ಸಾರಾಂಶ
ವಿಮಾ ಸೌಲಭ್ಯ ಕೊರೋನಾ ಸಂಕಷ್ಟದ ಸಮಯದಲ್ಲಿ ಸಂಪನ್ಮೂಲ ಕ್ರೋಢೀಕರಣದ ಕೊರತೆಯಿಂದ ಸ್ಥಗಿತಗೊಂಡಿತ್ತು. ಹಿಂದಿನಂತೆ ಜೀವನ ಶೈಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೋಢೀಕರಣ ಆರಂಭವಾಗಲಿದೆ ಎಂದು ಅಂತಾರಾಷ್ಟ್ರೀಯ ವಾಸವಿ ಕ್ಲಬ್ ಉಪಾಧ್ಯಕ್ಷ ಬದರಿನಾಥ ಗುಪ್ತ ತಿಳಿಸಿದರು. ಹೊಳೆನರಸೀಪುರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಂಜಾನೆ, ಮುಸ್ಸಂಜೆ ಕಾರ್ಯಕ್ರಮ
ಹೊಳೆನರಸೀಪುರ: ಆರ್‍ಯವೈಶ್ಯ ಜನಾಂಗದ ಜನರ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಪ್ರಾರಂಭಿಸಿದ್ದ ವಿಮಾ ಸೌಲಭ್ಯ ಕೊರೋನಾ ಸಂಕಷ್ಟದ ಸಮಯದಲ್ಲಿ ಸಂಪನ್ಮೂಲ ಕ್ರೋಢೀಕರಣದ ಕೊರತೆಯಿಂದ ಸ್ಥಗಿತಗೊಂಡಿತ್ತು. ಹಿಂದಿನಂತೆ ಜೀವನ ಶೈಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೋಢೀಕರಣ ಆರಂಭವಾಗಲಿದೆ ಎಂದು ಅಂತಾರಾಷ್ಟ್ರೀಯ ವಾಸವಿ ಕ್ಲಬ್ ಉಪಾಧ್ಯಕ್ಷ ಬದರಿನಾಥ ಗುಪ್ತ ತಿಳಿಸಿದರು.ಪಟ್ಟಣದ ಶ್ರೀ ಕನಿಕಾಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಆಯೋಜನೆ ಮಾಡಿದ್ದ ‘ಮುಂಜಾನೆ ಮುಸ್ಸಂಜೆ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಾಸವಿ ಕ್ಲಬ್ ಆಯೋಜನೆ ಮಾಡುವ ಸಮಾಜ ನೇವಾ ಕಾರ್ಯದಲ್ಲಿ ‘ಮುಂಜಾನೆ ಮುಸ್ಸಂಜೆ’ ಎಂಬ ಕಾರ್ಯಕ್ರಮ ಎಲ್ಲಡೇ ನಿರ್ದಿಷ್ಟ ೨ ದಿನದಲ್ಲಿ ಜರಗುತ್ತಿದೆ. ಈ ಕಾರ್ಯಕ್ರಮದಲ್ಲಿ ದಾನಿಗಳ ಸಹಕಾರದಲ್ಲಿ ೪ ಕೋಟಿ ರು. ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದರು.
ಇದೇ ರೀತಿ ದೇಶದ್ಯಾಂತ ಒಂದೇ ದಿನ ರಕ್ತದಾನ ಶಿಬಿರ ಆಯೋಜನೆ ಮಾಡುವ ಪ್ರಸ್ತಾಪವಿದ್ದು, ಗರಿಷ್ಠ ಪ್ರಮಾಣದಲ್ಲಿ ರಕ್ತದಾನ ಮಾಡುವ ಮೂಲಕ ಆರ್‍ಯವೈಶ್ಯ ಜನಾಂಗದ ಸೇವಾ ಮನೋಭಾವದ ಹಿರಿಮೆಯನ್ನು ತಿಳಿಸಬೇಕಿದೆ ಎಂದರು.ನೇತ್ರದಾನ, ಅಂಗಾಂಗ ದಾನದ ಅರಿವು ಹಾಗೂ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಗೃಹ ರಕ್ಷಕ ದಳದ ಪ್ಲಾಟೂನ್ ಕಮಾಂಡರ್ ಪ್ರದೀಪ್ ಕುಮಾರ್ ಹಾಗೂ ಗೃಹ ರಕ್ಷಕ ಸಿಬ್ಬಂದಿಯನ್ನು ಗೌರವಿಸಲಾಯಿತು. ೫೦ ವಿದ್ಯಾರ್ಥಿಗಳಿಗೆ ಲೇಖನ ಸಾಮಾಗ್ರಿ ಹಾಗೂ ನೋಟ್ ಪುಸ್ತಕಗಳು, ಬೀದಿ ಬದಿಯ ೧೦ ವ್ಯಾಪಾರಿಗಳಿಗೆ ಛತ್ರಿಗಳು ಹಾಗೂ ಒಬ್ಬರಿಗೆ ತಳ್ಳುವ ಗಾಡಿ ನೀಡಲಾಯಿತು.
ವಾಸವಿ ಕ್ಲಬ್ ಅಧ್ಯಕ್ಷ ರೋಹಿತ್ ಎಸ್., ಕಾರ್ಯದರ್ಶಿ ಹೇಮ ನಾಗೇಂದ್ರ, ಖಜಾಂಚಿ ಮಂಜುನಾಥ್ ಗುಪ್ತ., ನಿಕಟಪೂರ್ವ ಅಧ್ಯಕ್ಷ ರಾಮಚಂದ್ರಗುಪ್ತ, ವಾಸವಿ ಕ್ಲಬ್ ವಲಯಾಧ್ಯಕ್ಷ ಭಾಸ್ಕರ್ ರಾವ್, ಬೆಂಗಳೂರಿನ ಯಶವಂತಪುರದ ವಾಸವಿ ಕ್ಲಬ್ ಸದಸ್ಯರು, ಎಸ್.ಗೋಕುಲ್, ಎ.ಆರ್.ರವಿಕುಮಾರ್, ನಟರಾಜ್, ವಾಸವಿ ಯುತ್ ಕ್ಲಬ್‌ನ ಸದಸ್ಯರಾದ ಸ್ಪಂದನ್, ಅಶ್ವಿಜ್, ಸಚಿನ್, ವಿಶ್ವಾಸ್ ಇದ್ದರು.