ಆರ್ಯವೈಶ್ಯರು ಶಾಂತಿ, ತ್ಯಾಗದ ಪ್ರತಿರೂಪ

| Published : May 10 2025, 01:02 AM IST

ಆರ್ಯವೈಶ್ಯರು ಶಾಂತಿ, ತ್ಯಾಗದ ಪ್ರತಿರೂಪ
Share this Article
  • FB
  • TW
  • Linkdin
  • Email

ಸಾರಾಂಶ

Arya Vaishyas are the embodiment of peace and sacrifice.

- ಸಮಾಜದ ತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಅನ್ನ ಸಂತರ್ಪಣಾ ಕಾರ್ಯಕ್ರಮದಲ್ಲಿ ರಾಘವೆಂದ್ರ ಬಾದಾಮಿ ಅಭಿಮತ ಕನ್ನಡಪ್ರಭ ವಾರ್ತೆ ಯಾದಗಿರಿ

ಆರ್ಯ ವೈಶ್ಯ ಸಮಾಜವು ಅಹಿಂಸೆ, ತ್ಯಾಗವನ್ನು ನಂಬಿದ ಜನಾಂಗವಾಗಿದೆ, ಈ ಸಮಾಜದಲ್ಲಿ ಜನಿಸಿದ ನಾವುಗಳು ಧನ್ಯರು. ಪ್ರತಿಯೊಂದು ಜೀವಿಗಳಿಗೆ ಸುಖ, ಶಾಂತಿ, ಸಮೃದ್ಧಿ ದಯಪಾಲಿಸಲೆಂದು ನಾವುಗಳು ಭಕ್ತಿಪೂರ್ವಕವಾಗಿ ಪ್ರಾರ್ಥಿಸೊಣ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾದ ನಿರ್ದೇಶಕ ರಾಘವೆಂದ್ರ ಬಾದಾಮಿ ಅಭಿಪ್ರಾಯಪಟ್ಟರು.

ಸೈದಾಪುರ ಪಟ್ಟಣದಲ್ಲಿ ಶ್ರಿ ವಾಸವಿ ಜಯಂತಿ ಪ್ರಯುಕ್ತ ಬಾದಾಮಿ ಪರಿವಾರ ಏರ್ಪಡಿಸಿದ ಆರ್ಯವೈಶ್ಯ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನ ಮತ್ತು ಸಾರ್ವಜನಿಕ ಅನ್ನ ಸಂತರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಗೌರವಕ್ಕಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಆದಿಶಕ್ತಿ ವಾಸವಿ ಕನ್ನಿಕಾ ಪರಮೆಶ್ವರಿ ದೇವಿ ಮನುಕುಲಕ್ಕೆ ಶಾಂತಿ ಮತ್ತು ತ್ಯಾಗದ ಪ್ರತಿರೂಪವಾಗಿದಾಳೆ. ಯುದ್ಧ ಮತ್ತು ರಕ್ತಪಾತವನ್ನು ತಡೆಗಟ್ಟಿ ಮನು ಕುಲಕ್ಕೆ ಶಾಂತಿ ಸಂದೇಶವನ್ನು ನೀಡುವ ಸಲುವಾಗಿ ಲೌಕಿಕ ಜೀವನವನ್ನು ತ್ಯಾಗ ಮಾಡಿ ದೇವತಾ ಸ್ಥಾನಮಾನ ಪಡೆದ ಅವತಾರಿಣಿ ಕನ್ನಿಕಾಪರಮೇಶ್ವರಿ ವಾಸವಿ ದೇವಿ. ಅವರ ಪುಣ್ಯಕಾರ್ಯಗಳನ್ನು ನಾವುಗಳು ಪಾಲಿಸಬೇಕು ಎಂದು ಮನವಿ ಮಾಡಿದರು. ಇದಕ್ಕೂ ಮುಂಚಿತವಾಗಿ ಆರ್ಯವೈಶ್ಯ ಸಮಾಜದ ಮಕ್ಕಳು ಹತ್ತನೇ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಪ್ರತಿಭವಾಂತ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತ್ತು. ನಂತರ ಸಾರ್ವಜನಿಕರಿಗೆ ಪ್ರಸಾದವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಈಶ್ವರಯ್ಯ ಬಾದಮಿ, ನ್ಯಾಯವಾದಿ ಸಂತೋಷ, ವಿನೋದ, ವೆಂಕಟೇಶ, ನಕೂಲ್ ಬಾದಾಮಿ, ಅನ್ವೀತಾ ಬಾದಾಮಿ, ಸಾಬಣ್ಣ, ಶ್ರೀನಿವಾಸ ಬೈರಂಕೊಂಡಿ, ಪರಶುರಾಮ, ಶಮೀನಾ, ಬಸವಲಿಂಗಮ್ಮ, ಶಾಂತಬಾಯಿ, ಪೂಜ, ಮೋಧಿನಾ, ಮರೇಮ್ಮ, ಮಲ್ಲಿಕಾರ್ಜುನ, ಸೇರಿದಂತೆ ಇತರರಿದ್ದರು.

