ಸಾರಾಂಶ
ನಮಗೆ ನಷ್ಟವಾದ ಆರ್ಥಿಕ ಸೌಲಭ್ಯವನ್ನು ಕಮ್ಯಟೇಶನ್, ಗಳಿಕೆ ರಜೆ ನಗದೀಕರಣದ ಮೊತ್ತವನ್ನು 7ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನೀಡಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ರಜೆ ನಗದೀಕರಣ ಮೊತ್ತವನ್ನು 7ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯವರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.2022ರ ಜುಲೈ 1 ರಿಂದ 2024ರ ಜುಲೈ 31ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ 7ನೇ ವೇತನ ಆಯೋಗದ ಅನುಸಾರ ನಿವೃತ್ತಿ ಆರ್ಥಿಕ ಸೌಲಭ್ಯದಿಂದ ವಂಚಿತರನ್ನಾಗಿಸಿ, 6ನೇ ವೇತನ ಆಯೋಗದ ಅನುಸಾರ ನಿವೃತ್ತಿ ಆರ್ಥಿಕ ಸೌಲಭ್ಯ ನೀಡಲಾಗಿದೆ. ಹೀಗಾಗಿ, ನಮಗೆ ನಷ್ಟವಾದ ಆರ್ಥಿಕ ಸೌಲಭ್ಯವನ್ನು ಕಮ್ಯಟೇಶನ್, ಗಳಿಕೆ ರಜೆ ನಗದೀಕರಣದ ಮೊತ್ತವನ್ನು 7ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ವೇದಿಕೆಯ ಜಿಲ್ಲಾ ಮಹಾ ಪ್ರಧಾನ ಸಂಚಾಲಕ ಎಚ್.ಸಿ. ಮಾದಪ್ಪ, ಜಿಲ್ಲಾ ಸಂಚಾಲಕರಾದ ಮರಿಸ್ವಾಮಿ, ಎಸ್.ಸಿ. ರಾಜೇಂದ್ರಪ್ಪ, ನಾಗಯ್ಯ, ರಾಜಯ್ಯ, ರಾಜಮ್ಮ, ಶ್ರೀಕಂಠಮೂರ್ತಿ, ಸಣ್ಣಮಾದಪ್ಪ, ಸಣ್ಣಕರೀಗೌಡ ಮೊದಲಾದವರು ಇದ್ದರು.