ಚಿಕ್ಕಮಗಳೂರುಕೃತಕ ಬುದ್ಧಿಮತ್ತೆ ಹಾಗೂ ಸಾಮಾಜಿಕ ಮಾಧ್ಯಮಗಳ ಅರಿವು ಓರೆಕೋರೆ ಕುರಿತ ನವಮಾಧ್ಯಮಗಳ ತರಬೇತಿ ಶಿಬಿರವನ್ನು ಮಾ.14 ಮತ್ತು 15 ರಂದು ರತ್ನಗಿರಿ ರಸ್ತೆಯ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಹೊನ್ನ ಬಿತ್ತೇವು ಹೊಲಕ್ಕೆಲ್ಲ ಸಂಘಟನೆಯಿಂದ ಏರ್ಪಡಿಸಲಾಗಿದೆ ಎಂದು ಕೆಯುಡಬ್ಲೂಜೆ ಮಾಜಿ ರಾಜ್ಯಾಧ್ಯಕ್ಷ ಎನ್.ರಾಜು ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕೃತಕ ಬುದ್ಧಿಮತ್ತೆ ಹಾಗೂ ಸಾಮಾಜಿಕ ಮಾಧ್ಯಮಗಳ ಅರಿವು ಓರೆಕೋರೆ ಕುರಿತ ನವಮಾಧ್ಯಮಗಳ ತರಬೇತಿ ಶಿಬಿರವನ್ನು ಮಾ.14 ಮತ್ತು 15 ರಂದು ರತ್ನಗಿರಿ ರಸ್ತೆಯ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಹೊನ್ನ ಬಿತ್ತೇವು ಹೊಲಕ್ಕೆಲ್ಲ ಸಂಘಟನೆಯಿಂದ ಏರ್ಪಡಿಸಲಾಗಿದೆ ಎಂದು ಕೆಯುಡಬ್ಲೂಜೆ ಮಾಜಿ ರಾಜ್ಯಾಧ್ಯಕ್ಷ ಎನ್.ರಾಜು ತಿಳಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಎಚ್.ಡಿ. ತಮ್ಮಯ್ಯ ನೆರವೇರಿಸುವರು. ಪ್ರಾಸ್ತಾವಿಕವಾಗಿ ರೈತ ಮುಖಂಡ ಗುರುಶಾಂತಪ್ಪ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ಸಿಇಓ ಪ್ರವೀಣ್ ಬಿ ನಾಯಕ್, ಸೆನ್ ಡಿವೈಎಸ್‌ಪಿ ತಿಪ್ಪೇಸ್ವಾಮಿ, ಕೆಪಿಸಿಸಿ ವಕ್ತಾರ ಎಚ್.ಎಚ್ ದೇವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ರಘು ಭಾಗವಹಿಸಲಿದ್ದಾರೆಂದು ತಿಳಿಸಿದರು.
ಮಾ.15 ರಂದು 4 ರಿಂದ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ ಮಂಜೇಗೌಡ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರವೀಶ್ ಕ್ಯಾತನಬೀಡು, ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಬಿ. ಅಮ್ಜದ್, ಪ್ರೆಸ್ ಕ್ಲಬ್ ಅಧ್ಯಕ್ಷ ಸಿ.ಡಿ. ಚಂದ್ರೇಗೌಡ ಮತ್ತಿತರರು ಭಾಗವಹಿಸಲಿದ್ದಾರೆಂದು ಹೇಳಿದರು.ಐಐಪಿ ಸಂಸ್ಥಾಪಕ ನಂಜೇಶ್ ಬೆಣ್ಣೂರು ಮಾತನಾಡಿ, ಮೊದಲು ನೊಂದಾವಣೆ ಮಾಡಿಕೊಂಡ 70 ರಿಂದ 80 ಜನರಿಗೆ ಈ ತರಬೇತಿ ಶಿಬಿರದಲ್ಲಿ ಅವಕಾಶವಿದೆ. ಯಾವುದೇ ಪ್ರವೇಶ ಶುಲ್ಕ ಇಲ್ಲ, ಶಿಬಿರಾರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಉಚಿತ. ಈ ಶಿಬಿರದ ಪ್ರಯೋಜನ ಪಡೆಯಲು ಕಾರ್ಯಕ್ರಮ ಆಯೋಜಕರು ಈ ಮೂಲಕ ವಿನಂತಿಸಿದ್ದಾರೆ.
ಈ ಶಿಬಿರದಲ್ಲಿ ಎಐ ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ ಕಡಿತದ ಸಾಧಕ-ಬಾಧಕದ ಪರಿಹಾರೋಪಾಯದ ಕುರಿತು ವಿಷಯ ಮಂಡನೆಯನ್ನು ಐಐಪಿ ಸಂಸ್ಥಾಪಕ ನಂಜೇಶ್ ಬೆಣ್ಣೂರು ನೆರವೇರಿಸಲಿದ್ದಾರೆ. ಜೆನ್‌ಜಿ. ಹೊಸ ತಲೆಮಾರಿನ ಪಲ್ಲಟಗಳು ಅಂತರ್ಜಾಲದ ದುರುಪಯೋಗ ಪರಿಹಾರ ವಿಷಯ ಮಂಡನೆಯನ್ನು ಹಾಸನ ಇಂಜಿನಿಯರಿಂಗ್ ಕಾಲೇಜು ಮುಖ್ಯಸ್ಥ ಪ್ರೊ. ವಿವೇಕಾನಂದ ಮಂಡಿಸಲಿದ್ದಾರೆಂದರು.ನೊಂದಾವಣಿ ಮತ್ತು ಹೆಚ್ಚಿನ ಮಾಹಿತಿಗೆ 7619521477, 9980772410, 8861518868, 9019697655 ಮೊಬೈಲ್ ನಂಬರ್‌ಗಳನ್ನು ಸಂಪರ್ಕಿಸಲು ವಿನಂತಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗುರುಶಾಂತಪ್ಪ, ಮಂಜುನಾಥ್ ಸ್ವಾಮಿ, ನಟರಾಜ್ ಎಸ್ ಕೊಪ್ಪಲು, ವಿಜಯ್ ಕುಮಾರ್. ಉಪಸ್ಥಿತರಿದ್ದರು.