-

ಕೋಟ್‌-1 : ನಮ್ಮ ಆರ್ಯವೈಶ್ಯ ಸಮಾಜವು ನಮ್ಮ ರಾಜ್ಯಕ್ಕೆ ಮತ್ತು ದೇಶದ ಆರ್ಥಿಕತೆಗೆ ತನ್ನದೆ ಕೊಡುಗೆ ನೀಡುತ ಬಂದಿದೆ, ಸರಕಾರಗಳು ನಮ್ಮ ಸಮಾಜ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಪಡೆಯುವುದಕ್ಕೆ ಅನುಕೂಲ ಮಾಡಿಕೊಡಬೇಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಮ್ಮ ಸಮಾಜದ ಜನರು ಇನ್ನೂ ಆರ್ಥಿಕವಾಗಿ ಹಿಂದುಳಿದಿದ್ದಾರೆ ಅವರಿಗೆ ಸರಕಾರದ ಯೋಜನೆಗಳನ್ನು ಮುಟ್ಟಿಸುವ ಕಾರ್ಯ ಮಾಡಬೇಕು. : ರಾಘವೇಂದ್ರ ಬಾದಾಮಿ, ನಿರ್ದೇಶಕರು ಕರ್ನಾಟಕ ರಾಜ್ಯ ಆರ್ಯವೈಶ್ಯ ಮಹಾಸಭಾ ಬೆಂಗಳೂರು.

-

ಕೋಟ್‌-2 : ನಮ್ಮ ಆರ್ಯವೈಶ್ಯ ಸಮಾಜದ ಸಂಘ ಸಂಸ್ಥೆಗಳು ಮತ್ತು ಮುಖಂಡರು ಸೇರಿ ಇಂದು ನಮ್ಮ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದ್ದಾರೆ. ಇದು ನಮ್ಮಗೆ ಮುಂದಿನ ಸಾಧನೆಗೆ ಪ್ರೇರಣೆಯಾಗಲಿದೆ ಹಾಗೂ ನಾವು ಮುಂದೆ ಸಮಾಜಕ್ಕೆ ಕೊಡುಗೆ ನೀಡಲು ಪ್ರಯತ್ನಿಸುತ್ತೇವೆ. : ವರುಣ್ ಗುಜ್ಜ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ.

-

9ವೈಡಿಆರ್‌9 : ಸೈದಾಪುರ ಪಟ್ಟಣದಲ್ಲಿ ವಾಸವಿ ಜಯಂತಿ ನಿಮಿತ್ತ ಬಾದಮಿ ಪರಿವಾರದಿಂದ ಆರ್ಯವೈಶ್ಯ ಸಮಾಜದ ಪ್ರತಿಭವಾಂತ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

---000----