಂತರ ಅಧ್ಯಯನದಿಂದ ಸಾಂಪ್ರದಾಯಿಕ ಕೌಶಲ್ಯ ಬರುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಡೀನ್ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಅಧ್ಯಕ್ಷ ಡಾ. ಆರ್.ಶಶಿಧರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ''''ಬೀ ಐ ಹ್ಯಾವ್ 2024'''''''' ಕಾರ್ಯಕ್ರಮ ಉದ್ಘಾಟಿಸಿ ಡಾ.ಶಶಿಧರ ಅಭಿಮತ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಕೃತಕ ಬುದ್ಧಿಮತ್ತೆಯು ನಮ್ಮ ಹಾದಿಯಲ್ಲಿ ಎಷ್ಟೇ ಪ್ರಬಲವಾಗಿ ಬಂದರೂ ನಮ್ಮ ಸಾಂಪ್ರದಾಯಿಕ ಕೌಶಲ್ಯಗಳಿಗೆ ಅವು ಸಾಟಿಯಲ್ಲ. ಸಾಮಾಜಿಕ ಸಂಪರ್ಕ ಹಾಗೂ ನಿರಂತರ ಅಧ್ಯಯನದಿಂದ ಸಾಂಪ್ರದಾಯಿಕ ಕೌಶಲ್ಯ ಬರುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಡೀನ್ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಅಧ್ಯಕ್ಷ ಡಾ. ಆರ್.ಶಶಿಧರ ಹೇಳಿದರು.

ಮಂಗಳವಾರ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್‌ನ ವಾಣಿಜ್ಯ ವಿಭಾಗದಿಂದ ಅಂತಿಮ ಬಿ.ಕಾಂ. ವಿದ್ಯಾರ್ಥಿಗಳಿಗೆ ವಿದಾಯ ಹೇಳುವ ''ಬೀ ಐ ಹ್ಯಾವ್ 2024'' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತೊಂದರೆ ತೆಗೆದುಕೊಳ್ಳದೇ ಸಾಧನೆ ಸಾಧ್ಯವಿಲ್ಲ. ಜೇನುಹುಳುಗಳ ನಿರಂತರ ಕ್ರಿಯಾಶೀಲತೆ ಹಾಗೂ ತಾಳ್ಮೆ ಇದಕ್ಕೆ ಸಂಕೇತವಾಗಿದೆ. ಎಷ್ಟು ಚಟುವಟಿಕೆಯಿಂದ ಇರುತ್ತೇವೋ ಅಷ್ಟು ಸಮೃದ್ಧಿಯೂ ಜೀವನದಲ್ಲಿ ಸಾಧ್ಯ ಎಂದರು.

ಸೆಮಿಕಂಡಕ್ಟರ್ ಮುಂತಾದ ಕ್ಷೇತ್ರಗಳಲ್ಲಿ ಭಾರತದ ಸಾಧನೆ ವಿಶ್ವವನ್ನೇ ಬೆರಗುಗೊಳಿಸುತ್ತಿದೆ. 2030ರ ವೇಳೆಗೆ ಭಾರತವು 10 ಟ್ರಿಲಿಯನ್ ಡಾಲರ್‌ಗಳ ವಿಶ್ವದ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ. ವಾಣಿಜ್ಯ ಪದವೀಧರರಿಗೆ ಅವಕಾಶಗಳು ವಿಫುಲವಾಗಿವೆ. ಪೈಪೋಟಿ ದಟ್ಟಣೆಯ ವಿಶ್ವದಲ್ಲಿ ಸಾಮಾಜಿಕ ಸಂಪರ್ಕವೇ ಪರಿಹಾರವಾಗಬಲ್ಲದು ಎಂದರು.

ಕಾಲೇಜಿನ ನಿರ್ದೇಶಕ ಡಾ. ಎಚ್.ವಿ. ಸ್ವಾಮಿ ತ್ರಿಭುವಾನಂದ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ, ಅತ್ಯುತ್ತಮ ಗುಣಮಟ್ಟದ ಬಿ.ಕಾಂ. ಶಿಕ್ಷಣವನ್ನು ಕೊಡಬೇಕೆಂಬ ಸದುದ್ದೇಶದಿಂದ ಕಾಲೇಜಲ್ಲಿ ವಾಣಿಜ್ಯ ವಿಭಾಗ ಆರಂಭಿಸಲಾಯಿತು. ಇದಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರೋತ್ಸಾಹವೂ ಸ್ಮರಣೀಯವಾಗಿದೆ. ಜೀವನ ಕಟ್ಟಿಕೊಳ್ಳಲು ಕಾಲೇಜು ಶಿಕ್ಷಣ ಶಿಕ್ಷಣ ಮುಖ್ಯವಲ್ಲ ಎಂಬ ಕಾಲ ಹೋಯಿತು. ಶಿಕ್ಷಣವೂ ಅತಿ ಮುಖ್ಯವಾಗಿದೆ. ಶಿಕ್ಷಣದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಾಮರಸ್ಯ ಅವಶ್ಯ ಎಂದರು.

ವಿದ್ಯಾರ್ಥಿನಿಯರಾದ ಸ್ಫೂರ್ತಿ, ಪ್ರಜ್ಞಾ ಪ್ರಾರ್ಥಿಸಿದರೆ, ನಿತ್ಯಶ್ರೀ ಸ್ವಾಗತಿಸಿದರು. ಪ್ರೊ. ಬಿ.ಬಿ. ಶ್ವೇತಾ ವಾರ್ಷಿಕ ವರದಿ ವಾಚಿಸಿದರು. ಅಖಿಲ್ ಅತಿಥಿಗಳ ಪರಿಚಯಿಸಿದರು. ಅದಿಲ್ ಮತ್ತು ಅಲ್ಫೀಸಾ ನಿರೂಪಿಸಿದರು. ಮಮತಾ, ಮೆಹ್ತಾ ವಂದಿಸಿದರು.

ಇದೇ ಸಂದರ್ಭದಲ್ಲಿ ಅಧ್ಯಾಪಕ ಜ್ಞಾನೇಶ್ವರ, ಇತರರು ಕ್ರೀಡಾ ಮತ್ತು ಶೈಕ್ಷಣಿಕ ಸಾಧಕರಿಗೆ ಬಹುಮಾನ, ಟ್ರೋಫಿಗಳನ್ನು ವಿತರಿಸಿದರು.

- - - -16ಕೆಡಿವಿಜಿ33ಃ:

ದಾವಣಗೆರೆಯ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಕಾಲೇಜಿನಲ್ಲಿ ನಡೆದ "ಬೀ ಐ ಹ್ಯಾವ್ 2024 " ಕಾರ್ಯಕ್ರಮದಲ್ಲಿ ಕ್ರೀಡಾ, ಶೈಕ್ಷಣಿಕ ಸಾಧಕರಿಗೆ ಬಹುಮಾನ, ಟ್ರೋಫಿ ವಿತರಿಸಲಾಯಿತು.