ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೀಪಾವಳಿ ದೀವಟಿಗೆ ಉತ್ಸವಕ್ಕೆ ಸಕಲ ಸಿದ್ದತೆ

| Published : Oct 31 2024, 12:53 AM IST

ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೀಪಾವಳಿ ದೀವಟಿಗೆ ಉತ್ಸವಕ್ಕೆ ಸಕಲ ಸಿದ್ದತೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಟ್ಟ ಹತ್ತುವ ಸಾವಿರಾರು ಭಕ್ತರು ಶುಕ್ರವಾರ ಬೆಳಗಿನ ಜಾವ ಸಾವಿರಾರು ಭಕ್ತರು ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವನ್ನು ಹತ್ತುವುದು ಇಲ್ಲಿ ವಿಶೇಷ,

ಕನ್ನಡಪ್ರಭ ವಾರ್ತೆ ಬೆಟ್ಟದಪುರಗ್ರಾಮದ ಐತಿಹಾಸಿಕ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೀಪಾವಳಿ ದೀವಟಿಗೆ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಕಲ ಸಿದ್ಧತೆಗಳು ಭರದಿಂದ ಸಾಗಿದೆ. ತಲತಲಾಂತರದಿಂದಲೂ ಪ್ರತಿವರ್ಷ ಇಲ್ಲಿನ ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿರುವ ದೀವಟಿಗೆ ಉತ್ಸವ ಸಾವಿರಾರೂ ಭಕ್ತಾದಿಗಳಿಗೆ ಮನೆತನದ ಹಬ್ಬವಾಗಿದೆ.ಪಂಜಿನ ಮೆರವಣಿಗೆಯ ಉತ್ಸವ ಬೆಟ್ಟ ಹತ್ತುವ ಸಾವಿರಾರು ಭಕ್ತರು ಶುಕ್ರವಾರ ಬೆಳಗಿನ ಜಾವ ಸಾವಿರಾರು ಭಕ್ತರು ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವನ್ನು ಹತ್ತುವುದು ಇಲ್ಲಿ ವಿಶೇಷ, ಈಗಾಗಲೇ ಕಂದಾಯ ಇಲಾಖೆ ಹಾಗೂ ವಿದ್ಯುತ್ ಇಲಾಖೆ ಭಕ್ತಾದಿಗಳಿಗೆ ಅನುಕೂಲಕ್ಕಾಗಿ ಹಲವು ಬಗೆಯ ಸ್ವಚ್ಛತಾ ಕಾರ್ಯಕ್ರಮ ಬೆಟ್ಟಕ್ಕೆ ವಿದ್ಯುತ್ ಲೈಕ್ ಅಳವಡಿಸುವ ಕಾರ್ಯಭರದಿಂದ ಸಾಗಿದ್ದು, ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ದೀಪಗಳನ್ನು ಅಳವಡಿಸಲಾಗಿದೆ. ಭಕ್ತಾದಿಗಳು ಬೆಟ್ಟ ಹತ್ತುವಾಗ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಕೊಂಡಯ್ಯದೆ ಪರಿಸರವನ್ನು ಸ್ವಚ್ಛತೆಯಿಂದ ಇರುವಂತೆ ಮನವಿ ಮಾಡಲಾಗಿದೆ. ನ. 1ರ ಶುಕ್ರವಾರ ರಾತ್ರಿ ಗ್ರಾಮದ ಹೃದಯಭಾಗದ ಶ್ರಿ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಇರುವ ಬೆಳ್ಳಿ ಬಸಪ್ಪ, ಗಣಪತಿ ಮತ್ತು ಭ್ರಮರಾಂಭ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಉತ್ಸವ ಮೂರ್ತಿಗಳನ್ನು ಬೆಟ್ಟದ ಮೇಲಿನ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ತೆಗೆದುಕೊಂಡ ಹೋಗಲಾಗುತ್ತದೆ.ನ. 2ರ ಶನಿವಾರ ಬೆಳಗ್ಗೆ ಬೆಟ್ಟದ ದೇವಸ್ಥಾನದಲ್ಲಿ ಉತ್ಸವ ಮೂರ್ತಿಗಳಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜೆ ಕೈಂಕರ್ಯಗಳು ನಡೆಯಲಿವೆ. ನಂತರ ಉತ್ಸವ ಮೂರ್ತಿಗಳ ಪಂಚಿನ ಮೆರವಣಿಗೆ ಆರಂಭವಾಗಲಿದೆ. ಅಂದು ರಾತ್ರಿ ಸುಮಾರು 12 ರವರೆಗೆ ಉತ್ಸವ ನಡೆಯಲಿದೆ.ಭಕ್ತರು ತಮ್ಮ ಮನೆಯಲ್ಲಿಯೇ ಸಿದ್ಧಪಡಿಸಿ ತಂದ ಪಂಜಿನೊಂದಿಗೆ (ದೀವಟಿಗೆ) ಬೆಟ್ಟದಪುರ, ಬೆಟ್ಟದತುಂಗ, ಹರದೂರು, ಡಿ.ಜಿ ಕೊಪ್ಪಲು, ಬಾರಸೇ, ಕುಡುಕೂರು, ಕೂರಗಲ್ಲು ಸೇರಿದಂತೆ ಬೆಟ್ಟದ ತಪ್ಪಲಿನ ಗ್ರಾಮಗಳಲ್ಲಿ ರಾತ್ರಿಯೀಡಿ ಮೆರವಣಿಗೆ ಮಾಡಿ ಬಳಿಕ ಮೂಲ ಸ್ಥಾನವಾದ ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ತರುತ್ತಾರೆ. ಈ ವೇಳೆ ಬೆಟ್ಟದ ಸುತ್ತಮುತ್ತಲಿನ ಗ್ರಾಮದಲ್ಲಿ ಪ್ರತಿ ಮನೆಗಳ ಮುಂದೆ ಹಸಿರು ಚಪ್ಪರ ಹಾಕಿರುತ್ತಾರೆ. ಬಳಿಕ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ. ಮೆರವಣಿಗೆ ವೇಳೆ ಬೆಟ್ಟದತುಂಗ ಹಾಗೂ ಕುಡುಕೂರು ಗ್ರಾಮಗಳಲ್ಲಿ ಜಾತ್ರೆ ರೀತಿಯಲ್ಲಿ ಹಬ್ಬವು ವಿಜೃಂಭಣೆಯಿಂದ ನಡೆಯುತ್ತಿದೆ. ಹಿಂದಿನ ಕಾಲದಿಂದಲ್ಲೂ ದೇವರ ಮೆರವಣಿಗೆ ಉತ್ಸವವು ಗ್ರಾಮದ ಉಪ್ಪಾರ ಸಮುದಾಯದವರು ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯೂ ಇವರ ನೇತೃತ್ವದಲ್ಲಿ ನಡೆಯಲಿದೆ. ಉತ್ಸವಕ್ಕೆ ಆಗಮಿಸುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಾರೆ.ತಹಸೀಲ್ದಾರ್ ನಿಸರ್ಗ ಪ್ರಿಯಾ. ಬೆಟ್ಟದಪುರ ಎಸ್.ಐ ಶಿವಶಂಕರ್, ಉಪ ತಹಸೀಲ್ದಾರ್ ಶಶಿಧರ್, ವಿದ್ಯುತ್ ಇಲಾಖೆಯ ಪ್ರಶಾಂತ್, ವಿ.ಎ. ಅಯ್ಯಪ್ಪ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.----------------