ಅರುಣೋದಯ ವಿಶೇಷ ಶಾಲೆಯಲ್ಲಿ ಹೊಸ ವರ್ಷ ಹೊಸ ಬೆಳಕು

| Published : Jan 02 2025, 12:33 AM IST

ಅರುಣೋದಯ ವಿಶೇಷ ಶಾಲೆಯಲ್ಲಿ ಹೊಸ ವರ್ಷ ಹೊಸ ಬೆಳಕು
Share this Article
  • FB
  • TW
  • Linkdin
  • Email

ಸಾರಾಂಶ

ಅರುಣೋದಯ ವಿಶೇಷ ಶಾಲೆಯ ಸೇವೆ ಮಾದರಿ ಕಾರ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರುಚಾಮುಂಡಿಪುರಂನ ಅರುಣೋದಯ ವಿಶೇಷ ಶಾಲೆಯಲ್ಲಿ ಹೊಸ ವರ್ಷದ ಅಂಗವಾಗಿ ನಗರ ಪಾಲಿಕೆ ಮಾಜಿ ಸದಸ್ಯ ಮಾ.ವಿ. ರಾಮಪ್ರಸಾದ್ ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣ ಶಿಬಿರ ಆಯೋಜಿಸಿದ್ದರು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಕ್ಯಾಲೆಂಡರ್ ಹೊಸ ವರ್ಷದ ದಿನದಂದು ವಿಶೇಷ ಮಕ್ಕಳಿಗೆ ಬೆಳಕು ನೀಡುವ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿರುವ ನಗರ ಪಾಲಿಕೆ ಮಾಜಿ ಸದಸ್ಯ ಮ.ವಿ. ರಾಮಪ್ರಸಾದ್ ಅವರದ್ದು ಶ್ಲಾಘನೀಯ ಕೆಲಸ ಎಂದರು.ವಿಶೇಷ ಮಕ್ಕಳನ್ನು ದೇವರ ಮಕ್ಕಳಂತೆ ಆರೈಕೆ ಮಾಡುತ್ತಾ, ಪೋಷಿಸುತ್ತಿರುವ ಅರುಣೋದಯ ವಿಶೇಷ ಶಾಲೆಯ ಸೇವೆ ಮಾದರಿ ಕಾರ್ಯವಾಗಿದೆ.ವಿಶೇಷ ಮಕ್ಕಳನ್ನು ಸ್ವಂತ ಮಕ್ಕಳಿಗಿಂತಲೂ ಹೆಚ್ಚಾಗಿ ಇಲ್ಲಿನ ಸಂಸ್ಥೆಯಲ್ಲಿ ಆರೈಕೆ ಮಾಡಿ, ಪೋಷಿಸುತ್ತಾ ಸೇವೆ ಇತರರಿಗೂ ಪ್ರೇರಣೆಯಾಗಿದೆ ಎಂದರು.ವಿಶೇಷ ಚೇತನ ಮಕ್ಕಳ ಹೆತ್ತವರಿಗೆ ಇಂತಹ ಮಕ್ಕಳನ್ನು ನೋಡಿಕೊಳ್ಳುವುದು ಸವಾಲಿನ ಕೆಲಸ. ವಿಶೇಷಚೇತನರೊಂದಿಗೆ ಸಮಾಜ ಹೊಂದಬೇಕಾದ ಕನಿಷ್ಠ ಸೌಜನ್ಯ, ಸಂವೇದನಾಶೀಲತೆಯ ಕುರಿತು ಅರಿವು ಮೂಡಿಸುವುದು ಬಹಳ ಅಗತ್ಯ ಎಂದು ಅವರು ಹೇಳಿದರು.ನಂತರ ಮಾತನಾಡಿದ ಮ.ವಿ. ರಾಮಪ್ರಸಾದ್, ವಿಶೇಷ ಮಕ್ಕಳ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ. ಮನೆಯಲ್ಲಿ ಒಂದು ವಿಶೇಷಚೇತನ ಮಗುವಿದ್ದರೇ ನೋಡಿಕೊಳ್ಳುವುದು ಕಷ್ಟ. ಆದರೆ ನಮ್ಮ ಈ ಸಂಸ್ಥೆ ನೂರಾರು ಮಕ್ಕಳ ಪೋಷಣೆ ಮಾಡುತ್ತಿದೆ. ಇದು ನಿಜಕ್ಕೂ ದೇವರ ಸೇವೆ ಮಾಡಿದಂತೆಯೇ, ಇಲ್ಲಿ ಕೆಲಸ ಮಾಡುವ ಶಿಕ್ಷಕಿಯರು ತಮ್ಮ ಮಕ್ಕಳನ್ನು ಕಾಳಜಿ ವಹಿಸುವಂತೆ ಈ ವಿಶೇಷಚೇತನ ಮಕ್ಕಳ ಪಾಲನೆ ಮಾಡುತ್ತಿರುವುದು ಇತರರಿಗೂ ಪ್ರೇರಣೆಯಾಗಿದೆ ಎಂದು ಅವರು ಶ್ಲಾಘಿಸಿದರು.ಈ ವೇಳೆ ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್, ಬಿಜೆಪಿ ಮುಖಂಡರಾದ ರಮೇಶ್, ಸಂತೋಷ್ (ಶಂಭು), ಮಂಜುನಾಥ್, ಹೇಮಂತ್, ಬೈರತಿ ಲಿಂಗರಾಜು ಮೊದಲಾದವರು ಇದ್ದರು.