ಮಹಿಳೆಯರಲ್ಲಿ ಆತ್ಮ ರಕ್ಷಣೆಗೆ ಕಿಕ್ ಬಾಕ್ಸಿಂಗ್, ಕರಾಟೆಯಂತಹ ಕಲೆ ಅತೀ ಅವಶ್ಯಕವಾಗಿದೆ.
ಭಟ್ಕಳದಲ್ಲಿ ಕಿಕ್ ಬಾಕ್ಸಿಂಗ್ ಅಸ್ಮಿತಾ ಲೀಗ್ ಪಂದ್ಯಾವಳಿ ಉದ್ಘಾಟನೆಕನ್ನಡಪ್ರಭ ವಾರ್ತೆ ಭಟ್ಕಳ
ಪಟ್ಟಣದ ಕಮಲಾವತಿ ರಾಮನಾಥ ಶಾನಭಾಗ್ ಸಭಾಂಗಣದಲ್ಲಿ ಜಿಲ್ಲಾ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಶಿಯೇಶನ್ ವತಿಯಿಂದ ಭಾರತ ಸರಕಾರದ ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಖೇಲೋ ಇಂಡಿಯಾದಡಿಯಲ್ಲಿ ಏರ್ಪಡಿಸಲಾದ ಅಸ್ಮಿತಾ ಬಾಲಕಿಯರ ಕಿಕ್ ಬಾಕ್ಸಿಂಗ್ ಲೀಗ್‌ನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಎನ್. ನಾಯ್ಕ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಭಾರತ ಸರ್ಕಾರದ ಕ್ರೀಡಾ ಇಲಾಖೆಯಲ್ಲಿ ಕಿಕ್ ಬಾಕ್ಸಿಂಗ್ ಸೇರ್ಪಡೆಗೊಳಿಸಿರುವುದು ಉತ್ತಮ ಬೆಳವಣಿಗೆ. ಮಹಿಳೆಯರಲ್ಲಿ ಆತ್ಮ ರಕ್ಷಣೆಗೆ ಕಿಕ್ ಬಾಕ್ಸಿಂಗ್, ಕರಾಟೆಯಂತಹ ಕಲೆ ಅತೀ ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಆಸರಕೇರಿಯ ಈಶ್ವರ ನಾಯ್ಕ, ನಾಗಶ್ರೀ ನಾಯ್ಕ, ಉಮೇಶ ಮೊಗೇರ ನೇತೃತ್ವದ ತಂಡ ಕಿಕ್ ಬಾಕ್ಸಿಂಗ್ ತರಬೇತಿಯನ್ನು ಆರಂಭಿಸಿ ಬಾಲಕಿಯರಿಗೆ ಕಿಕ್ ಬಾಕ್ಸಿಂಗ್ ಕಲೆ ಕಲಿಸಿರುವುದು ಶ್ಲಾಘನೀಯ. ಬೇರೆ ಬೇರೆ ಆಟ, ಕಲೆಗಳಿದ್ದರೂ ಸಹ ಪಾಲಕರು ತಮ್ಮ ಮಕ್ಕಳಿಗೆ ಕಿಕ್ ಬಾಕ್ಸಿಂಗ್ ತರಬೇತಿ ಕೊಟ್ಟು ಮಕ್ಕಳಿಗೆ ಇದರಲ್ಲಿ ಆಸಕ್ತಿ ಮೂಡುವಂತೆ ಮಾಡುತ್ತಿದ್ದಾರೆ. ಇಂತಹ ಕಲೆ ಅಗತ್ಯವಾಗಿದ್ದು, ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಕ್ರೀಡೆಯಲ್ಲಿ ನಮ್ಮ ದೇಶವೂ ಸಹ ಉತ್ತಮ ಸಾಧನೆ ಮಾಡುತ್ತಿದೆ. ಆದರೂ ಸಹ ಕ್ರೀಡೆಗೆ ಹೆಚ್ಚಿನ ಆದ್ಯತೆ ಸಿಗಬೇಕು. ಕಿಕ್ ಬಾಕ್ಸಿಂಗ್ ಕಲೆಯಿಂದ ದೈಹಿಕ ಮತ್ತು