97 ಮಿಲಿಯನ್ ಉದ್ಯೋಗ ಸೃಷ್ಠಿಸಲಿರುವ ಕೃತಕ ಬುದ್ಧಿಮತ್ತೆ: ಡಾ.ರಂಗರಾಜ್‌

| Published : Apr 08 2025, 12:32 AM IST

97 ಮಿಲಿಯನ್ ಉದ್ಯೋಗ ಸೃಷ್ಠಿಸಲಿರುವ ಕೃತಕ ಬುದ್ಧಿಮತ್ತೆ: ಡಾ.ರಂಗರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಕೃತಕ ಬುದ್ಧಿಮತ್ತೆಯಿಂದಾಗಿ 85 ಮಿಲಿಯನ್ ಉದ್ಯೋಗಗಳು ಕೈತಪ್ಪುವ ಅಂದಾಜಿದೆ. ಆದರೆ, ಆತಂಕ ಪಡಬೇಕಾಗಿಲ್ಲ. ಏಕೆಂದರೆ, ಈ ತಂತ್ರಜ್ಞಾನ 97 ಮಿಲಿಯನ್ ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡಲಿದೆ ಎಂದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ಅತಿಥಿ ಉಪನ್ಯಾಸಕ ಡಾ. ಜಿ.ರಂಗರಾಜ್ ಅಭಿಪ್ರಾಯಪಟ್ಟಿದ್ದಾರೆ.

- ರಾಜ್ಯಮಟ್ಟದ ವಿದ್ಯಾರ್ಥಿಗಳ ಪ್ರಬಂಧ ಮಂಡನೆ ವಿಚಾರ ಸಂಕಿರಣ ''''ಪ್ರಜ್ಞಾ'''' ಉದ್ಘಾಟನೆ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಕೃತಕ ಬುದ್ಧಿಮತ್ತೆಯಿಂದಾಗಿ 85 ಮಿಲಿಯನ್ ಉದ್ಯೋಗಗಳು ಕೈತಪ್ಪುವ ಅಂದಾಜಿದೆ. ಆದರೆ, ಆತಂಕ ಪಡಬೇಕಾಗಿಲ್ಲ. ಏಕೆಂದರೆ, ಈ ತಂತ್ರಜ್ಞಾನ 97 ಮಿಲಿಯನ್ ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡಲಿದೆ ಎಂದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ಅತಿಥಿ ಉಪನ್ಯಾಸಕ ಡಾ. ಜಿ.ರಂಗರಾಜ್ ಅಭಿಪ್ರಾಯಪಟ್ಟರು.

ಸೋಮವಾರ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್‌ನ ವಾಣಿಜ್ಯ ವಿಭಾಗ ವತಿಯಿಂದ ನಡೆದ ರಾಜ್ಯಮಟ್ಟದ ವಿದ್ಯಾರ್ಥಿಗಳ ಪ್ರಬಂಧ ಮಂಡನೆ ವಿಚಾರ ಸಂಕಿರಣ ''''ಪ್ರಜ್ಞಾ''''ದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮಾಹಿತಿಗಳ ಮಹಾಪೂರದ ವಿಶ್ಲೇಷಣೆ ಇಲ್ಲದೇ ವಾಣಿಜ್ಯ ಮತ್ತು ನಿರ್ವಹಣೆ ಸಾಧ್ಯವಿಲ್ಲ. ದೊಡ್ಡ ಪ್ರಮಾಣದ ಮಾಹಿತಿ ಹಾಗೂ ಅಂಕಿ ಅಂಶಗಳನ್ನು ಕೃತಕ ಬುದ್ಧಿಮತ್ತೆ (ಎ.ಐ.) ಸುಲಭವಾಗಿ ಕ್ಷಿಪ್ರವಾಗಿ ವಿಶ್ಲೇಷಿಸಬಲ್ಲದು. ಕೃತಕ ಬುದ್ಧಿಮತ್ತೆಯಲ್ಲಿ ಯಂತ್ರಗಳು ಹೊಸ ಹೊಸದನ್ನು ಸ್ವಯಂ ಕಲಿತು ಮಾಡಬಲ್ಲವಾಗಲಿವೆ. ಆರ್ಥಿಕತೆ, ಉತ್ಪಾದನೆ, ಮಾರುಕಟ್ಟೆ, ಮಾನವ ಸಂಪನ್ಮೂಲ ಹಾಗೂ ಉದ್ಯೋಗ ಎಲ್ಲ ಕ್ಷೇತ್ರದಲ್ಲೂ ನುರಿತ ಸಲಹೆಗಾರರಾಗಿ ಯಂತ್ರಮಾನವರು ಬರಲಿದ್ದಾರೆ. 407 ಬಿಲಿಯನ್ ಡಾಲರ್ ಅಂದರೆ ಸುಮಾರು ₹35 ಲಕ್ಷ ಕೋಟಿಗಳಷ್ಟು ಮೊತ್ತದ ವಾರ್ಷಿಕ ಮಾರುಕಟ್ಟೆಯನ್ನು ಕೃತಕ ಬುದ್ಧಿಮತ್ತೆ ಹೊಂದಲಿದೆ. ಮಾನವರು ಬದಲಾಗಲು ಬಯಸದಿದ್ದರೂ, ಒಪ್ಪದಿದ್ದರೂ ತಂತ್ರಜ್ಞಾನಗಳು ಬದಲು ಮಾಡುತ್ತವೆ ಎಂದರು.

