ಗುಮಾಸ್ತನ ವಿರುದ್ಧ ಕಲಾವಿದರ ಪ್ರತಿಭಟನೆ

| Published : Mar 25 2025, 12:52 AM IST

ಸಾರಾಂಶ

ಪರವಾನಿಗೆ ನೀಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದನ್ನು ಖಂಡಿಸಿ ಕಲಾವಿದರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ತಹಸೀಲ್ದಾರ್‌ ಗೆ ಮನವಿ ಸಲ್ಲಿಸಿದರು. ಸೋಮವಾರ ಇಲ್ಲಿನ ತಹಸೀಲ್ದಾರ್‌ ಕಚೇರಿಗೆ ಬಂದ ಕಲಾವಿದರು ಹಾಗೂ ರೈತರು ಕಚೇರಿ ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಪರವಾನಿಗೆ ನೀಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದನ್ನು ಖಂಡಿಸಿ ಕಲಾವಿದರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ತಹಸೀಲ್ದಾರ್‌ ಗೆ ಮನವಿ ಸಲ್ಲಿಸಿದರು. ಸೋಮವಾರ ಇಲ್ಲಿನ ತಹಸೀಲ್ದಾರ್‌ ಕಚೇರಿಗೆ ಬಂದ ಕಲಾವಿದರು ಹಾಗೂ ರೈತರು ಕಚೇರಿ ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಆಡಳಿತ ಸಂಪೂರ್ಣವಾಗಿ ಕುಸಿದಿದ್ದು ಯಾವ ಇಲಾಖೆಗೆ ಹೋದರು ಲಂಚಾವತಾರ ಮಿತಿಮೀರಿದೆ ಲಂಚ ಕೊಡದೆ ಒಂದೇ ಒಂದು ಕೆಲಸವಾಗುತ್ತಿಲ್ಲ. ಕಲಾವಿದರು ಭಿಕ್ಷೆ ಬೇಡುವವರಲ್ಲ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡು ನೆಲ ಜಲ ಸಂರಕ್ಷಣೆಗಾಗಿ ತಮ್ಮ ಜೀವನದಿದ್ದಕ್ಕೂ ಮುಖಕ್ಕೆ ಬಣ್ಣ ಬಳಿದು ಸಾರ್ವಜನಿಕರನ್ನು ರಂಜಿಸುತ್ತಾ ಈ ದೇಶಕ್ಕೊಂದು ನೈತಿಕತೆಯ ಸಾರವನ್ನು ಸಾರುತ್ತಾ ಬದುಕುತ್ತಿರುವ ಕಲಾವಿದರಿಗೆ ಈ ತಾಲೂಕಿನಲ್ಲಿ ಬೆಲೆ ಇಲ್ಲದಂತಾಗಿದೆ. ರಾಜಕಾರಣಿಗಳಿಗೆ ಮಾತ್ರ ಕೆಲಸವಾಗುತ್ತಿದ್ದು ಬಡವರಿಗೆ ಕೂಲಿ ಕಾರ್ಮಿಕರಿಗೆ ಕೆಲಸವಾಗದೆ ಇರುವುದು ದುರದೃಷ್ಟಕರ. ಕಲಾವಿದರ ಬಳಿ ಲಂಚ ಕೇಳಿದ ಹಬೀಬ್‌ ಅವರನ್ನು ಅಮಾನತು ಮಾಡಬೇಕು ಎಂದು ತಾಲೂಕು ಕಲಾವಿದ ಸಂಘದ ಅಧ್ಯಕ್ಷ ಮಗ್ಗದ ಮನೆ ಗಂಗಾಧರ್ ಆಗ್ರಹಿಸಿದರು.

ಈ ವೇಳೆ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಬಳಿ ದೂರು ನೀಡಿದ ಕಲಾವಿದರು, ಕೆಂಪಮ್ಮ ದೇವಿ ಕಲಾ ಸಂಘದವರು ತಾಲೂಕಿನಲ್ಲಿ ಶ್ರೀದೇವಿ ಮಹಾತ್ಮೆ ಎಂಬ ಬಯಲು ನಾಟಕವನ್ನು ಆಡಲು ತಾಲೂಕು ಕಚೇರಿಗೆ ಅನುಮತಿಗೆ ಅರ್ಜಿ ಸಲ್ಲಿಸಿದ್ದ ವೇಳೆಯಲ್ಲಿ ಸಂಬಂಧಪಟ್ಟ ಗುಮಾಸ್ತ 500 ಗಳಿಗೆ ಬೇಡಿಕೆ ಇಟ್ಟಿದ್ದಾನೆ. ಕಲಾವಿದರು ಇದನ್ನು ತಿರಸ್ಕರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊರಹೋಗುವಂತೆ ಹೇಳಿರುತ್ತಾನೆ. ಇದಕ್ಕೆ ಪ್ರತಿಕ್ರಿಯಿಸಿ ತಹಸೀಲ್ದಾರರು, ಈ ಬಗ್ಗೆ ಸಂಬಂಧಪಟ್ಟ ಗುಮಾಸ್ತನಿಗೆ ಸೋಕಾಸ್ ನೋಟಿಸ್ ನೀಡಿರುತ್ತೇನೆ. ಲಿಖಿತ ಉತ್ತರ ಬಂದ ನಂತರ ಕಾನೂನು ಕ್ರಮ ಕೈಗೊಳ್ಳುವುದು ಎಂದರು. ಈ ಪ್ರತಿಭಟನೆಯಲ್ಲಿ ಕೆಂಪಮ್ಮ ದೇವಿ ಕಲಾಸಂಗ ,ಆದಿಶಕ್ತಿ ಕಲಾಸಂಗ, ಗಾರೆ ಕೆಲಸದವರ ಸಂಘ ಹಳೆಯೂರು ಆಂಜನೇಯ ಸ್ವಾಮಿ ಸಂಘ ಮುಂತಾದ ದೇವರಾಜು ಜಗದೀಶ ದಕ್ಷಿಣ ಮೂರ್ತಿ ಮುಂತಾದವರು ಭಾಗವಹಿಸಿದ್ದರು.