ಸೂರ್ಯ-ಚಂದ್ರರಿರುವವರೆಗೂ ಶಿವಾಜಿ ಸಾಧನೆ ಶಾಶ್ವತ: ಅನಿಲ ಬಡಿಗೇರ

| Published : Feb 20 2025, 12:47 AM IST

ಸೂರ್ಯ-ಚಂದ್ರರಿರುವವರೆಗೂ ಶಿವಾಜಿ ಸಾಧನೆ ಶಾಶ್ವತ: ಅನಿಲ ಬಡಿಗೇರ
Share this Article
  • FB
  • TW
  • Linkdin
  • Email

ಸಾರಾಂಶ

ಇತಿಹಾಸ ಕಂಡ ವೀರಾಧಿ ವೀರರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಪ್ರಮುಖರು. ಶಿವಾಜಿ ಹುಟ್ಟು ಹೋರಾಟಗಾರರಾಗಿದ್ದರು. ಶಿವಾಜಿ ಅವರಿಗಿದ್ದ ನಾಯಕತ್ವ ಗುಣ, ಧೈರ್ಯ ನಿಜಕ್ಕೂ ಮೆಚ್ಚುವಂತಹದ್ದು.

ಶಿರಹಟ್ಟಿ:ಭಾರತದಲ್ಲಿ ಅನೇಕ ರಾಜ- ಮಹಾರಾಜರು ಬಂದು ಹೋಗಿದ್ದಾರೆ. ಆದರೆ ಹಿಂದೂ ಸಮಾಜವನ್ನು ಪುನರ್ ಸ್ಥಾಪನೆ ಮಾಡಿದ ಛತ್ರಪತಿ ಶಿವಾಜಿ ಮಹಾರಾಜರನ್ನು ಎಂದಿಗೂ ಮರೆಯಬಾರದು. ಭಾರತೀಯ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ ಪೌರಾಣಿಕ ಮರಾಠ ರಾಜರಾಗಿದ್ದರು. ಸೂರ್ಯಚಂದ್ರರಿರುವವರೆಗೂ ಅವರ ಸಾಧನೆ ಶಾಶ್ವತ ಎಂದು ತಹಸೀಲ್ದಾರ ಅನಿಲ ಬಡಿಗೇರ ಹೇಳಿದರು.

ಬುಧವಾರ ತಹಸೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಇತಿಹಾಸ ಕಂಡ ವೀರಾಧಿ ವೀರರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಪ್ರಮುಖರು. ಶಿವಾಜಿ ಹುಟ್ಟು ಹೋರಾಟಗಾರರಾಗಿದ್ದರು. ಶಿವಾಜಿ ಅವರಿಗಿದ್ದ ನಾಯಕತ್ವ ಗುಣ, ಧೈರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದರು.

