ಆರ್ಯಿಕಾ ದರ್ಶನ ಭೂಷಣಮತಿ ಮಾತಾಜಿ ಅಂತಿಮ ಅಗ್ನಿಸಂಸ್ಕಾರ

| Published : Oct 22 2025, 01:03 AM IST

ಆರ್ಯಿಕಾ ದರ್ಶನ ಭೂಷಣಮತಿ ಮಾತಾಜಿ ಅಂತಿಮ ಅಗ್ನಿಸಂಸ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಸೋಮವಾರ ಸಲ್ಲೇಖನ ಸಮಾಧಿ ಮರಣ ಹೊಂದಿದ್ದ ಮಂಗಳವಾರ ಆರ್ಯಿಕಾ ಶ್ರೀ 105 ದರ್ಶನಮತಿ ಮಾತಾಜಿ ಅವರನ್ನು ಮಂಗಳವಾರ ಬೆಳಗ್ಗೆ 9ಕ್ಕೆ ಭದ್ರಗಿರಿ ಬೆಟ್ಟದಲ್ಲಿ ಅವರಿಗೆ ಜೈನ ಧರ್ಮದ ವಿಧಿವಿಧಾನದಂತೆ ಅಂತಿಮ ಅಗ್ನಿಸಂಸ್ಕಾರ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತಾಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಸೋಮವಾರ ಸಲ್ಲೇಖನ ಸಮಾಧಿ ಮರಣ ಹೊಂದಿದ್ದ ಮಂಗಳವಾರ ಆರ್ಯಿಕಾ ಶ್ರೀ 105 ದರ್ಶನಮತಿ ಮಾತಾಜಿ ಅವರನ್ನು ಮಂಗಳವಾರ ಬೆಳಗ್ಗೆ 9ಕ್ಕೆ ಭದ್ರಗಿರಿ ಬೆಟ್ಟದಲ್ಲಿ ಅವರಿಗೆ ಜೈನ ಧರ್ಮದ ವಿಧಿವಿಧಾನದಂತೆ ಅಂತಿಮ ಅಗ್ನಿಸಂಸ್ಕಾರ ಮಾಡಲಾಯಿತು. ಅಂತಿಮ ಯಾತ್ರೆಯಲ್ಲಿ ಸಾವಿರಾರು ಶ್ರಾವಕ ಶ್ರಾವಕಿಯರು ಭಾಗಿಯಾಗಿ ಅವರ ಆತ್ಮಕ್ಕೆ ಮಹಾವೀರ ಭಗವಾನರು ಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು. ಅನೇಕ ರಾಜಕೀಯ ಮುಖಂಡರು, ಅನ್ಯಧರ್ಮಿಯ ಮುಖಂಡರು ಭಾಗವಹಿಸಿದ್ದರು.

೧೨೦ ದಿನಗಳ ಹಿಂದೆ ಆಚಾರ್ಯ ಶ್ರೀ ೧೦೮ ಕುಲರತ್ನಭೂಷಣ ಮಹಾರಾಜ್‌ ರಿಂದ ಸಲ್ಲೇಖನ ವ್ರತ ಸ್ವೀಕರಿಸಿದ್ದ ಆರ್ಯಿಕಾ ಮಾತಾಜಿಯವರು ಅ.೧೮ರಂದು ಬೆಳಗ್ಗೆ ಅವರ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಸ್ವಯಂ ಪ್ರೇರಿತವಾಗಿ ಆಚಾರ್ಯ ಶ್ರೀ ಕುಲರತ್ನಭೂಷಣ ಮಹಾರಾಜರಿಂದ ಅ.೧೯ರಂದೇ ಯಮಸಲ್ಲೇಖನ ವೃತ ಸ್ವಿಕರಿಸಿದ್ದರು. ಜೀವಿತಾವಧಿಯ ಕೊನೆ ಕ್ಷಣಗಳತ್ತ ಅವರ ಪಯಣ ಸಾಗಿತ್ತು. ಪ್ರತ್ಯಕ್ಷವಾಗಿ ಆತ್ಮ ದೇಹವನ್ನು ಬಿಟ್ಟು ಹೋಗುವಾಗ ಈ ಕಾಯ ಹೇಗಿರುತ್ತದೆ ಎಂಬುದನ್ನು ನೋಡಲು ಸಾವಿರಾರು ಜೈನ ಧರ್ಮಿಯರು ಹಾಗು ಅನ್ಯಧರ್ಮಿಯರೂ ಸಾಗರೋಪಾದಿಯಲ್ಲಿ ನೆರೆದಿದ್ದರು.

ಸಾವಿರಾರು ಜನರ ಎದುರೇ ದರ್ಶನಭೂಷಣಮತಿ ಮಾತಾಜಿ ಅ.೨೦ ಸೂರ್ಯಾಸ್ತ ಸಮಯ ಮುಗಿಯುತ್ತಿದ್ದಂತೆ ಸಂಜೆ ೬.೪೮ಕ್ಕೆ ಉಸಿರಾಟ ನಿಂತು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು. ಆ ಕ್ಷಣ ಸಾವಿರಾರು ಭಕ್ತರ ಕಣ್ಣಂಚಿನ ಕಂಬನಿ ತರಿಸಿತು. ಜಿನೈಕ್ಯ ಕಾಲದಲ್ಲಿ ಅವರಿಗೆ ೧೦೩ ವರ್ಷವಾಗಿತ್ತು.