ಪ್ರಾಚಾರ್ಯ ಡಾ. ಬಿ.ವೀರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಣಿಜ್ಯ ವಿದ್ಯಾರ್ಥಿಗಳು ಪಠ್ಯಜ್ಞಾನದ ಜೊತೆಗೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ದೈನಂದಿನ ಔದ್ಯಮಿಕ ವಿದ್ಯಮಾನಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದರು.

ಕಾಲೇಜಿನ ನಿರ್ದೇಶಕ ಡಾ. ಎಚ್.ವಿ.ಸ್ವಾಮಿ ತ್ರಿಭುವನಾನಂದ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಮಟ್ಟದ ಈ ವಿಚಾರ ಸಂಕಿರಣದಲ್ಲಿ ವಿವಿಧ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳು 65ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದರು.

ವಿಚಾರ ಸಂಕಿರಣದ ವಿವರಗಳನ್ನು ಜ್ಞಾನೇಶ್ವರ ಸುಳಕೆ ನೀಡಿದರು. ತೀರ್ಪುಗಾರರಾಗಿ ಡಾ.ಸುಜಿತ್, ಡಾ.ಶ್ರುತಿ ಮಾಕನೂರು, ಡಾ.ಪ್ರಕಾಶ್, ಮೊಹಮ್ಮದ್, ಡಾ.ವಿನಾಯಕ ಪಾಟೀಲ್ ಮುಂತಾದವರು ಆಗಮಿಸಿದ್ದರು.

ಇದೇ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ ಬಗ್ಗೆ ವಿದ್ಯಾರ್ಥಿಗಳೇ ಬರೆದ ಪ್ರಬಂಧಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಸಿ.ಕೆ.ಸ್ಫೂರ್ತಿ, ಎನ್.ಸಿ. ಪ್ರಜ್ಞಾ ಪ್ರಾರ್ಥಿಸಿದರು. ಆದಿಲ್ ಅತ್ತರ್, ಆರ್.ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಜಿ.ವೈಷ್ಣವಿ ಅತಿಥಿಗಳ ಪರಿಚಯಿಸಿದರು. ಪ್ರಜ್ಞಾ ಪಾಟೀಲ್ ವಂದಿಸಿದರು. ವಿಚಾರ ಸಂಕಿರಣ ನಿರ್ವಹಣೆಯನ್ನು ಬಿ.ಬಿ.ಮಂಜುನಾಥ, ಬಿ.ವಿ.ಶ್ವೇತಾ, ಒ.ಎಚ್.ಲತಾ, ಎಂ.ಎಸ್. ನಾಗರಾಜ, ಎ.ಎನ್. ಮಂಜುಳ, ಡಿ.ಆರ್. ನರೇಂದ್ರ, ಎ.ಆರ್. ಪ್ರಜ್ವಲ್ ವಹಿಸಿಕೊಂಡಿದ್ದರು.

- - -

-7ಕೆಡಿವಿಜಿ32: ದಾವಣಗೆರೆಯ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್‌ನಲ್ಲಿ ನಡೆದ ''''ಪ್ರಜ್ಞಾ'''' ಕಾರ‍್ಯಕ್ರಮವನ್ನು ಡಾ. ಜಿ.ರಂಗರಾಜ್ ಉದ್ಘಾಟಿಸಿದರು.