ಶಿವಾಜಿ ಮರಾಠಾ ಸಾಮ್ರಾಜ್ಯಕ್ಕಿಂತ ಹಿಂದೂಗಳ ಸಾಮ್ರಾಜ್ಯ ಕಟ್ಟಿದ ಇತಿಹಾಸಕಾರ. ಅವರ ಸಾಹಸಗಾಥೆ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಗಿತ್ತು. ಶಿವಾಜಿ ಮಹಾರಾಜರು ಹೊಂದಿದ್ದ ಹೋರಾಟ ಮನೋಭಾವ, ತೋರಿದ ಧೈರ್ಯ, ಶೌರ್ಯ ಯುವಕರಿಗೆ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.ಮರಾಠ ಸಮಾಜದ ತಾಲೂಕ ಅಧ್ಯಕ್ಷ ಶಂಕರ ಮರಾಠೆ ಮಾತನಾಡಿ, ರಾಷ್ಟವನ್ನು ಪರಕೀಯರ ಆಡಳಿತದಿಂದ ಮುಕ್ತಗೊಳಿಸಿ ರಕ್ಷಿಸುವಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾದುದಾಗಿದೆ. ಇಂತಹ ಮಹಾನ್ ವ್ಯಕ್ತಿಯು ಯಾವುದೇ ಒಂದು ಜನಾಂಗಕ್ಕೆ ಮಾತ್ರ ಸೀಮಿತಗೊಳ್ಳದೆ ರಾಷ್ಟ್ರನಾಯಕರಾಗಿ ಧರ್ಮ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿ ತ್ಯಾಗ, ಬಲಿದಾನದ ಪರಿಣಾಮವಾಗಿ ಇಂದು ಸಮಾಜದಲ್ಲಿ ಜನರು ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದರು.ಶಹಾಜಿ ಜೀಜಾಬಾಯಿಯವರ ಮಗನಾಗಿ ಜನಿಸಿದ ಛತ್ರಪತಿ ಶಿವಾಜಿ ಮರಾಠಾ ರಾಜ್ಯದ ಸ್ಥಾಪಕ. ರಾಷ್ಟçದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಶಿವಾಜಿಯವರ ಶ್ರಮ ಅವಿಸ್ಮರಣೀಯವಾಗಿದೆ. ಇಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಗೌರವ ಸಲ್ಲಿಸಿದಂತಾಗಲಿದೆ ಎಂದರು.ಶಿವಾಜಿಯದು ಅತ್ಯಂತ ಶಿಸ್ತುಬದ್ದ ವ್ಯಕ್ತಿತ್ವ. ಭಾರತ ಮಾತೆಯ ವೀರಪುತ್ರ. ದೈರ್ಯದ ಸಾಕಾರಮೂರ್ತಿ. ರಾಷ್ಟç ನಿರ್ಮಾಣದಲ್ಲಿ ಅವರ ಪಾತ್ರ ಇತಿಹಾಸದ ಪುಟದಲ್ಲಿ ಅಜರಾಮರವಾಗಿದೆ. ಶಿವಾಜಿಯ ಇತಿಹಾಸ ಅರಿಯುವುದು ಪ್ರತಿಯೊಬ್ಬ ಭಾರತಿಯನ ಕರ್ತವ್ಯ. ಮೊಘಲರು, ಸುಲ್ತಾನರು ಹಾಗೂ ಬ್ರಿಟಿಷರು ದೇಶ ಕೊಳ್ಳೆ ಹೊಡೆಯುವ ಸಂದಿಗ್ದ ಪರಿಸ್ಥಿತಿಯಲ್ಲಿ ಶಿವಾಜಿ ಸಾಮ್ರಾಜ್ಯವನ್ನು ಸ್ಥಾಪಿಸಿ ಉತ್ತಮ ಆಡಳಿತಗಾರನಾಗಿದ್ದನು ಎಂದರು.ಸಮಾಜದ ಮುಖಂಡರಾದ ಅನಿಲ ಮಾನೆ, ದೇವಪ್ಪ ಪವಾರ ಮಾತನಾಡಿ, ೧೭ನೇ ಶತಮಾನದಲ್ಲಿ ಭಾರತದಲ್ಲಿ ಅಶಾಂತಿ, ಅರಾಜಕತೆ ತಾಂಡವಾಡುತ್ತಿತ್ತು. ಬ್ರಿಟಿಷರು, ದೆಹಲಿ ಸುಲ್ತಾನರು, ಮೊಘಲರು ಭಾರತದಲ್ಲಿ ನೆಲೆಸಿ ಹಿಂದೂ ಧರ್ಮದ ವಿನಾಶವನ್ನು ಬಯಸುತ್ತಿದ್ದರು. ಈ ಸಂದರ್ಭದಲ್ಲಿ ಶಿವಾಜಿ ಮಾಡಿದ ಧರ್ಮ ರಕ್ಷಣೆ ಅಮೋಘ ಎಂದು ಸ್ಮರಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಕೆ.ಎ. ಬಳಿಗೇರ, ಎಂ.ಕೆ. ಲಮಾಣಿ, ನಜೀರ ಡಂಬಳ, ಅಶೋಕ ವರವಿ, ಶಹಾಜಿ ಕಧಮ, ಪ್ರಭಾಕರ ಗಾಯಕವಾಡ, ಉಮೇಶ ಶೇಳಕೆ, ವಿನೋದ ಪಾಟೀಲ ಸೇರಿ ಇತರರು ಇದ್ದರು.