ಸಾರಾಂಶ
ಪ್ರಸ್ತುತ ಸಾಮಾಜಿಕ ಜಾಲತಾಣಗಳ ನಡುವೆ ಇಂದು ನಡೆಯುತ್ತಿರುವ ಪೌರಾಣಿಕ ನಾಟಕವನ್ನು ಹೆಚ್ಚಿನ ಜನರು ವೀಕ್ಷಣೆ ಮಾಡುತ್ತಿರುವುದು ಕಲಾವಿದರಿಗೆ ನೀಡುವ ಗೌರವ. ಈ ಹಿಂದೆ ಗ್ರಾಮೀಣ ಪ್ರದೇಶದ ಕಲಾವಿದರುಗಳು ನಾಟಕ ಕಲಿತು ಕೇವಲ ಆ ಗ್ರಾಮದಲ್ಲಿ ಪ್ರದರ್ಶನ ಮಾತ್ರ ಮಾಡುತ್ತಿದ್ದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಲಾವಿದರು ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಕೃಷ್ಣಸಂಧಾನ ಹಾಗೂ ಗೀತೋಪದೇಶ ಎಂಬ ಪೌರಾಣಿಕ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ಸಾಮಾಜಿಕ ಜಾಲತಾಣಗಳ ನಡುವೆ ಇಂದು ನಡೆಯುತ್ತಿರುವ ಪೌರಾಣಿಕ ನಾಟಕವನ್ನು ಹೆಚ್ಚಿನ ಜನರು ವೀಕ್ಷಣೆ ಮಾಡುತ್ತಿರುವುದು ಕಲಾವಿದರಿಗೆ ನೀಡುವ ಗೌರವ ಎಂದರು.ಈ ಹಿಂದೆ ಗ್ರಾಮೀಣ ಪ್ರದೇಶದ ಕಲಾವಿದರುಗಳು ನಾಟಕ ಕಲಿತು ಕೇವಲ ಆ ಗ್ರಾಮದಲ್ಲಿ ಪ್ರದರ್ಶನ ಮಾತ್ರ ಮಾಡುತ್ತಿದ್ದರು. ಆದರೆ, ಪ್ರಸ್ತುತ ಅದು ವೇದಿಕೆಯಾಗಿ ಪರಿಗಣಿಸಿ ಸಿನಿಮಾ ರಂಗ ಸೇರಿದಂತೆ ಅನೇಕ ಅವಕಾಶಗಳು ಲಭಿಸುತ್ತಿವೆ ಎಂದರು.
ಈ ವೇಳೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಜಿಪಂ ಮಾಜಿ ಸದಸ್ಯ ಎಸ್.ಎಲ್.ಲಿಂಗರಾಜು, ಮನ್ಮುಲ್ ಅಧ್ಯಕ್ಷ ಬೋರೇಗೌಡ, ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ಕಾಂಗ್ರೆಸ್ ಮುಖಂಡ ಕೆ.ಜೆ.ರವಿಶಂಕರ್, ಲಯನ್ ಸರಸ್ವತಿ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಎನ್.ವಿ.ಚಲುವರಾಜು, ಪುರಸಭೆ ಸದಸ್ಯ ಎಸ್.ಪ್ರಕಾಶ್, ರೈತ ಮುಖಂಡ ಬಲ್ಲೇನಹಳ್ಳಿ ಕೃಷ್ಣೇಗೌಡ, ಕಸಾಪ ಮಾಜಿ ಅಧ್ಯಕ್ಷ ಮಂಜುನಾಥ್ ಇದ್ದರು. ನೂರಾರು ಮಂದಿ ಪ್ರೇಕ್ಷಕರು ನಾಟಕ ಪ್ರದರ್ಶನ ನೋಡಿ ಸಂಭ್ರಮಿಸಿದರು.