ಮಾನಸಿಕ ಬೆಳೆವಣಿಗೆಗೆ ಅನುಕೂಲ ಆಗುವುದರ ಜತೆಗೆ ಆತ್ಮ ರಕ್ಷಣೆಗೆ ಸಹಕಾರಿಯಾಗಿದೆ. ಭಟ್ಕಳದಲ್ಲಿ ಕಿಕ್ ಬಾಕ್ಸಿಂಗ್ ತರಬೇತಿ ಕೊಡುತ್ತಿರುವ ಈಶ್ವರ ನಾಯ್ಕ ನೇತೃತ್ವದ ತಂಡವನ್ನು ಶ್ಲಾಘಿಸಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಯೇಶನ್ ಅಧ್ಯಕ್ಷ ಉಮೇಶ ಮೊಗೇರ ಮಾತನಾಡಿ, ಕಿಕ್ ಬಾಕ್ಸಿಂಗ್‌ನಲ್ಲಿ ಭಟ್ಕಳದವರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇಂತಹ ಕಲೆಗಳನ್ನು ಮುಂದುವರಿಸಿಕೊಂಡು ಹೋಗಲು ಎಲ್ಲರ ಸಹಕಾರ ಅಗತ್ಯವೆಂದರು.
ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕಿ ಭಾಗಿರಥಿ ನಾಯ್ಕ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ದಿಲ್ಶಾದ್ ಶೇಖ, ವಾಕೋ ಕರ್ನಾಟಕ ರೆಫರಿ ಆಯೋಗದ ಮತ್ತು ದಕ್ಷಿಣ ಕನ್ನಡ ಕಿಕ್ ಬಾಕ್ಸಿಂಗ್ ಅಧ್ಯಕ್ಷ ನಿತಿನ್ ಸುವರ್ಣ, ಕೋಲಾರ ಜಿಲ್ಲಾ ಕಿಕ್ ಬಾಕ್ಸಿಂಗ್ ಅಧ್ಯಕ್ಷ ಗುರುದೀಪ ಮಾತನಾಡಿದರು.ಕಾನೂನು ಸಲಹೆಗಾರ ಮನೋಜ ನಾಯ್ಕ, ಜಿಲ್ಲಾ ಕಿಕ್ ಬಾಕ್ಸಿಂಗ್ ಅಧ್ಯಕ್ಷ ಈಶ್ವರ ನಾಯ್ಕ ಆಸರಕೇರಿ ಉಪಸ್ಥಿತರಿದ್ದರು. ಇದೇ ಸಂದರ್ಭ ಉಪನ್ಯಾಸಕಿ ಭಾಗಿರಥಿ ನಾಯ್ಕ, ಕಿಕ್ ಬಾಕ್ಸಿಂಗ್‌ನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಕಿಕ್ ಬಾಕ್ಸಿಂಗ್ ಪ್ರಧಾನ ಕಾರ್ಯದರ್ಶಿ ನಾಗಶ್ರೀ ನಾಯ್ಕ ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ಈಶ್ವರ ನಾಯ್ಕ ನಿರೂಪಿಸಿದರು. ಕಿಕ್ ಬಾಕ್ಸಿಂಗ್ ಲೀಗ್‌ನಲ್ಲಿ ವಿವಿಧ ಕಡೆಯಿಂದ ಹಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
----1ಬಿಕೆಲ್1: ಭಟ್ಕಳದಲ್ಲಿ ನಡೆದ ಕಿಕ್ ಬಾಕ್ಸಿಂಗ್ ಲೀಗ್‌ನಲ್ಲಿ ಕಿಕ್ ಬಾಕ್ಸಿಂಗ್‌ನಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.